ETV Bharat / sports

5ನೇ ಏಕದಿನ ಪಂದ್ಯ: ಹರಿಣಗಳಿಗೆ 189 ರನ್​ಗಳ ಸಾಧಾರಣ ಗುರಿ ನೀಡಿದ ಭಾರತ ಮಹಿಳಾ ತಂಡ

ದಕ್ಷಿಣ ಆಫ್ರಿಕಾ ವಿರುದ್ದದ 5ನೇ ಏಕದಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 9 ವಿಕೆಟ್ ನಷ್ಟಕ್ಕೆ‌ ಕೇವಲ 188 ರನ್‌ ಬಾರಿಸಿದೆ.

5th ODI
ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್
author img

By

Published : Mar 17, 2021, 2:08 PM IST

ಲಖನೌ: ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ 79 ರನ್​ಗಳ ಏಕಾಂಗಿ ಹೋರಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ದದ 5ನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್‌ ಕಳೆದುಕೊಂಡು ಕೇವಲ 188 ರನ್‌ ಬಾರಿಸಿದೆ. ಈ ಮೂಲಕ ಹರಿಣ ಮಹಿಳಾ ತಂಡಕ್ಕೆ ಸಾಧಾರಣ ಗುರಿ ನೀಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಉತ್ತಮ ಆರಂಭ ಮಾಡಿತ್ತು. ಆರಂಭಿಕ ಬ್ಯಾಟ್‌ವುಮೆನ್‌ಗಳಾದ ಪ್ರಿಯಾ ಪೂನಿಯಾ ಹಾಗೂ ಸ್ಮೃತಿ ಮಂದಣ್ಣಾ ತಲಾ 18 ರನ್‌ ಬಾರಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಪೂನಂ ರಾವತ್‌ ಬ್ಯಾಟಿಂಗ್ 10 ರನ್‌ಗಳಿಗೆ ಸೀಮಿತವಾಯಿತು. ಉತ್ತಮವಾಗಿ ಆಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ 30 ರನ್ ಬಾರಿಸಿ ಗಾಯಗೊಂಡು ಪೆವಿಲಿಯನ್​ಗೆ ಮರಳಿದರು.

ಇನ್ನು ನಾಯಕಿ ಮಿಥಾಲಿ ರಾಜ್‌ ಬರೋಬ್ಬರಿ 104 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್‌ ಬಾರಿಸುವ ಮೂಲಕ ಅಜೇಯ 79 ರನ್‌ ಬಾರಿಸಿದ್ದಾರೆ. ಭಾರತದ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡುಬಂದಿತು. ಹರ್ಮನ್‌ಪ್ರೀತ್‌ ಕೌರ್ ಪೆವಿಲಿಯನ್‌ ಸೇರುತ್ತಿದ್ದಂತೆ ಭಾರತ ತಂಡ ಕುಸಿತ ಕಂಡಿತು. ಅಗ್ರಕ್ರಮಾಂಕದ ಐವರು ಆಟಗಾರ್ತಿಯರು ಎರಡಂಕಿ ಮೊತ್ತ ದಾಖಲಿಸಿದ್ದು ಬಿಟ್ಟರೆ, ಅದಾದ ಬಳಿಕ ಕ್ರೀಸ್‌ಗಿಳಿದ ಯಾವೊಬ್ಬ ಆಟಗಾರ್ತಿಯೂ ಎರಡಂಕಿ ಮೊತ್ತ ಕಲೆಹಾಕಲು ಯಶಸ್ವಿಯಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್​:

ಭಾರತ: 188/9

ಮಿಥಾಲಿ ರಾಜ್‌: 79

ETV Bharat Logo

Copyright © 2024 Ushodaya Enterprises Pvt. Ltd., All Rights Reserved.