ETV Bharat / sports

2019 ವಿಶ್ವಕಪ್​ ಕ್ರಿಕೆಟ್​​ಗೆ 100 ದಿನಗಳಷ್ಟೇ ಬಾಕಿ: ಯಾರೆಲ್ಲ ಮಾಡ್ತಾರೆ ಕಮಾಲ್​​... - etv bharat

ಕ್ರಿಕೆಟ್​ ಹಬ್ಬ ವಿಶ್ವಕಪ್​ಗೆ ಇನ್ನು 100 ದಿನಗಳಷ್ಟೇ ಬಾಕಿ ಇದೆ. ಹಾಗಾಗಿ ಈ ಬಾರಿ ವಿಶ್ವಕಪ್​ನಲ್ಲಿ ಯಾವೆಲ್ಲ ಆಟಗಾರರು ಹಾಗೂ ತಂಡಗಳು ಮಿಂಚಲಿವೆ ಎನ್ನುವುದನ್ನ ನೋಡಲು ವೀಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕ್ರಿಕೆಟ್​ ಹಬ್ಬ ವಿಶ್ವಕಪ್​ಗೆ ಇನ್ನು 100 ದಿನಗಳಷ್ಟೇ ಬಾಕಿ.
author img

By

Published : Feb 19, 2019, 4:15 PM IST

ಲಂಡನ್​: ಈ ವರ್ಷ ನಡೆಯಲಿರುವ ಕ್ರಿಕೆಟ್​ ಹಬ್ಬ ವಿಶ್ವಕಪ್​ಗೆ ಇನ್ನು 100 ದಿನಗಳಷ್ಟೇ ಬಾಕಿ ಇದೆ. ಮೇ 30 ರಿಂದ ಇಂಗ್ಲೆಂಡ್​ ಹಾಗೂ ವೇಲ್ಸ್​ನಲ್ಲಿ ಕ್ರಿಕೆಟ್​ ಜಾತ್ರೆ ಆರಂಭವಾಗಲಿದೆ. ಈ ಮೆಗಾ ಇವೆಂಟ್​ಗೆ ಭಾರಿ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿ ವಿಶ್ವಕಪ್​ನಲ್ಲಿ ಯಾವೆಲ್ಲ ಆಟಗಾರರು ಹಾಗೂ ತಂಡಗಳು ಮಿಂಚಲಿವೆ ಎನ್ನುವುದನ್ನ ನೋಡಲು ವೀಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿದೆ ತಂಡಗಳ ಭವಿಷ್ಯ ಹಾಗೂ ಬಲಾಬಲ.

ಇಂಗ್ಲೆಂಡ್​: 1975 ರಲ್ಲಿ ಕ್ರಿಕೆಟ್​ ವಿಶ್ವಕಪ್​ ಆರಂಭವಾದಾಗಿನಿಂದ ಇದುವರೆಗೂ ಇಂಗ್ಲೆಂಡ್ ಚಾಂಪಿಯನ್​ ಆಗಿ ಹೊರಹೊಮ್ಮಿಲ್ಲ. ಮೂರು ಬಾರಿ ಫೈನಲ್​ ತಲುಪಿದರೂ ಫೈನಲ್​ ಗೆಲುವಿನ ಕನಸು ಈಡೇರಿಲ್ಲ. ಇನ್ನು ಐದು ವಿಶ್ವಕಪ್​ಗಳಲ್ಲಿ ಬ್ರಿಟನ್​ ತಂಡ ಗ್ರೂಪ್​ ಸ್ಟೇಜ್​ಗಳಿಂದಲೇ ಔಟ್​ ಆಗಿದೆ. ಇದೇನೇ ಇರಲಿ ಏಕದಿನ ಕ್ರಿಕೆಟ್​ನಲ್ಲಿ ಇಯಾನ್​ ಮೊರ್ಗನ್ ಟೀಂ ನಂಬರ್​ ಒನ್ ಸ್ಥಾನದಲ್ಲಿದೆ. ಇನ್ನು ಈ ಬಾರಿಯ ವಿಶ್ವಕಪ್​ ಅವರದ್ದೇ ನೆಲದಲ್ಲಿ ನಡೆಯುತ್ತಿರುವುದು ಪ್ಲಸ್​ ಪಾಯಿಂಟ್​. ಇನ್ನು ಜೋ ರೂಟ್​ ಆಂಗ್ಲ ಪಡೆಯ ಗೇಮ್​ ಚೇಂಜರ್​ ಎಂದೇ ಬಣ್ಣಿಸಲಾಗುತ್ತಿದೆ. ಆರು ಏಕದಿನ ಶತಕ ಬಾರಿಸಿರುವ ರೂಟ್​ 117 ಸ್ಟ್ರೈಕಿಂಗ್​ ರೇಟ್​​ನಲ್ಲಿ ರನ್​ ಬಾರಿಸಿದ್ದಾರೆ.

