ಪೋರ್ಟ್ ಆಫ್ ಸ್ಪೇನ್: ನಾಯಕ ವಿರಾಟ್ ಕೊಹ್ಲಿ ಗಳಿಸಿದ 42ನೇ ಶತಕ ಹಾಗೂ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕದ (71) ಬಲದಿಂದ ಟೀಂ ಇಂಡಿಯಾ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ಗೆ 280 ರನ್ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಶಿಖರ್ ಧವನ್ (2) ಹಾಗೂ ರೋಹಿತ್ ಶರ್ಮಾ (18) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಭ್ ಪಂತ್ ಕೂಡ 20 ರನ್ ಗಳಿಸಿ ದೊಡ್ಡ ಹೊಡೆತ ಬಾರಿಸಲೆತ್ನಿಸಿ ವಿಫಲರಾದರು.
-
Innings Break!
— BCCI (@BCCI) August 11, 2019 " class="align-text-top noRightClick twitterSection" data="
A stupendous 120 from @imVkohli followed by a gritty knock of 71 from Iyer guides #TeamIndia to a total of 279/7.
Live - https://t.co/HYucfevoBN #WIvIND pic.twitter.com/ZNI5V2k1wh
">Innings Break!
— BCCI (@BCCI) August 11, 2019
A stupendous 120 from @imVkohli followed by a gritty knock of 71 from Iyer guides #TeamIndia to a total of 279/7.
Live - https://t.co/HYucfevoBN #WIvIND pic.twitter.com/ZNI5V2k1whInnings Break!
— BCCI (@BCCI) August 11, 2019
A stupendous 120 from @imVkohli followed by a gritty knock of 71 from Iyer guides #TeamIndia to a total of 279/7.
Live - https://t.co/HYucfevoBN #WIvIND pic.twitter.com/ZNI5V2k1wh
ಈ ವೇಳೆ ಒಂದಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 4ನೇ ವಿಕೆಟ್ಗೆ 125 ರನ್ ಸೇರಿಸಿದರು. ತಂಡದ ಮೊತ್ತ 226 ರನ್ ಆಗಿದ್ದಾಗ 120 ರನ್ ಗಳಿಸಿದ್ದ ಕೊಹ್ಲಿ ಔಟ್ ಆದರು. ಬಳಿಕ ಯಾವುದೇ ಉತ್ತಮ ಜೊತೆಯಾಟ ಮೂಡಿಬರಲಿಲ್ಲ. ಶ್ರೇಯಸ್ ಅಯ್ಯರ್ 71, ಕೇದಾರ್ ಜಾಧವ್ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೆಜಾ 16 ರನ್ ಗಳಿಸಿ ಅಜೇಯರಾಗುಳಿದರು.
ಒಟ್ಟಾರೆ ಟೀಂ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್ ಕಲೆ ಹಾಕಿತು. ಕೆರಿಬಿಯನ್ನರ ಪರ ಕಾರ್ಲಸ್ ಬ್ರಾಥ್ವೈಟ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.