ETV Bharat / sports

ರಹೀಮ್​​ ನಂತರ ಪಾಕ್​​​ ಪ್ರವಾಸದಿಂದ ಹಿಂದೆ ಸರಿದ ಬಾಂಗ್ಲಾದೇಶ ತಂಡದ ಕೋಚ್​ಗಳು - ಫೀಲ್ಡಿಂಗ್​ ಕೋಚ್​ ರ‍್ಯಾನ್​ ಕುಕ್

ಬಾಂಗ್ಲಾದೇಶದ ಬ್ಯಾಟಿಂಗ್​ ಕೋಚ್​ ನೀಲ್​ ಮೆಕೆಂಜಿ ಹಾಗೂ ಫೀಲ್ಡಿಂಗ್​ ಕೋಚ್​ ರ‍್ಯಾನ್​ ಕುಕ್​ ಪಾಕಿಸ್ತಾನ ಪ್ರವಾಸಕ್ಕೆ ಭದ್ರತೆ ಕಾರಣ ನೀಡಿ ಹಿಂದೆ ಸರಿದಿದ್ದಾರೆ.

Pakistan vs Bangladesh
Pakistan vs Bangladesh
author img

By

Published : Jan 18, 2020, 12:40 PM IST

ಡಾಕಾ: ವಿಕೆಟ್​ ಕೀಪರ್​ ಮುಷ್ಫೀಕರ್​ ರಹೀಮ್​ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದ ಬೆನ್ನಲ್ಲೇ ಬಾಂಗ್ಲಾದೇಶ ತಂಡದ 5 ಮಂದಿ ಕೋಚ್​ಗಳು ಸಹ ಪಾಕಿಸ್ತಾನಕ್ಕೆ ತೆರಳದಿರಲು ನಿರ್ಧರಿಸಿದ್ದಾರೆ.

ಬಾಂಗ್ಲಾದೇಶದ ಬ್ಯಾಟಿಂಗ್​ ಕೋಚ್​ ನೀಲ್​ ಮೆಕೆಂಜಿ ಹಾಗೂ ಫೀಲ್ಡಿಂಗ್​ ಕೋಚ್​ ರ‍್ಯಾನ್​ ಕುಕ್​ ಪಾಕಿಸ್ತಾನ ಪ್ರವಾಸಕ್ಕೆ ಭದ್ರತೆ ಕಾರಣ ನೀಡಿ ಹಿಂದೆ ಸರಿದಿದ್ದಾರೆ.

ಇನ್ನು ಸೀಮಿತ ಓವರ್​ಗಳಿಗೆ ಬೌಲಿಂಗ್​ ಸಲಹೆಗಾರರಾಗಿರುವ ಡೇನಿಯಲ್​ ವಿಟೋರಿ ಅವರನ್ನು ಚಿಕ್ಕ ಸರಣಿಯಾಗಿರುವುದರಿಂದ ಬಿಸಿಬಿ ಕರೆ ನೀಡಿಲ್ಲ. ತಂಡದ ವಿಶ್ಲೇಷಕರಾಗಿರುವ ಶ್ರೀನಿವಾಸ್​ ಚಂದ್ರಶೇಖರನ್​ ಭಾರತೀಯ ನಾಗರಿಕನಾಗಿರುವುದರಿಂದ ಈ ಪ್ರವಾಸ ಕೈಗೊಳ್ಳುತ್ತಿಲ್ಲ ಎಂದು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ಅಧ್ಯಕ್ಷ ಅಕ್ರಮ್​ ಖಾನ್​ ತಿಳಿಸಿದ್ದಾರೆ.

ತಂಡದ ಹೆಡ್​ ಕೋಚ್​ ರಸೆಲ್​ ಡೊಮಿಂಗೊ, ಫಿಸಿಯೋ ಜೂಲಿಯನ್ ಕ್ಯಾಲಿಫ್ಯಾಟೋ ಹಾಗೂ ಸ್ಟ್ರೆಂತ್​ ಅಂಡ್​ ಕಂಡೀಷನಿಂಗ್​ ಕೋಚ್​ ತುಷಾರ್​ ಕಾಂತಿ ಹವಲ್ದಾರ್​ ತಂಡದ ಜೊತೆ ಇರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಬಾಂಗ್ಲಾದೇಶ ತಂಡ ಪಾಕಿಸ್ತಾನದಲ್ಲಿ 3 ಟಿ-20, 2 ಟೆಸ್ಟ್​ ಹಾಗೂ ಒಂದು ಏಕದಿನ ಪಂದ್ಯವಾಡಲಿದೆ. ಜನವರಿ 24ರಿಂದ 27ರವರೆಗೆ ಟಿ-20 ಸರಣಿ, ಫೆಬ್ರವರಿ 7ರಿಂದ 11ರವರೆಗೆ ಮೊದಲ ಟೆಸ್ಟ್​ ನಡೆಯಲಿದೆ. ಮತ್ತೆ ಏಪ್ರಿಲ್​ನಲ್ಲಿ ಪಾಕಿಸ್ತಾನಕ್ಕೆ ತೆರಳಲಿರುವ ಬಾಂಗ್ಲಾದೇಶ ತಂಡ, ಏಪ್ರಿಲ್​ 3ರಂದು ಏಕೈಕ ಏಕದಿನ ಪಂದ್ಯವಾಡಿ, ನಂತರ ಏಪ್ರಿಲ್ 5ರಿಂದ 9ರವರೆಗೆ ಎರಡನೇ ಟೆಸ್ಟ್​ ಆಡಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.