ಮೌಂಟ್ ಮಾಂಗ್ನುಯಿ: ಬೇ ಓವಲ್ ಮೈದಾನದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್‌ಗಳ ಐತಿಹಾಸಿಕ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಭಾರತೀಯ ಆಟಗಾರರು ಇತಿಹಾಸ ಸೃಷ್ಟಿಸಿದರು. ಇದಲ್ಲದೆ ಕಿವೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಸರಣಿ ಕ್ಲೀನ್‌ಸ್ವೀಪ್ ಮಾಡಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಟೀಂ ಇಂಡಿಯಾ ಪಾತ್ರವಾಗಿದೆ.
-
5️⃣ - 0️⃣ 👌🏻😎🔝🇮🇳🇮🇳🇮🇳🇮🇳🇮🇳 #TeamIndia #NZvIND pic.twitter.com/pn0qTiwDHR
— BCCI (@BCCI) February 2, 2020 " class="align-text-top noRightClick twitterSection" data="
">5️⃣ - 0️⃣ 👌🏻😎🔝🇮🇳🇮🇳🇮🇳🇮🇳🇮🇳 #TeamIndia #NZvIND pic.twitter.com/pn0qTiwDHR
— BCCI (@BCCI) February 2, 20205️⃣ - 0️⃣ 👌🏻😎🔝🇮🇳🇮🇳🇮🇳🇮🇳🇮🇳 #TeamIndia #NZvIND pic.twitter.com/pn0qTiwDHR
— BCCI (@BCCI) February 2, 2020
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕಿವೀಸ್‌ಗೆ 164 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಲಾಗಿತ್ತು. ಆರಂಭಿಕರಾಗಿ ಮತ್ತೊಮ್ಮೆ ಅಬ್ಬರಿಸಿದ ಕನ್ನಡಿಗ ರಾಹುಲ್ 45 ರನ್ ಕಲೆಹಾಕಿದರೆ, ಸಂಜು ಸ್ಯಾಮ್ಸನ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕನ ಆಟವಾಡಿದ ರೋಹಿತ್ 60 ರನ್ ಬಾರಿಸಿ ಗಾಯಗೊಂಡು ನಿವೃತ್ತರಾದರು. ಶಿವಂ ದುಬೆ ಕೂಡ ಕೇವಲ 5 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಶ್ರೇಯಸ್ ಅಯ್ಯರ್ 33 ಹಾಗೂ ಮನೀಶ್ ಪಾಂಡೆ 11 ರನ್ ಗಳಿಸಿ ತಂಡದ ಮೊತ್ತವನ್ನು 163ಕ್ಕೆ ಕೊಂಡೊಯ್ದಿದ್ದರು.
ಈ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ಗೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ಕೊಟ್ಟರು. ಮಾರ್ಟಿನ್ ಗಪ್ಟಿಲ್ (2) ಅವರನ್ನು ಎಲ್‌ಬಿಡಬ್ಲೂ ಬಲೆಗೆ ಅವರು ಕೆಡವಿದ್ರು. ಇದಾದ ಬೆನ್ನಲ್ಲೇ ಅಪಾಯಕಾರಿ ಬ್ಯಾಟ್ಸ್‌ಮನ್ ಕಾಲಿನ್ ಮನ್ರೊ (15) ಅವರನ್ನು ವಾಷಿಂಗ್ಟನ್ ಸುಂದರ್ ಬೌಲ್ಡ್ ಮಾಡುವ ಮೂಲಕ ಕೀವಿಸ್ ತಂಡಕ್ಕೆ ಮತ್ತೊಂದು ಶಾಖ್ ಕೊಟ್ಟರು.
