ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಬೌಲರ್ಗಳು ಕಂಬ್ಯಾಕ್ ಮಾಡಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉತ್ತಮ ಪ್ರದರ್ಶನ ತೋರಿದ ಭಾರತ ತಂಡದ ಬೌಲರ್ಗಳನ್ನ ಆಸೀಸ್ ನಾಯಕ ಕೊಂಡಾಡಿದ್ದಾರೆ.
ಭಾರತದ ವಿರುದ್ಧ ಸರಣಿ ಸೋಲಿನ ಬಳಿಕ ಮಾತನಾಡಿದ ಆಸೀಸ್ ನಾಯಕ ಆ್ಯರೋನ್ ಫಿಂಚ್, ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ. ಅಸಾಧಾರಣ ಡೆತ್ ಬೌಲಿಂಗ್ ಭಾರತ ತಂಡ ಸರಣಿ ಗೆಲ್ಲಲು ಸಹಕಾರಿಯಾಗಿದೆ ಎಂದಿದ್ದಾರೆ.
ನನ್ನ ಪ್ರಕಾರ ಕೊನೆಯ ಓವರ್ಗಳಲ್ಲಿ ನಮ್ಮ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದ್ರು. ಇದೇ ಕಾರಣದಿಂದ ನಾವು ಹಿನ್ನಡೆ ಅನುಭವಿಸಿದೆವು ಎಂದಿದ್ದಾರೆ. ರಾಜ್ಕೋಟ್ನಲ್ಲಿ ಕೆ.ಎಲ್.ರಾಹುಲ್ ತೋರಿದ ಅದ್ಭುತ ಪ್ರದರ್ಶನದಿಂದ ನಾವು ಸೋಲಬೇಕಾಯ್ತು. ಅಂತಿಮ ಓವರ್ಗಳಲ್ಲಿ ರಾಹುಲ್ ಮಿಂಚಿದ್ದರು. ಆದೇ ರೀತಿ ನಾವು ಕೂಡ ಕೆಲವು ಟ್ರಿಕ್ಸ್ ಉಪಯೋಗಿಸಿದ್ದರೆ ತಂಡಕ್ಕೆ ಸಹಕಾರಿಯಾಗುತ್ತಿತ್ತು ಎಂದಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಎಡವಿದ್ದ ಟೀಂ ಇಂಡಿಯಾ ಬೌಲರ್ಗಳು ದ್ವಿತೀಯ ಮತ್ತು ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ರು. ಮೊಹಮ್ಮದ್ ಶಮಿ, ಬುಮ್ರಾ ಮತ್ತು ನವದೀಪ್ ಸೈನಿ ಯಾರ್ಕರ್ಗಳ ಮೂಲಕ ಆಸೀಸ್ ಆಟಗಾರರನ್ನ ಕಾಡಿದ್ರು.