ETV Bharat / sports

W,W,W,W,wd,1,W.. ಒಂದೇ ಓವರ್​​ನಲ್ಲಿ ಹ್ಯಾಟ್ರಿಕ್​ ಸೇರಿ 5 ವಿಕೆಟ್​ ಕಿತ್ತು ಮಲಿಂಗಾ ದಾಖಲೆ ಬ್ರೇಕ್ ಮಾಡಿದ ಮಿಥುನ್​​​! - ಕರ್ನಾಟಕದ ಅಭಿಮನ್ಯು ಮಿಥುನ್

ಹರಿಯಾಣ ತಂಡದ ವಿರುದ್ಧ ನಡೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಟಿ-20 ಸೆಮಿ ಫೈನಲ್ ಪಂದ್ಯದಲ್ಲಿ ಅಭಿಮನ್ಯು ಮಿಥುನ್​ ಚುಟುಕು ಕ್ರಿಕೆಟ್​​ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

Abhimanyu Mithun
ಅಭಿಮನ್ಯು ಮಿಥುನ್​
author img

By

Published : Nov 29, 2019, 7:49 PM IST

Updated : Nov 29, 2019, 8:34 PM IST

ಸೂರತ್​​​: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಟಿ-20 ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ಮೂಲಕ ಚುಟುಕು ಕ್ರಿಕೆಟ್​​ನಲ್ಲಿ ಹೊಸ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

  • ' class='align-text-top noRightClick twitterSection' data=''>

ಸೂರತ್​ನ ಮೈದಾನದಲ್ಲಿ ನಡೆದ ಸೆಮಿಫೈನಲ್​​ನ ಕೊನೆ ಓವರ್​​ನಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ. ಮೊದಲ ಮೂರು ಓವರ್​ಗಳಲ್ಲಿ 37ರನ್​​ ನೀಡಿ ಯಾವುದೇ ವಿಕೆಟ್​ ಪಡೆದುಕೊಳ್ಳಲು ವಿಫಲವಾಗಿದ್ದ ಮಿಥುನ್​ ಕೊನೆ ಓವರ್​​ನಲ್ಲಿ ಕೇವಲ 2ರನ್​ ನೀಡಿ ಬರೋಬ್ಬರಿ ಐದು ವಿಕೆಟ್​ ಪಡೆದುಕೊಂಡಿದ್ದಾರೆ. ಮೊದಲ ನಾಲ್ಕು ಎಸೆತಗಳಲ್ಲಿ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಪಡೆದರೆ ಮುಂದಿನ ಎಸೆತದಲ್ಲಿ ವೈಡ್ ಮತ್ತು ಒಂಟಿ ರನ್ ತೆಗೆಯಲಾಯಿತು. ಅಂತಿಮ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಹೀಗಾಗಿ ಕೊನೆ ಓವರ್​​ನಲ್ಲಿ ಮಿಥುನ್​ ಹ್ಯಾಟ್ರಿಕ್​ ಸೇರಿ ಐದು ವಿಕೆಟ್​ ಪಡೆದು ಹೊಸ ದಾಖಲೆ ನಿರ್ಮಾಣ ಮಾಡಿದರು.

ಹರಿಯಾಣ ತಂಡದ ಹಿಮಾಂಶು ರಾಣಾ(61ರನ್​) ಸೇರಿದಂತೆ ರಾಹುಲ್ ತಿವಾಟಿಯಾ, ಸುಮಿತ್ ಕುಮಾರ್, ಅಮಿತ್ ಮಿಶ್ರಾ, ಜಿತೇಶ್ ಸರೋಹಾ ಒಂದೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದವರು.

ಈ ಮೂಲಕ ಶ್ರೀಲಂಕಾದ ಲಸಿತ್​ ಮಲಿಂಗಾ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಪಂದ್ಯದಲ್ಲಿ ನಿರ್ಮಿಸಿದ್ದ ದಾಖಲೆ ಬ್ರೇಕ್​ ಮಾಡಿದರು. ಈ ಪಂದ್ಯದಲ್ಲಿ ಮಲಿಂಗಾ ಒಂದೇ ಓವರ್​​ನಲ್ಲಿ 4ವಿಕೆಟ್​ ಪಡೆದುಕೊಂಡಿದ್ದರು. ಆದರೆ ಇದೀಗ ಮಿಥುನ್​ 5ವಿಕೆಟ್​ ಪಡೆದುಕೊಂಡಿದ್ದಾರೆ.