ಇಂಡಿಯಾ: ಒನ್​ ಡೇ ಇಂಟರ್​​ನ್ಯಾಷನಲ್​ ಕ್ರಿಕೆಟ್​​ನಲ್ಲಿ 2 ನೇ ಸ್ಥಾನದಲ್ಲಿರುವ ಭಾರತ ತಂಡ, ನಾಯಕ ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದೆ. ಅಷ್ಟೇ ಅಲ್ಲ, 2018 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 5-1, ವೆಸ್ಟ್​​ ಇಂಡೀಸ್ (3-1) ಮತ್ತು ಏಷ್ಯಾ ಕಪ್​ ಗೆಲುವು ಭಾರತ ಏಕದಿನ ಪಂದ್ಯಗಳಲ್ಲಿ ಬಲಾಢ್ಯ ಎಂಬುದನ್ನು ತೋರಿಸಿದೆ.

undefined

ವಿಶೇಷ ಎಂದರೆ ವಿರಾಟ್​ ಕೊಹ್ಲಿ ಅವರೇ ಗೇಮ್​ ಚೇಂಜರ್​ ಆಟಗಾರರಾಗಿದ್ದಾರೆ. ಇನ್ನು ಬೌಲಿಂಗ್​ ವಿಭಾಗಕ್ಕೆ ಬಂದರೆ ಕುಲ್ದೀಪ್​ ಯಾದವ್​ ಲೀಡ್​ ರೋಲ್​ ಮಾಡಲಿದ್ದಾರೆ. 24 ವರ್ಷದ ಯಾದವ್​ 19 ಏಕದಿನ ಕ್ರಿಕೆಟ್​ನಲ್ಲಿ 45 ವಿಕೆಟ್​ ಪಡೆದು ತಮ್ಮ ಪರಾಕ್ರಮ ಮೆರೆದಿದ್ದಾರೆ.

ಪಾಕಿಸ್ತಾನ: ಈ ತಂಡವನ್ನ ಯಾವುದೇ ಕಾರಣಕ್ಕೂ ಹೀಗೆ ಅಂತಾ ಪ್ರೆಡಿಕ್ಟ್ ಮಾಡಲು ಸಾಧ್ಯವಾಗಿಲ್ಲ. ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಚಾಂಪಿಯನ್​ ಟ್ರೋಫಿ ಗೆದ್ದುಕೊಂಡಿತ್ತು. ನಾಯಕ ಸರ್ಫರಾಜ್ ಅಹಮ್ಮದ್ ನೇತೃತ್ವದ ತಂಡದಲ್ಲಿ ಕೆಲ ಅದ್ಭುತ ಪ್ರತಿಭೆಗಳಿವೆ. ಮೊಹಮ್ಮದ್​ ಅಮಿರ್​ನಿಂದ ಹಿಡಿದು ಉಸ್ಮಾನ್​ ಶಿನ್ವಾರಿ ಹಾಗೂ ಹಸನ್​ ಅಲಿ ವರೆಗೂ ಉತ್ತಮ ಆಟಗಾರರಿದ್ದಾರೆ. ಆದರೆ ಏಕದಿನದಲ್ಲಿ ಸ್ಥಿರವಾದ ಆಟ ಕಂಡು ಬಂದಿಲ್ಲ.

1992 ರಲ್ಲಿ ವಿಶ್ವಕಪ್ ಎತ್ತಿ ಹಿಡಿದ ಪಾಕ್​ ತಂಡದಲ್ಲಿ ಈಗ ಬಾಬರ್ ಅಜಂ ಗೇಮ್​ ಚೇಂಜ ಮಾಡಬಲ್ಲ ಆಟಗಾರನಾಗಿದ್ದಾರೆ. ಸರಾಸರಿ 51ರಂತೆ ರನ್​ ಬಾರಿಸುತ್ತಿರುವ ಅಜಂ ಎಂಟು ಸೆಂಚುರಿ ಹಾಗೂ 10 ಅರ್ಧ ಶತಕ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾ: ಲೀಗ್​ ಮ್ಯಾಚ್​ಗಳಲ್ಲಿ ಸೂಪರ್​ ಆಟ... ಸೆಮಿಫೈನಲ್​​ನಲ್ಲಿ ಮುಗ್ಗರಿಸುವ ಆಟ. ಇದು 1992ರಿಂದ ದಕ್ಷಿಣ ಆಫ್ರಿಕಾ ತಂಡದ ನತದೃಷ್ಟದ ಆಟ. ಈ ಬಾರಿಯಾದರೂ ದಕ್ಷಿಣ ಆಫ್ರಿಕಾ ಆಗುತ್ತಾ ಚಾಂಪಿಯನ್​ ಎಂದು ವಿಶ್ವಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಸ್ಟಾರ್​ ಬ್ಯಾಟ್ಸ್​​ಮನ್​ ಎಬಿ ಡಿವಿಲಿಯರ್ಸ್​​ ಹಾಗೂ ವೇಗದ ಬೌಲರ್​ ಮಾರ್ನೆ ಮೊರ್ಕೆಲ್​ ನಿವೃತ್ತಿ ಘೋಷಿಸಿದ್ದಾರೆ. 2018 ರಲ್ಲಿ ದಕ್ಷಿಣ ಆಫ್ರಿಕಾ 12 ಪಂದ್ಯಗಳನ್ನ ಗೆಲುವು ಸಾಧಿಸಿದರೆ, 10 ಸೋಲುಗಳನ್ನ ಅನುಭವಿಸಿದೆ.

