ಮುಂಬೈ: ಭಾರತ ಕ್ರಿಕೆಟ್ ತಂಡ ಕಂಡಂತಹ ಶ್ರೇಷ್ಠ ನಾಯಕರಾದ ಧೋನಿ ಹಾಗೂ ಕೊಹ್ಲಿ ಎದುರಾಳಿ ತಂಡದ ಆಟಗಾರರನ್ನು ಗೌರವಿಸುವ ಪದ್ಧತಿಯನ್ನು ಮೆಚ್ಚಿಕೊಂಡು ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ಇಬ್ಬರ ಜರ್ಸಿಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಆಸ್ಟ್ರೇಲಿಯಾ, ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ವೇಳೆ ನಾಯಕ ಕೊಹ್ಲಿ ಹಾಗೂ ಧೋನಿ ಅವರು ಆಸೀಸ್ ನಾಯಕನಿಗೆ ತಮ್ಮ ಜರ್ಸಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಐಪಿಎಲ್ಗೂ ಮುನ್ನ ನಡೆದಿದ್ದ ಏಕದಿನ ಸರಣಿ ಹಾಗೂ ಟಿ20 ಸರಣಿಗಳೆರಡರಲ್ಲೂ ಆಸ್ಟ್ರೇಲಿಯಾ ಭಾರತದ ವಿರುದ್ಧ ಗೆಲುವು ಸಾಧಿಸಿತ್ತು.
ಈ ವೇಳೆ ಧೋನಿ-ಕೊಹ್ಲಿ ನೀಡಿದ ಜರ್ಸಿಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದು, ಕಳೆದ ಸರಣಿಯಲ್ಲಿ ಪಾಲ್ಗೊಂಡಿದ್ದಾಗ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ ಕೊಹ್ಲಿ ಹಾಗೂ ಧೋನಿಗೆ ಧನ್ಯವಾದ. ಮೈದಾನದಲ್ಲಿ ನಮ್ಮ ದೇಶಕ್ಕಾಗಿ ಕಠಿಣವಾದ ಹೋರಾಟ ನಡೆಸುತ್ತೇವೆ. ಆದರೆ ಮೈದಾನದ ಹೊರಗೆ ಈ ಇಬ್ಬರನ್ನು ತುಂಬಾ ಗೌರವಿಸುತ್ತೇನೆ. ಆಟದ ವೇಳೆ ನಿಮ್ಮೊಂದಿಗೆ ಸಮಯ ಕಳೆಯುವುದಕ್ಕೆ ನನಗೆ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆಯನ್ನಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡ ಪಿಂಚ್ ನಾಯಕನಾದ ಮೇಲೆ ಸುಧಾರಿಸಿಕೊಂಡಿದ್ದು, ಬಲಿಷ್ಠ ಭಾರತ, ಪಾಕಿಸ್ತಾನ ತಂಡಗಳನ್ನೇ ಅವರ ನೆಲದಲ್ಲಿ ಸೋಲಿಸಿದೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಅದು ಒಂದಾಗಿದೆ. ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಜುಲೈ 14 ರಂದು ಲಾರ್ಡ್ಸ್ನಲ್ಲಿ ಮುಖಾಮುಖಿಯಾಗಲಿವೆ.