ಕೇಪ್ಟೌನ್ : ಕ್ರಿಕೆಟ್ ದಕ್ಷಿಣ ಆಫ್ರಿಕಾದ ಟಿ20 ಲೀಗ್ ಮಜಾನ್ಸಿ ಸೂಪರ್ ಲೀಗ್ನ 2020ರ ಆವೃತ್ತಿಯನ್ನು 2021ರ ನವೆಂಬರ್-ಡಿಸೆಂಬರ್ ತಿಂಗಳಿಗೆ ಮುಂದೂಡಿರುವುದಾಗಿ ಸಿಎಸ್ಎ ಖಚಿತಪಡಿಸಿದೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ಪರಿಣಾಮಗಳಿಂದ ಉಂಟಾದ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಸ್ಥಾಪನಾ ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾದ ಪ್ರಧಾನ ಟಿ20 ಟೂರ್ನಮೆಂಟ್ ಮುಂದಿನ ವರ್ಷಕ್ಕೆ ಮುಂದೂಡುತ್ತಿರುವುದಾಗಿ ಸಿಎಸ್ಎ ಸಿಇಒ ಕುಗಾಂಡ್ರಿ ಗೋವೆಂಡರ್ ಖಚಿತಪಡಿಸಿದ್ದಾರೆ.
ಆದರೆ, 2021ರ ಟಿ20 ವಿಶ್ವಕಪ್ ನಂತರ ನಡೆಸುವ ನಿರ್ಧಾರ ಸರಿಯೇ ಎಂಬುದಕ್ಕೆ ಉತ್ತರಿಸಿರುವ ಅವರು ಆಟಗಾರರಿಗೆ ಅವಕಾಶ ಮಾಡಿಕೊಡಲು ಬೇರೊಂದು ಏಕ ಸುತ್ತಿನ ಸ್ಪರ್ಧೆ ಆಯೋಜಿಸುವುದಾಗಿ ಹೇಳಿದ್ದಾರೆ.
-
NEWS: Cricket South Africa can confirm the 2020 edition of the Mzansi Super League has been postponed to Nov-Dec 2021.
— Cricket South Africa (@OfficialCSA) September 28, 2020 " class="align-text-top noRightClick twitterSection" data="
We will stage a single-round domestic franchise T20 competition early next year.
Read more 👉 https://t.co/HSjzpvIJQW#MSLT20 pic.twitter.com/vvD62txrvQ
">NEWS: Cricket South Africa can confirm the 2020 edition of the Mzansi Super League has been postponed to Nov-Dec 2021.
— Cricket South Africa (@OfficialCSA) September 28, 2020
We will stage a single-round domestic franchise T20 competition early next year.
Read more 👉 https://t.co/HSjzpvIJQW#MSLT20 pic.twitter.com/vvD62txrvQNEWS: Cricket South Africa can confirm the 2020 edition of the Mzansi Super League has been postponed to Nov-Dec 2021.
— Cricket South Africa (@OfficialCSA) September 28, 2020
We will stage a single-round domestic franchise T20 competition early next year.
Read more 👉 https://t.co/HSjzpvIJQW#MSLT20 pic.twitter.com/vvD62txrvQ
'ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ಅಕ್ಟೋಬರ್ನಿಂದ ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದೇಶೀಯ ಯುವ ಕ್ರಿಕೆಟಿಗರು ತಮ್ಮ ಪ್ರದರ್ಶನದ ಮೂಲಕ ಪ್ರಭಾವ ಬೀರಲು ಅವಕಾಶ ಮಾಡಿಕೊಡಿಕೊಡಬೇಕೆಂಬುದನ್ನ ಅರ್ಥ ಮಾಡಿಕೊಂಡಿದ್ದೇವೆ. ಅದಕ್ಕಾಗಿ ಏಕಸುತ್ತಿನ ದೇಶೀಯ ಫ್ರಾಂಚೈಸ್ ಟಿ20 ಸ್ಪರ್ಧೇಯನ್ನು ನಡೆಸಲಾಗುವುದು. ಈ ಟೂರ್ನಿಗೆ ಅಭಿಮಾನಿಗಳಿಗೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ ಕ್ರಿಕೆಟ್ ಮಂಡಳಿಗೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ' ಎಂದು ಗೋವೆಂದರ್ ಹೇಳಿದ್ದಾರೆ.
2020ರ ಮಜಾನ್ಸಿ ಸೂಪರ್ ಲೀಗ್ ಈ ವರ್ಷದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಿತ್ತು.