ಈ ನಡುವೆಯೂ ಡೆವಿಡ್​ ಮಿಲ್ಲರ್​ ದಕ್ಷಿಣ ಆಫ್ರಿಕಾದ ಗೇಮ್​ ಚೇಂಜರ್​ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ ಮಿಲ್ಲರ್​ ಮ್ಯಾನ್​ ಆಫ್​ ದಿ ಮ್ಯಾಚ್​ ಆಗಿ ಹೊರಹೊಮ್ಮಿದ್ದರು. ಇನ್ನು ಬೌಲಿಂಗ್​ನಲ್ಲಿ ಲುಂಗಿ ನಿಗಿದಿ ಕಮಾಲ್ ಮಾಡ್ತಿದ್ದಾರೆ.

undefined

ವೆಸ್ಟ್​​ ಇಂಡೀಸ್​: 1975 ಹಾಗೂ 79 ರ ವಿಶ್ವಕಪ್​ ವಿಜೇತ ತಂಡ ವೆಸ್ಟ್​ ಇಂಡೀಸ್ ಆ ಬಳಿಕ ಮತ್ತೆ ವರ್ಲ್ಡ್​ ಕಪ್​ ಎತ್ತಿ ಹಿಡಿಯಲು ವಿಫಲವಾಗಿದೆ. ಆದರೆ, ಇತ್ತೀಚೆಗೆ ತನ್ನದೇ ನೆಲದಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಗೆದ್ದು ಬೀಗಿದೆ. 2011 ಹಾಗೂ 2015 ರಲ್ಲಿ ವೆಸ್ಟ್​ ಇಂಡೀಸ್​ ಕ್ವಾರ್ಟರ್​​ ಫೈನಲ್ ತಲುಪಲು ವಿಂಡೀಸ್​ ವಿಫಲವಾಗಿತ್ತು. ಇನ್ನು ತಂಡದ ಇತ್ತೀಚಿನ ಪ್ರದರ್ಶನಕ್ಕೆ ಬರೋದಾದರೆ, 2018 ರಲ್ಲಿ ತಾನಾಡಿದ 18 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್​ 8 ಪಂದ್ಯಗಳನ್ನ ಮಾತ್ರವೇ ಗೆದ್ದುಕೊಂಡಿದೆ. 2017 ರಲ್ಲಿ ಕೆರಿಬಿಯನ್ನರು ತಾವಾಡಿದ 22 ಪಂದ್ಯಗಳಲ್ಲಿ ಕೇವಲ 3 ಮ್ಯಾಚ್​ಗಳನ್ನಷ್ಟೇ ಗೆದ್ದುಕೊಂಡಿದ್ದರು.

ಈಗ ಕ್ರಿಸ್​ ಗೇಲ್​ 40 ವರ್ಷವಾಗಿದೆ. ಹೀಗಾಗಿ ಈ ಬಾರಿ ಆತ ಕಮಾಲ್​ ಮಾಡ್ತಾನಾ ಕಾದುನೋಡಬೇಕಿದೆ. ಆದರೆ 22 ವರ್ಷದ ಹೆಟ್ಮೇಯರ್​ ಅದ್ಭುತ ಫಾರ್ಮ್​ನಲ್ಲಿದ್ದು, ಗೇಮ್​ ಚೇಂಜರ್​ ಆಗುವ ಎಲ್ಲ ಲಕ್ಷಣಗಳಿವೆ.

ಆಸ್ಟ್ರೇಲಿಯಾ: ಐದು ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ ಈ ಸಲದ ವಿಶ್ವಕಪ್​ನಲ್ಲಿ ಮಂಕಾದಂತೆ ಕಾಣುತ್ತಿದೆ. ಬಾಲ್​ ಟ್ಯಾಂಪರಿಂಗ್​ ವಿವಾದಕ್ಕೆ ಸಿಲುಕಿದ ಮೇಲೆ ತಂಡದ ಪ್ರದರ್ಶನ ಸಂಪೂರ್ಣ ಕೆಳಕ್ಕೆ ಇಳಿದಿದೆ. ಸೋಲುಗಳ ಮೇಲೆ ಸೋಲು ಅನುಭವಿಸಿ ಹಿಂದಿನ ಖದರ್ ಕಳೆದುಕೊಂಡಿದೆ. ಆದರೂ ಆಸ್ಟ್ರೇಲಿಯಾ ತಂಡವನ್ನ ಕಡೆಗಣಿಸುವಂತಿಲ್ಲ. ಯಾಕೆಂದರೆ ನಿಷೇಧಕ್ಕೆ ಒಳಗಾದ ಸ್ಟೀವ್​ ಸ್ಮಿತ್​, ಡೇವಿಡ್ ವಾರ್ನರ್​ ವಿಶ್ವಕಪ್​​ ಟೀಂ ಸೇರಿಕೊಳ್ಳಲಿದ್ದಾರೆ.

Intro:Body:

2019 Cricket World Cup: How the ten contenders are shaping up

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.