ಲಾರ್ಡ್ಸ್: ವಿಶ್ವಕಪ್ನಲ್ಲಿ ಗೆಲುವು ಸಾಧಿಸದಿದ್ದರೂ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ 578 ರನ್ಗಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳಿಸಿದ ನಾಯಕ ಎಂಬ ಕೀರ್ತಿಗೆ ಪಾತ್ರರಾದರು.
ಭಾನುವಾರ ನಡೆದ ವಿಶ್ವಕಪ್ ಫೈನಲ್ನಲ್ಲಿ 30 ರನ್ಗಳಿಸಿದ ವಿಲಿಯಮ್ಸನ್ 5 ರನ್ಗಳಿಸಿದ್ದ ವೇಳೆ ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 2007 ರಲ್ಲಿ ಲಂಕಾ ತಂಡದ ನಾಯಕರಾಗಿದ್ದ ವೇಳೆ ಜಯವರ್ದನೆ 548 ರನ್ಗಳಿಸಿದ್ದರು. ಇದೀಗ 578 ರನ್ಗಳಿಸಿರುವ ವಿಲಿಯಮ್ಸನ್ ವಿಶ್ವಕಪ್ನಲ್ಲಿ ಹೆಚ್ಚು ರನ್ಗಳಿಸಿರುವ ನಾಯಕ ಎಂದೆನಿಸಿದರು.
ಕೇನ್ ವಿಲಿಯಮ್ಸನ್ ಈ ಟೂರ್ನಿಯಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದಾರೆ. ಇವರನ್ನು ಹೊರೆತುಪಡಿಸಿದರೆ ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ 507 ರನ್ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚು ರನ್ಗಳಿಸಿದ ನಾಯಕರು
ಹೆಸರು | ರನ್ | ವರ್ಷ |
ಕೇನ್ ವಿಲಿಯಮ್ಸನ್ | 578 | 2019 |
ಮಹೇಲಾ ಜಯವರ್ಧನೆ | 548 | 2007 |
ರಿಕಿ ಪಾಟಿಂಗ್ | 539 | 2007 |
ಆ್ಯರೋನ್ ಫಿಂಚ್ | 507 | 2019 |
ಎಬಿ ಡಿ ವಿಲಿಯರ್ಸ್ | 482 | 2015 |