ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಇಂಗ್ಲೆಂಡ್ನ ಟಿ-20 ಬ್ಲಾಸ್ಟ್ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ್ದು, ಅಭಿಮಾನಿಗಳಿಗೆ ತಮ್ಮ 360 ಗಮ್ಮತ್ತನ್ನು ತೋರಿಸಿದ್ದಾರೆ.
ಕಳೆದ ವರ್ಷವೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಎಬಿಡಿ ಟಿ-20 ಲೀಗ್ನಲ್ಲಿ ಇನ್ನಷ್ಟು ವರ್ಷ ಆಡಲು ನಿರ್ಧರಿಸಿದ್ದರು. ಅಂತೆಯೇ ಬಿಪಿಎಲ್,ಪಿಎಸ್ಎಲ್, ಐಪಿಎಲ್ನಲ್ಲಿ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಸುದೀರ್ಘ ಟಿ-20 ಟೂರ್ನಿಯಾದ ಟಿ-20- ಬ್ಲಾಸ್ಟ್ನಲ್ಲಿ ತಮ್ಮ ಮೊದಲ ಪಂದ್ಯದಲ್ಲೇ ಮಿಡ್ಸ್ಎಸೆಕ್ಸ್ ತಂಡದ ಪರ 88 ರನ್ಗಳಿಸಿ ಮಿಂಚಿದ್ದಾರೆ.
ಕೇವಲ43 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 88 ರನ್ಗಳಿಸುವ ಮೂಲಕ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದರು. ಎದುರಾಳಿ ನೀಡಿದ 165 ರನ್ಗಳ ಗುರಿಯನ್ನು ಏಕಾಂಗಿಯಾಂಗಿ ಹೋರಾಡಿ ಕೇವಲ 17 ಓವರ್ನಲ್ಲೇ ಗೆಲುವು ತಂದುಕೊಟ್ಟಿದ್ದಾರೆ.
ವಿಶ್ವಕಪ್ನಲ್ಲಿ ವಿಲಿಯರ್ಸ್ ಕೊನೆಗಳಿಗೆಯಲ್ಲಿ ಅವಕಾಶಕ್ಕಾಗಿ ಕೇಳಿಕೊಂಡಿದ್ದರು ಎಂಬ ವಿವಾದ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದಕ್ಕೆಲ್ಲಾ ಸ್ಪಷ್ಟನೇ ನೀಡುವ ಮೂಲಕ ಗೊಂದಲದಿಂದ ಹೊರಬಂದಿರುವ ಎಬಿಡಿ ಮತ್ತೆ ಕ್ರಿಕೆಟ್ನಲ್ಲಿ ಮಿಂಚುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡುತ್ತಿದ್ದಾರೆ.