ETV Bharat / sports

ದೀಪಕ್​ ಚಹಾರ್ ಹ್ಯಾಟ್ರಿಕ್‌ ಸಹಿತ 6 ವಿಕೆಟ್‌! ಟಿ-20 ಇತಿಹಾಸದಲ್ಲಿ ನೂತನ ದಾಖಲೆ!

ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸಿದ ವೇಗಿ ದೀಪಕ್ ಚಹಾರ್ ಹಲವು ದಾಖಲೆ ನಿರ್ಮಾಣ ಮಾಡಿರುವುದಲ್ಲದೆ ಭಾರತ ಟಿ-20 ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ದೀಪಕ್​ ಚಹಾರ್
author img

By

Published : Nov 10, 2019, 11:56 PM IST

ನಾಗ್ಪುರ: ಇಲ್ಲಿ ನಡೆದ ಬಾಂಗ್ಲಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಮಿಂಚಿದ ಯುವ ವೇಗಿ ದೀಪಕ್​ ಚಹಾರ್ 6 ವಿಕೆಟ್ ಪಡೆದುಕೊಂಡು ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

  • ' class='align-text-top noRightClick twitterSection' data=''>

ಆರಂಭಿಕ 2 ಓವರ್​ಗಳಲ್ಲಿ 3 ರನ್​ ನೀಡಿ 3 ವಿಕೆಟ್ ಪಡೆದಿದ್ದ ಚಹಾರ್ ಡೆತ್​ ಓವರ್​ನಲ್ಲಿ ಭರ್ಜರಿ ಬೌಲಿಂಗ್ ನಡೆಸಿದ್ರು. 18ನೇ ಓವರ್​ನ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಮತ್ತು 20ನೇ ಓವರ್​ನ ಮೊದಲ 2 ಎಸೆತಗಳಲ್ಲಿ 2 ವಿಕೆಟ್​ ಪಡೆದು ಅಂತರಾಷ್ಟ್ರೀಯ ಟಿ-20 ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಹರ್ಬಜನ್ ಸಿಂಗ್​ ಮತ್ತು ಇರ್ಫಾನ್ ಪಠಾಣ್ ಹ್ಯಾಟ್ರಿಕ್ ವಿಕೆಟ್​ ಪಡೆದಿದ್ದು, ಏಕದಿನ ಕ್ರಕೆಟ್​ನಲ್ಲಿ ಚೇತನ್ ಶರ್ಮಾ, ಕಪೀಲ್ ದೇವ್, ಕುಲ್ದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳಾಗಿದ್ದಾರೆ. ಇದೀಗ ಟಿ-20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ದೀಪಕ್ ಚಹಾರ್ ಪಾಲಾಗಿದೆ.

ಒಟ್ಟು 3.2 ಓವರ್ ಬೌಲಿಂಗ್ ನಡೆಸಿದ ಚಹಾರ್ ಕೇವಲ 7 ರನ್​ ನೀಡಿ 6 ವಿಕೆಟ್ ಕಬಳಿಸಿದ್ದಾರೆ. ಇದು ಟಿ-20 ಇತಿಹಾಸದಲ್ಲೆ ಬೆಸ್ಟ್​ ಬೌಲಿಂಗ್ ಎನಿಸಿಕೊಂಡಿದೆ. ಈ ಹಿಂದೆ ಶ್ರೀಲಂಕಾ ವೇಗಿ ಅಜಂತಾ ಮೆಂಡಿಸ್ 4 ಓವರ್​ಗಳಲ್ಲಿ 8 ರನ್​ ನೀಡಿ 6 ವಿಕೆಟ್​ ಪಡೆದಿದ್ದರು. ಮೂರನೇ ಸ್ಥಾನದಲ್ಲೂ ಅಂಜಂತಾ ಮೆಂಡಿಸ್​ ಸ್ಥಾನ ಪಡೆದಿದ್ದು 16 ರನ್​ ನೀಡಿ 6 ವಿಕೆಟ್​ ಕಬಳಿಸಿದ್ದಾರೆ. ಇನ್ನು 24 ರನ್​ ನೀಡಿ 6 ವಿಕೆಟ್ ಪಡೆದಿರುವ ಯಜುವೇಂದ್ರ ಚಹಾಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

  • Deepak Chahar becomes the first Indian to take a Hat-trick in T20I also records the best bowling figures in T20I history...

    — Broken Cricket (@BrokenCricket) November 10, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.