ETV Bharat / sports

ಕೊಹ್ಲಿಯನ್ನು ಟೆನ್ನಿಸ್​ ದಿಗ್ಗಜ ಫೆಡರರ್​ಗೆ ಹೋಲಿಸಿ, ಸ್ಮಿತ್​ಗಿಂತ ಹೇಗೆ ಭಿನ್ನ ಎಂದು ವಿವರಿಸಿದ ಎಬಿಡಿ.. - Rafel nadal

ಜಿಂಬಾಬ್ವೆಯ ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಪೊಮ್ಮಿ ಎಂಬಂಗ್ವಾ ಜೊತೆ ನಡೆಸಿದ ಇನ್‌ಸ್ಟಾಗ್ರಾಮ್​ ಸಂವಾದದ ವೇಳೆ ವಿರಾಟ್​ ಸಹಜವಾಗಿ ಹಾಗೂ ತುಂಬಾ ಸುಲಭವಾಗಿ ರನ್​ಗಳಿಸುವ ಕೌಶಲ್ಯ ಹೊಂದಿದ್ದಾರೆ. ಹೀಗಾಗಿ ಅವರು ಟೆನ್ನಿಸ್​ ದಂತಕತೆ ರೋಜರ್​ ಫೆಡರರ್​ ಇದ್ದಂತೆ ಎಂದು ಮಿಸ್ಟರ್​ 360 ಕೊಹ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ-ಎಬಿಡಿ
ವಿರಾಟ್​ ಕೊಹ್ಲಿ-ಎಬಿಡಿ
author img

By

Published : May 12, 2020, 11:33 AM IST

Updated : May 12, 2020, 12:29 PM IST

ನವದೆಹಲಿ : ಐಪಿಎಲ್​ನ ಸೂಪರ್​ ಜೋಡಿಯಾಗಿರುವ ಎಬಿಡಿ ಮತ್ತು ವಿರಾಟ್​ ಕೊಹ್ಲಿ ಕಳೆದ 9 ವರ್ಷಗಳಿಂದ ಆರ್​ಸಿಬಿ ತಂಡದ ಭಾಗವಾಗಿದ್ದಾರೆ. ಇವರು ತಂಡದಲ್ಲಿ ಕೇವಲ ಸಹ ಆಟಗಾರರಾಗಿರುವುದಕ್ಕಿಂತಲೂ ವೈಯಕ್ತಿಕವಾಗಿ ಉತ್ತಮ ಸ್ನೇಹಿತರಾಗಿದ್ದಾರೆ.

ಕಳೆದ ಒಂಬತ್ತು ಸೀಸನ್​ಗಳಿಂದ ಕೊಹ್ಲಿ ಆಟವನ್ನು ಗಮನಿಸುತ್ತಿರುವ ಎಬಿಡಿ, ಕೊಹ್ಲಿಯನ್ನು ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​ಗೆ ಹೋಲಿಕೆ ಮಾಡಿದ್ದಾರೆ.

ಜಿಂಬಾಬ್ವೆಯ ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಪೊಮ್ಮಿ ಎಂಬಂಗ್ವಾ ಜೊತೆ ನಡೆಸಿದ ಇನ್‌ಸ್ಟಾಗ್ರಾಮ್​ ಸಂವಾದದ ವೇಳೆ ವಿರಾಟ್​ ಸಹಜವಾಗಿ ಹಾಗೂ ತುಂಬಾ ಸುಲಭವಾಗಿ ರನ್​ಗಳಿಸುವ ಕೌಶಲ್ಯ ಹೊಂದಿದ್ದಾರೆ. ಹೀಗಾಗಿ ಅವರು ಟೆನ್ನಿಸ್​ ದಂತಕತೆ ರೋಜರ್​ ಫೆಡರರ್​ ಇದ್ದಂತೆ ಎಂದು ಮಿಸ್ಟರ್​ 360 ಕೊಹ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ.

36ರ ವಯಸ್ಸಿನ ಎಬಿಡಿ ಕೊಹ್ಲಿಗೆ ಪ್ರತಿಸ್ಪರ್ಧಿಯಾಗಿರುವ ಆಸ್ಟ್ರೇಲಿಯಾ ಸ್ಟಿವ್​ ಸ್ಮಿತ್​ರನ್ನು ಸ್ಪೇನ್​ನ​ ರಾಫೆಲ್​ ನಡಾಲ್​ಗೆ ಹೋಲಿಕೆ ಮಾಡಿದ್ದಾರೆ. ಕೊಹ್ಲಿ ನೈಸರ್ಗಿಕವಾಗಿ ಚೆಂಡನ್ನು ದಂಡಿಸುತ್ತಾರೆ. ಆದರೆ, ಸ್ಮಿತ್​ ಮಾನಸಿಕವಾಗಿ ಹೆಚ್ಚು ಬಲಶಾಲಿಯಾಗಿದ್ದಾರೆ. ಅವರು ನಡಾಲ್​ ಇದ್ದಂತೆ ಎಂದು ಹೋಲಿಕೆ ಮಾಡಿದ್ದಾರೆ.

ಮಾನಸಿಕವಾಗಿ ಪ್ರಬಲರಾಗಿರುವ ಸ್ಮಿತ್​ ರನ್ ಗಳಿಸಲು ಸುಲಭ ದಾರಿಯನ್ನು ಕಂಡುಕೊಳ್ಳುತ್ತಾರೆ. ಆದರೆ, ಕೊಹ್ಲಿ ತಮ್ಮ ಸ್ವಾಭಾವಿಕ ಆಟದಿಂದ ವಿಶ್ವದ ಯಾವ ಪಿಚ್​ನಲ್ಲಾದರೂ ರನ್‌ ಗಳಿಸುವಲ್ಲಿ ಸಫಲರಾಗಿದ್ದಾರೆ. ಅವರೇ ನನ್ನ ನೆಚ್ಚಿನ ಆಯ್ಕೆ ಎಂದು ಎಬಿಡಿ ವಿವರಿಸಿದ್ದಾರೆ.

Last Updated : May 12, 2020, 12:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.