ಮುಂಬೈ: ಭಾರತ ತಂಡ ಭಾನುವಾರ ಇಂಗ್ಲೆಂಡ್ ವಿರುದ್ಧ 2-1ರಲ್ಲಿ ಸರಣಿ ಜಯಿಸಿದೆ. ವಿಶ್ವದ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟರ್ ಆಗಿರುವ ಕೊಹ್ಲಿ ಸರಣಿ ಬೆನ್ನಲ್ಲೇ ಜಿಮ್ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಆರ್ಸಿಬಿ ಆಪತ್ಪಾಂಧವ ಎಬಿಡಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, 'ವಿಕೆಟ್ಗಳ ಮಧ್ಯೆ ಯಾರು ವೇಗವಾಗಿ ಓಡುತ್ತಾರೆ ಎಂಬುದನ್ನು ರೇಸ್ನಲ್ಲಿ ಪಾಲ್ಗೊಂಡು ತಿಳಿದುಕೊಳ್ಳೋಣ' ಎಂದು ತಿಳಿಸಿದ್ದಾರೆ.
ಸೋಮವಾರ ವಿರಾಟ್ ಕೊಹ್ಲಿ ಟ್ರೆಡ್ಮಿಲ್ನಲ್ಲಿ ಓಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ, ವಿಶ್ರಾಂತಿ ದಿನಗಳಿಲ್ಲ, ಇಲ್ಲಿಂದ ಐಪಿಎಲ್ ವೇಗದ ಬಗ್ಗೆ ತಮ್ಮ ಆಲೋಚನೆ ಎಂಬರ್ಥದಲ್ಲಿ ಬರೆದುಕೊಂಡಿದ್ದರು.
-
Loving the form @imVkohli .. I’m all packed to join the team pic.twitter.com/6rBIV3T3EH
— AB de Villiers (@ABdeVilliers17) March 29, 2021 " class="align-text-top noRightClick twitterSection" data="
">Loving the form @imVkohli .. I’m all packed to join the team pic.twitter.com/6rBIV3T3EH
— AB de Villiers (@ABdeVilliers17) March 29, 2021Loving the form @imVkohli .. I’m all packed to join the team pic.twitter.com/6rBIV3T3EH
— AB de Villiers (@ABdeVilliers17) March 29, 2021
ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿರುವ ತಂಡದ ಸಹ ಆಟಗಾರ ಎಬಿಡಿ ತಮ್ಮ ನಾಯಕನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಕೊಹ್ಲಿ ಫಾರ್ಮ್ ತುಂಬಾ ಇಷ್ಟವಾಗಿದೆ. ತಂಡ ಸೇರಿಕೊಳ್ಳುವುದಕ್ಕೆ ಈಗಾಗಲೇ ಪ್ಯಾಕಿಂಗ್ ಮುಗಿದಿದೆ ಎಂದು ಟ್ವೀಟ್ ಮಾಡಿದ್ದರು.
ನಂತರ ಕೊಹ್ಲಿ 'ಈಗಲೂ ವಿಕೆಟ್ಗಳ ಮಧ್ಯೆ ವೇಗವಾಗಿ ಓಡುತ್ತೀರಿ' ಎಂದು ಪ್ರತಿಕ್ರಿಯಿಸಿದ್ದರು. ಅದಕ್ಕೆ ಎಬಿಡಿ, 'ನಾಳೆ ರೇಸ್ನಲ್ಲಿ ಭಾಗಿಯಾಗಿ, ಯಾರು ವೇಗವಾಗಿ ಓಡಬಲ್ಲರು ತಿಳಿದುಕೊಳ್ಳೋಣ' ಎಂದು ಸವಾಲು ಹಾಕಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 3-1ರಲ್ಲಿ ಟೆಸ್ಟ್ ಸರಣಿ, 3-2ರಲ್ಲಿ ಟಿ20 ಮತ್ತು 2-1ರಲ್ಲಿ ಏಕದಿನ ಸರಣಿ ಗೆದ್ದಿದೆ. ಸ್ವತಃ ಕೊಹ್ಲಿ ಟಿ20ಯಲ್ಲಿ 231 ರನ್ ಮತ್ತು ಏಕದಿನದಲ್ಲಿ 129 ರನ್ಗಳಿಸಿ ಅತ್ಯುತ್ತಮ ಫಾರ್ಮ್ ಕಾಯ್ದುಕೊಂಡಿದ್ದಾರೆ. ಇತ್ತ ಎಬಿಡಿ ಕಳೆದ ವರ್ಷ ಸನ್ ರೈಸರ್ಸ್ ಹೈದರಾಬಾದ್ ಎದುರು ಎಲಿಮಿನೇಟರ್ ಪಂದ್ಯದಲ್ಲಿ ಆಡಿದ್ದೇ ಕೊನೆಯ ಪಂದ್ಯವಾಗಿದೆ.
ಕಳೆದ ಬಾರಿ ಪ್ಲೇಆಫ್ ತಲುಪಿದ್ದ ಆರ್ಸಿಬಿ ತಂಡಕ್ಕೆ ಈ ಬಾರಿ ಗ್ಲೇನ್ ಮ್ಯಾಕ್ಸ್ವೆಲ್, ಕೈಲ್ ಜೇಮಿಸನ್ ಸೇರ್ಪಡೆಗೊಂಡಿರುವುದು ಕೊಹ್ಲಿ ಬಳಗಕ್ಕೆ ಬಲ ತಂದಿದೆ. ಏಪ್ರಿಲ್ 1ರಂದು ಈ ಆಟಗಾರರೆಲ್ಲಾ ಆರ್ಸಿಬಿ ಬಳಗ ಸೇರಿಕೊಳ್ಳಲಿದ್ದಾರೆ.