ಲಕ್ನೋ: ಜೂಲನ್ ಗೋಸ್ವಾಮಿ ಅದ್ಭುತ ಬೌಲಿಂಗ್ ಹಾಗೂ ಸ್ಮೃತಿ ಮಂದಾನ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ ವನಿತೆಯರ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್ಗಳಿಂದ ಬಗ್ಗುಬಡಿದಿದೆ.
ಲಕ್ನೋದ ಅಟಲ್ ಬಿಹಾರಿ ವಾಜಪಾಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡಿದ್ದ ಮಿಥಾಲಿ ಪಡೆ, ಆಫ್ರಿಕಾದ ಮಹಿಳೆಯರನ್ನು ಕೇವಲ 157 ರನ್ಗಳಿಗೆ ಆಲೌಟ್ ಮಾಡಿತು.
ಲಾರಾ ಗೂಡಲ್ 49 ಮತ್ತು ನಾಯಕಿ ಸುನೆ ಲೂಸ್ 36 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
-
What a way to level the series! 👍👍
— BCCI Women (@BCCIWomen) March 9, 2021 " class="align-text-top noRightClick twitterSection" data="
A fine effort from #TeamIndia as they win the 2nd @Paytm #INDWvSAW ODI by 9⃣ wickets. 👏👏
Scorecard 👉 https://t.co/cJaryEyTw5 pic.twitter.com/ynpnGzrLrI
">What a way to level the series! 👍👍
— BCCI Women (@BCCIWomen) March 9, 2021
A fine effort from #TeamIndia as they win the 2nd @Paytm #INDWvSAW ODI by 9⃣ wickets. 👏👏
Scorecard 👉 https://t.co/cJaryEyTw5 pic.twitter.com/ynpnGzrLrIWhat a way to level the series! 👍👍
— BCCI Women (@BCCIWomen) March 9, 2021
A fine effort from #TeamIndia as they win the 2nd @Paytm #INDWvSAW ODI by 9⃣ wickets. 👏👏
Scorecard 👉 https://t.co/cJaryEyTw5 pic.twitter.com/ynpnGzrLrI
ಭಾರತದ ಪರ ವೇಗದ ಬೌಲರ್ ಜೂಲನ್ ಗೋಸ್ವಾಮಿ 42 ರನ್ ನೀಡಿ 4 ವಿಕೆಟ್ ಪಡೆದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 37ಕ್ಕೆ 3 ಹಾಗೂ ಮಾನ್ಸಿ ಜೋಶಿ 2 ಹಾಗೂ ಕೌರ್ ಒಂದು ವಿಕೆಟ್ ಪಡೆದರು.
158 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ 28.4 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ 64 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 10 ಬೌಂಡರಿ ಸಹಿತ ಅಜೇಯ 80 ರನ್ಗಳಿಸಿದರೆ, ಪೂನಮ್ ರಾವುತ್ 89 ಎಸೆತಗಳಲ್ಲಿ 8 ಬೌಂಡರಿ ಸಹಿತ ಅಜೇಯ 62 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ರೋಡ್ರಿಗ್ಸ್ ಕೇವಲ 9 ರನ್ಗಳಿಸಿ ಇಸ್ಮಾಯಿಲ್ಗೆ ವಿಕೆಟ್ ಒಪ್ಪಿಸಿದರು.
ಮೊದಲ ಪಂದ್ಯವನ್ನು 8 ವಿಕೆಟ್ಗಳಿಂದ ಕಳೆದುಕೊಂಡಿದ್ದ ಭಾರತ ತಂಡ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. 3 ನೇ ಪಂದ್ಯ ಮಾರ್ಚ್ 12 ರಂದು ನಡೆಯಲಿದೆ.
ಇದನ್ನೂ ಓದಿ: ಕೋನೇರು ಹಂಪಿ ಮುಡಿಗೆ ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