ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ 4ನೇ ಟಿ-20 ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ಕ್ಯಾಪ್ಟನ್ ಆ್ಯರೊನ್ ಫಿಂಚ್ 55 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸೇರಿದಂತೆ ಅಜೇಯ 79 ರನ್ಗಳಿಕೆ ಮಾಡಿದ್ದು, ಈ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.

ಟಿ-20 ಕ್ರಿಕೆಟ್ನಲ್ಲಿ 100 ಸಿಕ್ಸರ್ ಸಿಡಿಸಿರುವ ಆಸ್ಟ್ರೇಲಿಯಾದ ಮೊದಲ ಕ್ರಿಕೆಟ್ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಇದೀಗ ಅವರು ಪಾತ್ರರಾಗಿದ್ದಾರೆ. ಜತೆಗೆ ಟಿ-20 ಕ್ರಿಕೆಟ್ನಲ್ಲಿ ಕಾಂಗರೂ ಪರ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ. ಇಂದಿನ ಪಂದ್ಯದಲ್ಲಿ ಒಂದೇ ಓವರ್ನಲ್ಲಿ ಫಿಂಚ್ 4 ಸಿಕ್ಸರ್ ಸಿಡಿಸಿರುವುದು ಕೂಡ ವಿಶೇಷವಾಗಿದೆ.
-
Aaron Finch smashes four sixes in the last over as Australia post 156/6 from their 20 overs.
— ICC (@ICC) March 5, 2021 " class="align-text-top noRightClick twitterSection" data="
Can the @BLACKCAPS chase this down?#NZvAUS | https://t.co/vHY5nULqOopic.twitter.com/ogtjThppnT
">Aaron Finch smashes four sixes in the last over as Australia post 156/6 from their 20 overs.
— ICC (@ICC) March 5, 2021
Can the @BLACKCAPS chase this down?#NZvAUS | https://t.co/vHY5nULqOopic.twitter.com/ogtjThppnTAaron Finch smashes four sixes in the last over as Australia post 156/6 from their 20 overs.
— ICC (@ICC) March 5, 2021
Can the @BLACKCAPS chase this down?#NZvAUS | https://t.co/vHY5nULqOopic.twitter.com/ogtjThppnT
ಐಸಿಸಿ ಟಿ-20 ಕ್ರಿಕೆಟ್ನಲ್ಲಿ ಈಗಾಗಲೇ ನ್ಯೂಜಿಲ್ಯಾಂಡ್ ತಂಡದ ಗಫ್ಟಿಲ್ 135 ಸಿಕ್ಸರ್, ಭಾರತದ ರೋಹಿತ್ ಶರ್ಮಾ 127 ಸಿಕ್ಸರ್, ಇಂಗ್ಲೆಂಡ್ ಇಯಾನ್ ಮಾರ್ಗನ್ 113 ಸಿಕ್ಸರ್, ನ್ಯೂಜಿಲ್ಯಾಂಡ್ನ ಕಾಲಿನ್ ಮುನ್ರೋ 107 ಸಿಕ್ಸರ್ ಹಾಗೂ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ 105 ಸಿಕ್ಸರ್ ಸಿಡಿಸಿದ್ದಾರೆ. ಇದೀಗ ಇವರ ಲಿಸ್ಟ್ಗೆ ಫಿಂಚ್ ಸೇರ್ಪಡೆಗೊಂಡಿದ್ದಾರೆ.
ಆಸ್ಟ್ರೇಲಿಯಾ ಪರ 70 ಟಿ-20 ಪಂದ್ಯಗಳನ್ನಾಡಿರುವ ಫಿಂಚ್ 2,310 ರನ್ಗಳಿಕೆ ಮಾಡಿದ್ದು, ಇದರಲ್ಲಿ ಎರಡು ಶತಕ ಹಾಗೂ 14 ಅರ್ಧಶತಕ ಸೇರಿಕೊಂಡಿವೆ. ವಾರ್ನರ್ 81 ಪಂದ್ಯಗಳಿಂದ 2,265 ರನ್ಗಳಿಕೆ ಮಾಡಿದ್ದು, 1 ಶತಕ ಹಾಗೂ 18 ಅರ್ಧಶತಕಗಳಿವೆ.