ETV Bharat / sports

ಐಪಿಎಲ್​ ವೀಕ್ಷಣೆಯಲ್ಲಿ ಹೊಸ ದಾಖಲೆ: ಮುಂಬೈ-ಚೆನ್ನೈ ಪಂದ್ಯ ವೀಕ್ಷಿಸಿದವರ ಸಂಖ್ಯೆ ಎಷ್ಟು ಕೋಟಿ ಗೊತ್ತಾ? - 20 crore people watched MI vs CSK match

ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಮೊದಲ ಪಂದ್ಯವನ್ನು ಸುಮಾರು 20 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಶ್ವದ ಯಾವುದೇ ಲೀಗ್​ ಮೊದಲ ದಿನ ಇಷ್ಟೊಂದು ವೀಕ್ಷಣೆ ಆಗಿಲ್ಲ. ಆದರೆ ಐಪಿಎಲ್​​ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಿದೆ.

ಐಪಿಎಲ್​ ವೀಕ್ಷಣೆಯಲ್ಲಿ ಹೊಸ ದಾಖಲೆ
ಐಪಿಎಲ್​ ವೀಕ್ಷಣೆಯಲ್ಲಿ ಹೊಸ ದಾಖಲೆ
author img

By

Published : Sep 22, 2020, 4:25 PM IST

Updated : Sep 22, 2020, 5:30 PM IST

ದುಬೈ: ಯುಎಇಯಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್​ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆಗೆ ಪಾತ್ರವಾಗಿದೆ. ಸೆಪ್ಟೆಂಬರ್​ 19 ರಂದು ಮುಂಬೈ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳ ನಡುವೆ ನಡೆದ ಮೊದಲ ಉದ್ಘಾಟನಾ ಪಂದ್ಯ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎನಿಸಿಕೊಂಡಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಐಪಿಎಲ್​ನ ಆರಂಭಿಕ ಪಂದ್ಯ ಹೊಸ ದಾಖಲೆ ಬರೆದಿದೆ ಎಂದು ಟ್ವಿಟ್ಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

  • Opening match of #Dream11IPL sets a new record!

    As per BARC, an unprecedented 20crore people tuned in to watch the match. Highest ever opening day viewership for any sporting league in any country- no league has ever opened as big as this. @IPL @SGanguly99 @UShanx @DisneyPlusHS

    — Jay Shah (@JayShah) September 22, 2020 " class="align-text-top noRightClick twitterSection" data=" ">

"ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್‌ಸಿ)ಯ ಪ್ರಕಾರ, ಸುಮಾರು 20 ಕೋಟಿ ಜನರು ಲೀಗ್​ನ ಮೊದಲ ಪಂದ್ಯವನ್ನು ವೀಕ್ಷಿಸಲು ಟ್ಯೂನ್ ಮಾಡಿದ್ದಾರೆ. ಇದು ವಿಶ್ವದಲ್ಲೇ ಆರಂಭಿಕ ದಿನದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ. ವಿಶ್ವದ ಯಾವುದೇ ದೇಶದ, ಯಾವುದೇ ಕ್ರೀಡಾ ಲೀಗ್​ ಆರಂಭದ ದಿನದಲ್ಲಿ ಇಷ್ಟು ವೀಕ್ಷಣೆ ದಾಖಲಾಗಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಈ ಬಗ್ಗೆ ಟ್ವೀಟ್​ ಮೂಲಕ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದೆ. " ಡ್ರೀಮ್​11 ಐಪಿಎಲ್​ ಒಂದು ಕನಸಿನ ಆರಂಭ ಪಡೆದಿದೆ. ನಾವು ಟಿವಿ ಮತ್ತು ಡಿಜಿಟಲ್​ ವೀವರ್​ಶಿಪ್​ನಲ್ಲಿ ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆದಿದ್ದೇವೆ. ಇದಕ್ಕೆ ಕಾರಣವಾದ ಭಾರತ ಮತ್ತು ಇಡೀ ವಿಶ್ವಕ್ಕೆ ಧನ್ಯವಾದಗಳು. ಮುಂಬೈ ಮತ್ತು ಚೆನ್ನೈ ಪಂದ್ಯದ ವೀಕ್ಷಣೆ 200 ಮಿಲಿಯನ್​ " ಎಂದು ತಮ್ಮ ಅಧಿಕೃತ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದೆ.

Last Updated : Sep 22, 2020, 5:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.