ನವದೆಹಲಿ: ವಿಶ್ವಕಪ್ ಕ್ರಿಕೆಟ್ ಆಡಲು ಟೀಂ ಇಂಡಿಯಾ ಆಯ್ಕೆಯಾಗುತ್ತಿದ್ದಂತೆ ನಿರಾಸೆಗೊಳಗಾಗಿದ್ದ ಅಂಬಾಟಿ ರಾಯುಡು ಟೂರ್ನಿ ವೀಕ್ಷಣೆ ಮಾಡಲು 3ಡಿ ಗ್ಲಾಸ್ ಆರ್ಡರ್ ಮಾಡಿರುವೆ ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಇದೀಗ ಅವರ ಕ್ರಿಕೆಟ್ ಬದುಕಿಗೆ ಮುಳುವಾಗಿ ಪರಿಣಮಿಸಿದೆ ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಐಪಿಎಲ್ನಲ್ಲಿ ಅಬ್ಬರಿಸಿದ ಅಂಬಾಟಿ ರಾಯುಡು ಏಕದಿನ ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಆದರೆ ಅವರನ್ನ ಕೈಬಿಟ್ಟಿದ್ದ ಆಯ್ಕೆ ಸಮಿತಿ ಆಲ್ರೌಂಡರ್ ವಿಜಯ್ ಶಂಕರ್ಗೆ ಅವಕಾಶ ನೀಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ವಿರುದ್ಧ ಆಕ್ರೋಶಗೊಂಡಿದ್ದ ರಾಯುಡು, ವಿಶ್ವಕಪ್ ವೀಕ್ಷಣೆ ಮಾಡಲು ಹೊಸ 3ಡಿ ಕನ್ನಡಕ ಆರ್ಡರ್ ಮಾಡಿರುವೆ ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.
-
Just Ordered a new set of 3d glasses to watch the world cup 😉😋..
— Ambati Rayudu (@RayuduAmbati) April 16, 2019 " class="align-text-top noRightClick twitterSection" data="
">Just Ordered a new set of 3d glasses to watch the world cup 😉😋..
— Ambati Rayudu (@RayuduAmbati) April 16, 2019Just Ordered a new set of 3d glasses to watch the world cup 😉😋..
— Ambati Rayudu (@RayuduAmbati) April 16, 2019
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಬಿಸಿಸಿಐ, ಅವರು ಮಾಡಿರುವ ಟ್ವೀಟ್ ಬಗ್ಗೆ ನಮಗೆ ಗೊತ್ತಿದೆ. ಮಹತ್ವದ ಟೂರ್ನಿಗಳಲ್ಲಿ ಓರ್ವ ಆಟಗಾರ ಆಯ್ಕೆಗೊಳ್ಳದೇ ಹೋದಾಗ ಕೋಪ ಬರುವುದು ಸಾಮಾನ್ಯ. ರಾಯುಡು ಅದನ್ನ ಹೊರಹಾಕಿದ್ದಾರೆ ಎಂದು ಹೇಳಿತ್ತು. ಜತೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇನ್ನು ವಿಶ್ವಕಪ್ಗಾಗಿ ಆಯ್ಕೆಗೊಂಡಿದ್ದ ಶಿಖರ್ ಧವನ್, ವಿಜಯ್ ಶಂಕರ್ ಗಾಯಗೊಂಡು ಹೊರಬಿದ್ದಾಗಲೂ ಮೀಸಲು ಆಟಗಾರ ರಾಯುಡುಗೆ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿರಲಿಲ್ಲ. ಬದಲಿಗೆ ರಿಷಭ್ ಪಂತ್ ಹಾಗೂ ಮಯಾಂಕ್ ಅಗರವಾಲ್ಗೆ ಅವಕಾಶ ನೀಡಿ, ಅಂಬಾಟಿಗೆ ಮತ್ತಷ್ಟು ಹಿನ್ನಡೆಯಾಗುವಂತೆ ಮಾಡಿತ್ತು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ರಾಯುಡು ಮಾಡಿದ್ದ 3ಡಿ ಗ್ಲಾಸ್ ಆರ್ಡರ್ ಟ್ವೀಟ್ ಅವರ ಕ್ರಿಕೆಟ್ ಬದುಕಿಗೆ ಮುಳುವಾಯ್ತು ಎಂದು ಮಾತನಾಡಿಕೊಳ್ಳುತ್ತಿದ್ದು, ಬಿಸಿಸಿಐ ಕಾಯ್ದು ನೋಡಿ ತಿರುಗೇಟು ನೀಡಿದೆ ಎನ್ನುತ್ತಿದ್ದಾರೆ.