ETV Bharat / sports

ಶುಕ್ರವಾರ 13ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ -

ಕಳೆದ ಒಂದು ವಾರದಿಂದ ಅಭಿಮಾನಿಗಳು ಹಾಗೂ ವಿವಿಧ ಪ್ರಾಂಚೈಸಿಗಳು ಐಪಿಎಲ್​ 2020ರ ವೇಳಾಪಟ್ಟಿಯನ್ನು ಬೇಗ ಘೋಷಿಸುವಂತೆ ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದ್ದವು. 13ನೇ ಆವೃತ್ತಿಯ ಲೀಗ್​ಗೆ 16 ದಿನಗಳು ಮಾತ್ರ ಉಳಿದಿವೆ. ಇದೀಗ ಖಾಸಗಿ ಮಾಧ್ಯಮಕ್ಕೆ ಬಿಸಿಸಿಐ ಅಧ್ಯಕ್ಷ ನೀಡಿರುವ ಹೇಳಿಕೆ ಪ್ರಕಾರ ಶುಕ್ರವಾರ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ
author img

By

Published : Sep 3, 2020, 4:28 PM IST

ಮುಂಬೈ: ಬಹು ನಿರೀಕ್ಷಿತ ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್​ ಲೀಗ್​ ಆಗಿರುವ ಐಪಿಎಲ್​ನ ವೇಳಾಪಟ್ಟಿ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಈ ವಿಚಾರವನ್ನು ತಿಳಿಸಿದ್ದಾರೆ ಎನ್ನಲಾಗ್ತಿದೆ.

ಕಳೆದ ಒಂದು ವಾರದಿಂದ ಅಭಿಮಾನಿಗಳು ಹಾಗೂ ವಿವಿಧ ಪ್ರಾಂಚೈಸಿಗಳು ಐಪಿಎಲ್​ 2020ಯ ವೇಳಾಪಟ್ಟಿಯನ್ನು ಬೇಗ ಘೋಷಿಸುವಂತೆ ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದ್ದವು. 13ನೇ ಆವೃತ್ತಿಯ ಲೀಗ್​ಗೆ 16 ದಿನಗಳು ಮಾತ್ರ ಉಳಿದಿವೆ. ಇದೀಗ ಖಾಸಗಿ ಮಾಧ್ಯಮಕ್ಕೆ ಬಿಸಿಸಿಐ ಅಧ್ಯಕ್ಷ ನೀಡಿರುವ ಹೇಳಿಕೆ ಪ್ರಕಾರ ಶುಕ್ರವಾರ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಆಗುವ ಸಾಧ್ಯತೆಯಿದೆ.

ಕೋವಿಡ್​ 19 ನಿಂದ ಐಪಿಎಲ್​ಅನ್ನು ಬಿಸಿಸಿಐ ಯುಎಇನಲ್ಲಿ ಆಯೋಜಿಸುತ್ತಿದೆ. ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಕೆಲವು ಆಟಗಾರರು ಹಾಗೂ ಸಿಬ್ಬಂದಿಗೆ ಕೋವಿಡ್​ 19 ಸೋಂಕು ತಗುಲಿದ್ದರಿಂದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದನ್ನು ಬಿಸಿಸಿಐ ತಡಮಾಡಿದೆ.

ಪ್ರಸ್ತುತ ಎಲ್ಲಾ ಸಮಸ್ಯೆಗಳನ್ನು ಬಿಸಿಸಿಐ ಬಗೆಹರಿಸಿಕೊಂಡಿದ್ದು, ಯುಎಇ ಕ್ರಿಕೆಟ್​ ಬೋರ್ಡ್​ನೊಂದಿಗೆ ಚರ್ಚೆ ನಡೆಸಿ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ ಎನ್ನಲಾಗ್ತಿದ್ದು, ಅದು ಶೀಘ್ರದಲ್ಲೇ ಬಿಡುಗಡೆ ಆಗುವ ಸಾಧ್ಯತೆಯಿದೆ. ಬುಧವಾರ ಇದೇ ವಿಚಾರವಾಗಿ ಮಾತನಾಡಿದ್ದ ಬಿಸಿಸಿಐ ಖಜಾಂಚಿ ಅರುಣ್​ ಧುಮಾಲ್​ ಐಪಿಎಲ್​ ಯೋಜನೆಯಂತೆ ನಡೆಯಲಿದೆ ಎಂದು ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.