ಟೌಂಟನ್: ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 322 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ವಿಶ್ವಕಪ್ನಲ್ಲಿ 2ನೇ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆಗೆ ಬಾಂಗ್ಲಾದೇಶ ತಂಡ ಪಾತ್ರವಾಗಿದೆ.
ನಿನ್ನೆ ಟೌಂಟನ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಲೆವಿಸ್ 70(67 ಎಸೆತ), ಶೈ ಹೋಪ್ 96(121), ಶಿಮ್ರಾನ್ ಹೆಟ್ಮೈರ್ 50(26) ಹಾಗೂ ಹೋಲ್ಡರ್ 33(15) ರನ್ ಗಳಿಸಿ 321 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
322 ರನ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಶಕಿಬ್ರ ಶತಕ (124) ಹಾಗೂ ಲಿಟ್ಟನ್ ದಾಸ್ರ(94) ಅರ್ಧಶತಕಗಳ ನೆರವಿನಿಂದ 8.3 ಓವರ್ ಬಾಕಿ ಇರುವಾಗಲೇ ಗೆಲುವು ದಾಖಲಿಸಿ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ 2ನೇ ತಂಡ ಎಂಬ ದಾಖಲೆಗೆ ಪಾತ್ರವಾಯಿತು.
ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡಗಳು;
ತಂಡಗಳು ಟಾರ್ಗೆಟ್
ಐರ್ಲೆಂಡ್ 325
ಬಾಂಗ್ಲಾದೇಶ 322
ಬಾಂಗ್ಲಾದೇಶ 319
ಶ್ರೀಲಂಕಾ 313
ಶ್ರೀಲಂಕಾ 310
ಐರ್ಲೆಂಡ್ 307