ಮ್ಯಾಂಚೆಸ್ಟರ್: 1999 ಜೂನ್ 8ರಂದು ಭಾರತ-ಪಾಕಿಸ್ತಾನ ವಿಶ್ವಕಪ್ನ ನಾಲ್ಕನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕನ್ನಡಿಗರಾದ ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಪಾಕ್ನ ಎಲ್ಲಾ 10 ವಿಕೆಟ್ಗಳನ್ನು ಪಡೆದುಕೊಂಡಿದ್ದು ವಿಶೇಷ.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ 61 ರನ್ , ನಾಯಕ ಮೊಹಮ್ಮದ್ ಅಜರುದ್ದೀನ್ 59 ರನ್ ಹಾಗೂ ಸಚಿನ್ ತೆಂಡೂಲ್ಕರ್ರ 45 ರನ್ಗಳ ನೆರವಿನಿಂದ 227 ರನ್ಗಳ ಸಾಧಾರಣ ಮೊತ್ತ ದಾಖಲಿಸಿತ್ತು.
ಇದೀಗ 20 ವರ್ಷಗಳ ನಂತರ ಇದೇ ಕ್ರೀಡಾಂಗಣದಲ್ಲಿ ಮತ್ತೆ ಎರಡು ತಂಡಗಳೂ ಎದುರಾಗುತ್ತಿವೆ. ಹೀಗಾಗಲೆ ಪಾಕಿಸ್ತಾನದ ವಿರುದ್ಧ 6-0 ಯಲ್ಲಿ ಅಜೇಯ ದಾಖಲೆ ಹೊಂದಿರುವ ಭಾರತ ತಂಡ ತನ್ನ ವಿಜಯ ಯಾತ್ರೆಯನ್ನು ಮುಂದುವರಿಸುವ ಕಾತುರದಲ್ಲಿದ್ದರೆ, ಈ ವರ್ಷವಾದರೂ ಭಾರತವನ್ನು ಮಣಿಸಿ ವಿಶ್ವಕಪ್ನಲ್ಲಿ ಗೆಲುವಿನ ಖಾತೆ ತೆರೆಯುವ ಆಲೋಚನೆಯಲ್ಲಿ ಪಾಕಿಸ್ತಾನಿದೆ.