ಮುಂಬೈ: ಮೊದಲೆರಡು ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಮುಗ್ಗರಿಸಿದ್ದ ಭಾರತ ತಂಡ 36 ವರ್ಷಗಳ ಹಿಂದೆ 2 ಬಾರಿ ಚಾಂಪಿಯನ್ ಆಗಿದ್ದ ದೈತ್ಯ ವಿಂಡೀಸ್ ವಿರುದ್ಧ ಮೂರನೇ ವಿಶ್ವಕಪ್ ಫೈನಲ್ನಲ್ಲಿ 43 ರನ್ಳಿಂದ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿತ್ತು.
ಕಪಿಲ್ ದೇವ್ ನಾಯಕತ್ವದಲ್ಲಿ ಮೂರನೇ ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಭಾರತ ತಂಡ , ಮೊದಲ 2 ವಿಶ್ವಕಪ್ನಲ್ಲಿ ಗೆದ್ದಿದ್ದು ಕೇವಲ ಒಂದೇ ಪಂದ್ಯ. ಆದರೆ ಮೂರನೇ ವಿಶ್ವಕಪ್ನಲ್ಲಿ ಮಾತ್ರ ಬಲಿಷ್ಠ ವಿಂಡೀಸ್ ತಂಡದೆದುರು ಭರ್ಜರಿ ಪ್ರದರ್ಶನ ತೋರಿ ವಿಶ್ವಕಪ್ ಎತ್ತಿ ಹಿಡಿಯಿತು.
1983ರ ವಿಶ್ವಕಪ್ ಲೀಗ್ನಲ್ಲಿ ಭಾರತ ಪ್ರದರ್ಶನ
8 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ತಂಡಗಳೊಂದಿಗೆ ಭಾರತ ಸ್ಥಾನ ಪಡೆದುಕೊಂಡಿತ್ತು. ಲೀಗ್ನಲ್ಲಿ ಮೂರು ತಂಡದ ವಿರುದ್ಧ 2 ಪಂದ್ಯಗಳನ್ನಾಡಿತ್ತು. ವಿಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಒಂದು ಗೆಲುವು, ಒಂದು ಸೋಲು ಕಂಡಿದ್ದ ಕಪಿಲ್ ಪಡೆ, ಜಿಂಬಾಬ್ವೆ ವಿರುದ್ಧ 2 ಪಂದ್ಯಗಳ ಗೆಲುವಿನೊಂದಿಗೆ ಟೂರ್ನಿಯಲ್ಲಿ 4 ಗೆಲುವು ಪಡೆದು ಎ ಗುಂಪಿನಲ್ಲಿ ವಿಂಡೀಸ್ ಜೊತೆ ಸೆಮಿ ಫೈನಲ್ ಪ್ರವೇಶಿಸಿತು.
-
June 25, 1983 - #TeamIndia won the @ICC Cricket World Cup #ThisDayThatYear pic.twitter.com/ArG7ypFBVq
— BCCI (@BCCI) June 25, 2016 " class="align-text-top noRightClick twitterSection" data="
">June 25, 1983 - #TeamIndia won the @ICC Cricket World Cup #ThisDayThatYear pic.twitter.com/ArG7ypFBVq
— BCCI (@BCCI) June 25, 2016June 25, 1983 - #TeamIndia won the @ICC Cricket World Cup #ThisDayThatYear pic.twitter.com/ArG7ypFBVq
— BCCI (@BCCI) June 25, 2016
ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ಗೆ ಎಂಟ್ರಿ...
ಮೊದಲೆರಡು ವಿಶ್ವಕಪ್ನಲ್ಲಿ ಲೀಗ್ನಲ್ಲೇ ಹೊರಬಿದ್ದಿದ್ದ ಭಾರತ ಸೆಮಿಫೈನಲ್ ಪ್ರವೇಶಿಸಿರುವುದೇ ದೊಡ್ಡ ಸಾಧನೆ. ಇಂಗ್ಲೆಂಡ್ ವಿರುದ್ಧ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಬಿಂಬಿತವಾಗಿತ್ತು. ಆದರೆ ಅಂದು ನಡೆದದ್ದೇ ಬೇರೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್, ಭಾರತದ ಬೌಲಿಂಗ್ ದಾಳಿಗೆ ಸಿಲುಕಿ 213 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ಕಪಿಲ್ ದೇವ್ 35ಕ್ಕೆ 3, ಅಮರ್ನಾಥ್ 27ಕ್ಕೆ 2 ಹಾಗೂ ರೋಜರ್ ಬಿನ್ನಿ 43 ಕ್ಕೆ 2 ವಿಕೆಟ್ ಪಡೆದಿದ್ದರು.
214 ರನ್ಗಳ ಗುರಿ ಬೆನ್ನೆತ್ತಿದ ಭಾರತಕ್ಕೆ ಯಶ್ಪಾಲ್ ಶರ್ಮಾ 61, ಸಂದೀಪ್ ಪಾಟೀಲ್ 51, ಮೋಹಿಂದರ್ ಅಮರ್ನಾಥ್ 46 ರನ್ಗಳ ನೆರವಿನಿಂದ ಫೈನಲ್ಗೆ ತಲುಪಿತು.