ಇನ್ನು ಅದ್ಭುತ ರನ್ ಔಟ್ಗೆ ಬಲಿಯಾದ ಟಾಮ್ ಬ್ರೂಸ್ ಖಾತೆ ತರೆಯದೆ ಪೆವಿಲಿಯನ್ ಸೇರಿಕೊಂಡರು. ಇದರ ಪರಿಣಾಮ 3.2 ಓವರ್‌ಗಳಲ್ಲಿ ನ್ಯೂಜಿಲ್ಯಾಂಡ್ ತಂಡ 17 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜತೆಗೂಡಿದ ವಿಕೆಟ್ ಕೀಪರ್ ಟಿಮ್ ಸೀಫರ್ಟ್ ಹಾಗೂ ಅನುಭವಿ ರಾಸ್ ಟೇಲರ್ ಅಮೂಲ್ಯ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ತಂದುಕೊಟ್ಟರು. ಇವರಿಬ್ಬರು ಭಾರತೀಯ ಬೌಲರ್‌ಗಳ ಕೆಲಕಾಲ ಬೆವರಿಳಿಸುವ ಕೆಲಸ ಮಾಡಿದರು.
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಟಿಮ್ ಸೀಫರ್ಟ್ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೇ, ಕೇವಲ 29 ಎಸೆತಗಳಲ್ಲೇ ಅರ್ಧಶತಕ ಬಾರಿಸುವ ಮೂಲಕ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ನಡುವೆ ಬೌಲಿಂಗ್ ಮಾಡಿದ ನವದೀಪ್ ಸೈನಿ, ಅಪಾಯಕಾರಿ ಸೀಫರ್ಟ್‌ರನ್ನು ಬಲಿಪಡೆದರು. ಇದಾದ ಮೇಲೆ ಕ್ರಿಸ್‌ಗೆ ಬಂದ ಯಾವೊಬ್ಬ ಕಿವಿಸ್ ಬ್ಯಾಟ್ಸ್‌ಮನ್ ಕೂಡಾ ಕ್ರಿಸ್‌ಗೆ ಕಚ್ಚಿ ನಿಲ್ಲಲಿಲ್ಲ. ಡ್ಯಾರೆಲ್ ಮಿಚೆಲ್‌ರನ್ನು 2, ಮಿಚೆಲ್ ಸ್ಯಾಂಟ್ನರ್ 2,ಸ್ಕಾಟ್ ಕುಗ್ಗೆಲೀಜ್ನ್ 0 , ಇಶ್ ಸೋಧಿ 16*, ಹಮೀಶ್ ಬೆನೆಟ್ 1* ರನ್ಗಳಿಸಲಷ್ಟೇ ಶಕ್ತರಾದ್ರು.
ಈ ನಡುವೆ ಮಗದೊಮ್ಮೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಅನುಭವಿ ರಾಸ್ ಟೇಲರ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಅಂತಿಮ ಐದು ಓವರ್‌ಗಳಲ್ಲಿ ಕಿವೀಸ್ ಗೆಲುವಿಗೆ 42 ರನ್‌ಗಳ ಅವಶ್ಯಕತೆಯಿತ್ತು. ಇದರ ಬೆನ್ನಲ್ಲೇ ಟೇಲರ್ ಆರ್ಭಟಕ್ಕೆ ಶಾರ್ದೂಲ್ ಠಾಕೂರ್ ಬ್ರೇಕ್ ಹಾಡಿದರು. 53 ರನ್ ಗಳಿಸಿದಾಗ ರಾಸ್ ಟೇಲರ್ ನವದೀಪ್ ಶೈನಿಗೆ ತಮ್ಮ ವಿಕೆಟ್ ಒಪ್ಪಿಸಿ ತಮ್ಮ ಪೆವಿಲಿಯನ್ ಸೇರಿಕೊಂಡರು.
ಟೀಮ್ ಇಂಡಿಯಾ ಪರ ಭರ್ಜರಿ ಬೌಲಿಂಗ್ ಮಾಡಿದ ಬೂಮ್ರಾ 3 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 2, ಶೈನಿ 2, ವಿಕೆಟ್ ಪಡೆದು ತಂಡದ ಪ್ರಚಂಡ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.