ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 51 ರನ್ಗಳಿಂದ ಸೋತಿದೆ. ಇದರಿಂದಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸತತ 5 ಏಕದಿ ಪಂದ್ಯ ಕೈಚೆಲ್ಲಿದಂತಾಗಿದೆ.
ಭಾರತ, ಆಸೀಸ್ ವಿರುದ್ಧದ 2 ಏಕದಿನ ಪಂದ್ಯಗಳಲ್ಲಿ ಸೋಲುಂಡಿದ್ದು, ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಾಯಕನಾಗಿ ಅನಗತ್ಯ ದಾಖಲೆಗೆ ಸಾಕ್ಷಿಯಾಗಿದ್ದಾರೆ. ವಿರಾಟ್ ನೇತೃತ್ವದಲ್ಲಿ ಭಾರತ ಐದು ಬ್ಯಾಕ್ ಟು ಬ್ಯಾಕ್ ಏಕದಿನ ಪಂದ್ಯಗಳನ್ನು ಕಳೆದುಕೊಂಡಿದೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೂರೂ ಪಂದ್ಯಗಳಲ್ಲೂ ಸೋಲು ಕಂಡಿತ್ತು.
-
India have now lost five ODIs in a row 🤕
— ICC (@ICC) November 29, 2020 " class="align-text-top noRightClick twitterSection" data="
What should they change in the final #AUSvIND game to break the streak? pic.twitter.com/hMAbydeduQ
">India have now lost five ODIs in a row 🤕
— ICC (@ICC) November 29, 2020
What should they change in the final #AUSvIND game to break the streak? pic.twitter.com/hMAbydeduQIndia have now lost five ODIs in a row 🤕
— ICC (@ICC) November 29, 2020
What should they change in the final #AUSvIND game to break the streak? pic.twitter.com/hMAbydeduQ
2015-16ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಮತ್ತು ಆಸ್ಟ್ರೇಲಿಯಾ ವಿರುದ್ಧ 4, ಒಂದಾದ ಮೇಲೆ ಒಂದರಂತೆ ಒಟ್ಟು ಐದು ಏಕದಿನ ಪಂದ್ಯಗಳನ್ನು ಕಳೆದುಕೊಂಡಿತ್ತು. ಇದೀಗ ವಿರಾಟ್ ನಾಯಕತ್ವದಲ್ಲೂ ಸತತ ಐದು ಪಂದ್ಯ ಸೋತಂತಾಗಿದೆ. ಅನಗತ್ಯ ದಾಖಲೆಯಲ್ಲೂ ವಿರಾಟ್, ಎಂಎಸ್ ಧೋನಿಯನ್ನು ಸರಿಗಟ್ಟಿದ್ದಾರೆ.