ನವದೆಹಲಿ: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಪಂದ್ಯಾವಳಿಗೆ ಶ್ರೀಲಂಕಾ ಮತ್ತು ಯುಎಇ ಅಗ್ರ ಎರಡು ಬ್ಯಾಕಪ್ ಸ್ಥಳಗಳಾಗಿವೆ.
ಕ್ರೀಡಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗದಿದ್ದಲ್ಲಿ ಉಭಯ ದೇಶಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ.
ಭಾರತವು 2021 ಪಂದ್ಯಾವಳಿಯ ಆತಿಥೇಯರಾಗಿ ಉಳಿಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕಳೆದ ವಾರ ಘೋಷಿಸಿತ್ತು. ಆದರೆ, ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಪಂದ್ಯಾವಳಿ 2023ರಲ್ಲಿ ನಡೆಯಲಿದೆ. ಇನ್ನು ಬ್ಯಾಕಪ್ ಸ್ಥಳಗಳನ್ನು ಗುರುತಿಸುವುದು ಯಾವುದೇ ಪಂದ್ಯಾವಳಿಗೆ ಪ್ರಮಾಣಿತ ಅಭ್ಯಾಸವಾಗಿದೆ.
ಕೊರೊನ ವೈರಸ್ ಕಾರಣದಿಂದಾಗಿ ಈ ವರ್ಷದ ಮಾರ್ಚ್‌ನಿಂದ ಭಾರತದಲ್ಲಿ ಕ್ರಿಕೆಟ್ ಸ್ಥಗಿತಗೊಂಡಿದೆ. ಮಾರ್ಚ್ 29 ರಂದು ಪ್ರಾರಂಭವಾಗಬೇಕಿದ್ದ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಕೂಡ ಮುಂದೂಡಲಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಪಂದ್ಯಾವಳಿಯನ್ನು ಅನಿರ್ದಿಷ್ಟವಾಗಿ ಮುಂದೂಡಬೇಕಾಯಿತು. ಆದಾಗ್ಯೂ, ಯುಎಇನಲ್ಲಿ ಈ ವರ್ಷದ ಐಪಿಎಲ್ ಅನ್ನು ಆಯೋಜಿಸಲಾಗುತ್ತಿದ್ದು, ಸೆಪ್ಟೆಂಬರ್ 19ಕ್ಕೆ ಟೂರ್ನಿ ಪ್ರಾರಂಭವಾಗಲಿದೆ.