ETV Bharat / sports

ಮತ್ತೊಂದು ಹೈ ವೋಲ್ಟೇಜ್​​​ ಪಂದ್ಯ: ಕಿವೀಸ್​ ಕಿವಿ ಹಿಂಡುತ್ತಾ ಹರಿಣ ಪಡೆ?

ಸೆಮಿಫೈನಲ್​ ಆಸೆ ಜೀವಂತವಾಗಿರಿಸಿಕೊಳ್ಳಲು ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಕಿವೀಸ್ ವಿರುದ್ಧ ನಡೆಯುವ ಈ ಪಂದ್ಯ ಮಹತ್ವವಾಗಿದೆ.

author img

By

Published : Jun 19, 2019, 12:47 PM IST

SA vs NZ

ಬರ್ಮಿಂಗ್​ಹ್ಯಾಮ್​: ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲ್ಯಾಂಡ್​ ಹಾಗೂ ಸತತ ಮೂರು ಸೋಲಿನ ನಂತರ ಏಕೈಕ ಗೆಲುವು ಕಂಡಿರುವ ದಕ್ಷಿಣ ಆಫ್ರಿಕಾ ಇಂದು ಬರ್ಮಿಂಗ್​ಹ್ಯಾಮ್​​ನ ಎಡ್​ಬಸ್ಟನ್​ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.

ಸೆಮಿಫೈನಲ್​ ಆಸೆ ಜೀವಂತವಾಗಿರಿಸಿಕೊಳ್ಳಲು ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೆಕಾದ ಒತ್ತಡದಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಕಿವೀಸ್ ವಿರುದ್ಧ ನಡೆಯುವ ಈ ಪಂದ್ಯ ಮಹತ್ವದ್ದಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಲುಂಗಿ ಎನ್​ಗಿಡಿ ಮತ್ತೆ ತಂಡ ಸೇರಿಕೊಂಡಿರುವುದು ದಕ್ಷಿಣ ಆಫ್ರಿಕಾ ಬೌಲಿಂಗ್​ ವಿಭಾಗಕ್ಕೆ ಆನೆ ಬಲ ತಂದಿದೆ. ಇನ್ನು ಬ್ಯಾಟಿಂಗ್​ನಲ್ಲಿ ಬಾಂಗ್ಲಾ ವಿರುದ್ಧ ಬಿಟ್ಟರೆ ಇಂಗ್ಲೆಂಡ್​ ಹಾಗೂ ಭಾರತದ ವಿರುದ್ಧ ಕಳಪೆ ಪ್ರದರ್ಶನ ತೋರುವ ಮೂಲಕ ಸುಲಭವಾಗಿ ಶರಣಾಗಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಅಫ್ಘಾನ್​ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್​ ಎರಡೂ ವಿಭಾಗದಲ್ಲೂ ಸುಧಾರಣೆ ಕಂಡುಕೊಂಡಿರುವುದು ಆಫ್ರಿಕಾ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಇಡೀ ಟೂರ್ನಿಯಲ್ಲಿ ಸೋಲೇ ಕಾಣದಿರುವ ಕಿವೀಸ್​, ವಿಶ್ವಕಪ್​ನಲ್ಲಿ ಆಫ್ರಿಕನ್ನರ ವಿರುದ್ಧ ತಮ್ಮ ಚಕ್ರಾಧಿಪತ್ಯ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್ ವರ್ಸಸ್‌ ಭಾರತ ತಂಡಗಳ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಿದ್ದರೂ ಪಂದ್ಯ ಮಳೆಯಿಂದ ರದ್ದಾಗಿತ್ತು.

2019 ರ ವಿಶ್ವಕಪ್​ನಲ್ಲಿ ಸಾಧನೆ:
ದಕ್ಷಿಣ ಆಫ್ರಿಕಾ: 3 ಸೋಲು, 1 ಗೆಲುವು, 1 ರದ್ದು,
ನ್ಯೂಜಿಲ್ಯಾಂಡ್​: 3 ಗೆಲುವು, 1 ರದ್ದು

ಏಕದಿನ ಕ್ರಿಕೆಟ್​ನಲ್ಲಿ ಮುಖಾಮುಖಿ
ಮುಖಾಮುಖಿ ಪಂದ್ಯಗಳು 70
ನ್ಯೂಜಿಲ್ಯಾಂಡ್​-24 ಗೆಲುವು
ದಕ್ಷಿಣ ಆಫ್ರಿಕಾ - 41 ಗೆಲುವು

ವಿಶ್ವಕಪ್​ಗಳಲ್ಲಿ ಮುಖಾಮುಖಿ: 7
ನ್ಯೂಜಿಲ್ಯಾಂಡ್​- 5 ಗೆಲುವು
ದಕ್ಷಿಣ ಆಫ್ರಿಕಾ - 2 ಗೆಲುವು

ಸಂಭಾವ್ಯ ತಂಡಗಳು:

ನ್ಯೂಜಿಲೆಂಡ್:

ಕೇನ್​ ವಿಲಿಯಮ್ಸನ್​ (ನಾಯಕ),​ ರಾಸ್​ ಟೇಲರ್, ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಲೂಕಿ ಫರ್ಗ್ಯುಸನ್​, ಮಾರ್ಟಿನ್​ ಗಪ್ಟಿಲ್​, ಮ್ಯಾಟ್​ ಹೆನ್ರಿ, ಟಾಮ್​ ಲಾಥಮ್​​, ಕಾಲಿನ್​ ಮನ್ರೊ, ಜಿಮ್ಮಿ ನಿಶಾಮ್​, ಮಿಚೆಲ್​ ಸ್ಯಾಂಟ್ನರ್

ದಕ್ಷಿಣ ಆಫ್ರಿಕಾ:

ಕ್ವಿಂಟನ್ ಡಿ ಕಾಕ್, ಹಾಶಿಮ್ ಆಮ್ಲಾ, ಮಾರ್ಕ್ರಾಮ್, ಫಾಫ್ ಡು ಪ್ಲೆಸಿಸ್ (ನಾಯಕ), ಡೆರ್ ಡಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹಲುಕ್ವೇವೊ, ಕ್ರಿಸ್ ಮೋರಿಸ್, ಕಾಗಿಸೊ ರಾಬಾಡಾ, ಇಮ್ರಾನ್ ತಾಹಿರ್, ಹೆಂಡ್ರಿಕ್ಸ್, ಲುಂಗಿ ಎನ್​ಗಿಡಿ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.