Intro:Body:

W,W,W,W,wd,1,W... ಒಂದೇ ಓವರ್​​ನಲ್ಲಿ ಐದು ವಿಕೆಟ್​ ಕಿತ್ತು ಮಲಿಂಗಾ ದಾಖಲೆ ಬ್ರೇಕ್​ ಮಾಡಿದ ಕನ್ನಡಿಗ! 

ಸೂರತ್​​​: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಟಿ-20 ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ವಿಶ್ವದಾಖಲೆ ನಿರ್ಮಾಣ ಮಾಡಿದ್ದು, ಟಿ-20 ಕ್ರಿಕೆಟ್​​ನಲ್ಲಿ ಮೂಡಿ ಬಂದಿರುವ ಹೊಸ ದಾಖಲೆ ಇದಾಗಿದೆ.

ಸೂರತ್​ನ ಮೈದಾನದಲ್ಲಿ ನಡೆದ ಸೆಮಿಫೈನಲ್​​ನ ಕೊನೆ ಓವರ್​​ನಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ. ಮೊದಲ ಮೂರು ಓವರ್​ಗಳಲ್ಲಿ 37ರನ್​​ ನೀಡಿ ಯಾವುದೇ ವಿಕೆಟ್​ ಪಡೆದುಕೊಳ್ಳಲು ವಿಫಲವಾಗಿದ್ದ ಮಿಥುನ್​ ಕೊನೆ ಓವರ್​​ನಲ್ಲಿ ಕೇವಲ 2ರನ್​ ನೀಡಿ ಬರೋಬ್ಬರಿ ಐದು ವಿಕೆಟ್​ ಪಡೆದುಕೊಂಡಿದ್ದಾರೆ. ಮೊದಲ ನಾಲ್ಕು ಎಸೆತಗಳಲ್ಲಿ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಪಡೆದರೆ ಮುಂದಿನ ಎಸೆತದಲ್ಲಿ ವೈಡ್ ಮತ್ತು ಒಂಟಿ ರನ್ ತೆಗೆಯಲಾಯಿತು. ಅಂತಿಮ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಹೀಗಾಗಿ ಕೊಲೆ ಓವರ್​​ನಲ್ಲಿ ಮಿಥುನ್​ ಹ್ಯಾಟ್ರಿಕ್​ ಸೇರಿ ಐದು ವಿಕೆಟ್​ ಪಡೆದು ಹೊಸ ದಾಖಲೆ ನಿರ್ಮಾಣ ಮಾಡಿದರು.

ಹರಿಯಾಣ ತಂಡದ ಹಿಮಾಂಶು ರಾಣಾ(61ರನ್​) ಸೇರಿದಂತೆ ರಾಹುಲ್ ತಿವಾಟಿಯಾ, ಸುಮಿತ್ ಕುಮಾರ್, ಅಮಿತ್ ಮಿಶ್ರಾ, ಜಿತೇಶ್ ಸರೋಹಾ ಒಂದೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದವರು.

ಈ ಮೂಲಕ ಶ್ರೀಲಂಕಾದ ಲಸಿತ್​ ಮಲಿಂಗಾ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಪಂದ್ಯದಲ್ಲಿ ನಿರ್ಮಿಸಿದ್ದ ದಾಖಲೆ ಬ್ರೇಕ್​ ಮಾಡಿದರು. ಈ ಪಂದ್ಯದಲ್ಲಿ ಮಲಿಂಗಾ ಒಂದೇ ಓವರ್​​ನಲ್ಲಿ 4ವಿಕೆಟ್​ ಪಡೆದುಕೊಂಡಿದ್ದರು. ಆದರೆ ಇದೀಗ ಮಿಥುನ್​ 5ವಿಕೆಟ್​ ಪಡೆದುಕೊಂಡಿದ್ದಾರೆ. 

Conclusion:
Last Updated : Nov 29, 2019, 8:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.