ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಏಪ್ರಿಲ್ 9 ರಿಂದ ಆರಂಭಗೊಳ್ಳಲಿದ್ದು, ಫೈನಲ್ ಪಂದ್ಯ ಮೇ 30 ರಂದು ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಅಹಮದಾಬಾದ್, ಚೆನ್ನೈ, ಬೆಂಗಳೂರು, ನವದೆಹಲಿ, ಕೋಲ್ಕತ್ತಾ ಹಾಗೂ ಮುಂಬೈಗಳಲ್ಲಿ ಟೂರ್ನಮೆಂಟ್ ನಡೆಯಲಿದ್ದು, ಎಲ್ಲ ಪಂದ್ಯಗಳು ಬಯೋ ಸೆಕ್ಯೂರ್ ಪ್ರದೇಶದಲ್ಲಿ ನಡೆಯಲಿವೆ ಎಂದು ಹೇಳಲಾಗಿದೆ. 60 ಪಂದ್ಯಗಳ ಟೂರ್ನಿ ಒಟ್ಟು 52 ದಿನಗಳ ಕಾಲ ನಡೆಯಲಿದೆ.
ಇದನ್ನೂ ಓದಿ: IPL 14: ಭಾರತದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪೂರ್ವ ತಯಾರಿ
ಕೊರೊನಾ ವೈರಸ್ ಕಾರಣ 2020ರ ಐಪಿಎಲ್ ಪಂದ್ಯ ಯುಎಇನಲ್ಲಿ ನಡೆದಿದ್ದು ಈ ಸಲದ ಟೂರ್ನಮೆಂಟ್ ಭಾರತದಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ಮಂಡಳಿ ಯೋಜನೆ ರೂಪಿಸಿಕೊಂಡಿದೆ.
2021ರ ಐಪಿಎಲ್ ಹರಾಜು ಪ್ರಕ್ರಿಯೆ ಕೂಡ ಈಗಾಗಲೇ ನಡೆದಿದ್ದು, ಎಲ್ಲ ಫ್ರಾಂಚೈಸಿಗಳು ತಮಗೆ ಬೇಕಾದ ಪ್ಲೇಯರ್ಸ್ ಖರೀದಿ ಮಾಡಿ ತಂಡ ಬಲಿಷ್ಠ ಮಾಡಿಕೊಂಡಿವೆ. ವಿಶೇಷವೆಂದರೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದಿನಿಂದ ಅಭ್ಯಾಸ ಕೂಡ ಆರಂಭಿಸಿದೆ. ಕಳೆದ ವರ್ಷದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಸೆಣಸಾಟ ನಡೆಸಿದ್ದವು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಗೆಲುವು ದಾಖಲಿಸಿತ್ತು.