-
On this iconic day, #TeamIndia Head coach & 1983 World Cup winner @RaviShastriOfc takes us back to where it all started 🏆🏆 pic.twitter.com/phMJ2vbAfv
— BCCI (@BCCI) June 25, 2019 " class="align-text-top noRightClick twitterSection" data="
">On this iconic day, #TeamIndia Head coach & 1983 World Cup winner @RaviShastriOfc takes us back to where it all started 🏆🏆 pic.twitter.com/phMJ2vbAfv
— BCCI (@BCCI) June 25, 2019On this iconic day, #TeamIndia Head coach & 1983 World Cup winner @RaviShastriOfc takes us back to where it all started 🏆🏆 pic.twitter.com/phMJ2vbAfv
— BCCI (@BCCI) June 25, 2019
2 ಬಾರಿಯ ಚಾಂಪಿಯನ್ನರಿಗೆ ಶಾಕ್: ಭಾರತಕ್ಕೆ ಚೊಚ್ಚಲ ವಿಶ್ವಕಪ್
36 ವರ್ಷಗಳ ಹಿಂದೆ ನಡೆದಿದ್ದ ಫೈನಲ್ನಲ್ಲಿ ಪಂದ್ಯಕ್ಕೂ ಮುನ್ನ ವಿಂಡೀಸ್ಗೆ ಹ್ಯಾಟ್ರಿಕ್ ಪ್ರಶಸ್ತಿ ಪಕ್ಕಾ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಅಂದು ಭಾರತ ನೀಡಿದ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತು ತಲೆಬಾಗಿಸಿತ್ತು.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ, ವಿಂಡೀಸ್ ಬೌಲಿಂಗ್ ದಿಗ್ಗಜರಾದ ಮಾರ್ಷಲ್(3), ಆ್ಯಂಡಿ ಗಾರ್ನರ್ (2), ಜಾಯೊಲ್ ಗಾರ್ನರ್(1), ಮೈಕಲ್ ಹೋಲ್ಡಿಂಗ್ (2) ಬೌಲಿಂಗ್ ದಾಳಿಗೆ ತತ್ತರಿಸಿ 183 ರನ್ ಗಳಿಸಿತ್ತು. ಭಾರತದ ಪರ ಕೆ.ಶ್ರೀಕಾಂತ್ 38, ಅಮರ್ನಾಥ್ 26 ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಗಿತ್ತು.
ಕೇವಲ 183 ರನ್ಗಳನ್ನ ವಿಂಡೀಸ್ ಸುಲಭವಾಗಿ ಚೇಸ್ ಮಾಡಿ ಹ್ಯಾಟ್ರಿಕ್ ಪ್ರಶಸ್ತಿ ಪಡೆಯಬಹುದೆಂದು ಭಾವಿಸಲಾಗಿತ್ತು. ಆದರೆ ಸುಲಭದ ಗುರಿ ಪಡೆದ ಗುಂಗಿನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಂಡೀಸ್ನ ಬಲಿಷ್ಠ ಬ್ಯಾಟ್ಸ್ಮನ್ಗಳಾದ ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಗಾರ್ಡನ್ ಗ್ರೀನಿಡ್ಜ್, ಡೆಸ್ಮನ್ ಹೇನಸ್ ಭಾರತದ ಬೌಲರ್ಗಳ ದಾಳಿಗೆ ಉತ್ತರಿಸಲಾಗದೆ ವಿಕೆಟ್ ಕೈ ಚೆಲ್ಲಿದರು.
-
Kapil Dev took this stunning catch in the 1983 final against West Indies to dismiss Viv Richards!
— ICC (@ICC) May 3, 2019 " class="align-text-top noRightClick twitterSection" data="
Should it proceed the semi-finals of the @bira91 @cricketworldcup Greatest Moments?
Lend it your support now at https://t.co/g10dkZJFiE pic.twitter.com/T7WCWQagTq
">Kapil Dev took this stunning catch in the 1983 final against West Indies to dismiss Viv Richards!
— ICC (@ICC) May 3, 2019
Should it proceed the semi-finals of the @bira91 @cricketworldcup Greatest Moments?
Lend it your support now at https://t.co/g10dkZJFiE pic.twitter.com/T7WCWQagTqKapil Dev took this stunning catch in the 1983 final against West Indies to dismiss Viv Richards!
— ICC (@ICC) May 3, 2019
Should it proceed the semi-finals of the @bira91 @cricketworldcup Greatest Moments?
Lend it your support now at https://t.co/g10dkZJFiE pic.twitter.com/T7WCWQagTq
ದಿಗ್ಗಜ ವಿವಿಯನ್ ರಿಚರ್ಡ್ಸ್ ನೀಡಿದ ಅದ್ಭುತ ಕ್ಯಾಚ್ ಪಡೆದ ಕಪಿಲ್ ಭಾರತಕ್ಕೆ ಗೆಲುವು ಖಚಿತಗೊಳಿಸಿದರು. ರಿಚರ್ಡ್ಸ್ ಔಟಾಗುತ್ತಿದ್ದಂತೆ ವಿಂಡೀಸ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೊನೆಗೆ 183 ರನ್ಗಳನ್ನು ಚೇಸ್ ಮಾಡಲಾಗದೆ ವಿಂಡೀಸ್ 140 ರನ್ಗಳಿಗೆ ಅಲೌಟ್ ಆಯಿತು. 43 ರನ್ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕಪಿಲ್ದೇವ್ ಪಡೆ ಕ್ರಿಕೆಟ್ ಜಗತ್ತಿಗೆ ಭಾರತದ ಶಕ್ತಿಯನ್ನ ತೋರಿಸಿತು. ಸತತ 2 ಬಾರಿ ಚಾಂಪಿಯನ್ ಆಗಿದ್ದ ವಿಂಡೀಸ್ಗೆ ಭಾರತ ನೀಡಿದ ಹೊಡೆತ ಹೇಗಿತ್ತೆಂದರೆ ವಿಂಡೀಸ್ 36 ವರ್ಷವಾದರೂ ಇಂದಿಗೂ ಒಮ್ಮೆಯೂ ಫೈನಲ್ ಕೂಡ ತಲುಪಿಲ್ಲ.