ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ಬರುವ ಫೆ. 18ರಂದು ನಡೆಯಲಿದ್ದು, ಬಿಡ್ಡಿಂಗ್ನಲ್ಲಿ ಭಾಗಿಯಾಗಲು 1097 ಪ್ಲೇಯರ್ಸ್ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ನ 56, ಆಸ್ಟ್ರೇಲಿಯಾದ 42 ಹಾಗೂ ದಕ್ಷಿಣ ಆಫ್ರಿಕಾದ 38 ಪ್ಲೇಯರ್ಸ್ ತಮ್ಮ ಹೆಸರು ದಾಖಲು ಮಾಡಿದ್ದಾರೆ. ಹೆಸರು ನೋಂದಣಿ ಮಾಡಿಕೊಂಡವರ ಪೈಕಿ 207 ಅಂತಾರಾಷ್ಟ್ರೀಯ ಪ್ಲೇಯರ್ಸ್ ಇದ್ದು, 21 ಕ್ರಿಕೆಟರ್ಸ್ ಭಾರತೀಯರಾಗಿದ್ದಾರೆ.
-
NEWS 🚨: 1097 players register for IPL 2021 Player Auction
— IndianPremierLeague (@IPL) February 5, 2021 " class="align-text-top noRightClick twitterSection" data="
More details👉 https://t.co/DSZC5ZzTWG pic.twitter.com/BLSAJcBhES
">NEWS 🚨: 1097 players register for IPL 2021 Player Auction
— IndianPremierLeague (@IPL) February 5, 2021
More details👉 https://t.co/DSZC5ZzTWG pic.twitter.com/BLSAJcBhESNEWS 🚨: 1097 players register for IPL 2021 Player Auction
— IndianPremierLeague (@IPL) February 5, 2021
More details👉 https://t.co/DSZC5ZzTWG pic.twitter.com/BLSAJcBhES
ಪ್ರತಿ ತಂಡ 25 ಪ್ಲೇಯರ್ಸ್ ಹೊಂದಲು ಅವಕಾಶವಿದ್ದು, ಈ ಸಲದ ಹರಾಜು ಪ್ರಕ್ರಿಯೆಯಲ್ಲಿ 61 ಆಟಗಾರರ ಖರೀದಿ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ 22 ಪ್ಲೇಯರ್ಸ್ ವಿದೇಶಿಯರಾಗಿರುತ್ತಾರೆ.
ಓದಿ: ಮೈದಾನದಲ್ಲಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ.. ಬಿಸಿಸಿಐನಿಂದ ವಿಡಿಯೋ ಶೇರ್!
ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಫ್ರಾಂಚೈಸಿಗಳ ಪೈಕಿ ಪಂಜಾಬ್ 53.20 ಕೋಟಿ, ಆರ್ಸಿಬಿ 35.90 ಕೋಟಿ, ರಾಜಸ್ಥಾನ 34.85 ಕೋಟಿ, ಚೆನ್ನೈ 22.90 ಕೋಟಿ, ಮುಂಬೈ ಇಂಡಿಯನ್ಸ್ 15.35 ಕೋಟಿ, ಡೆಲ್ಲಿ 12.9 ಕೋಟಿ ಹಾಗೂ ಕೆಕೆಆರ್ ಮತ್ತು ಹೈದರಾಬಾದ್ ಬಳಿ ಕ್ರಮವಾಗಿ 10.75 ಕೋಟಿ ರೂ. ಇದೆ. 2020ರ ಐಪಿಎಲ್ ದುಬೈನಲ್ಲಿ ನಡೆದಿತ್ತು. ಪ್ರಸಕ್ತ ಸಾಲಿನ ಟೂರ್ನಿ ಭಾರತದಲ್ಲೇ ಆಯೋಜನೆಗೊಳ್ಳುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾದ ಸ್ಮಿತ್, ಮ್ಯಾಕ್ಸ್ವೆಲ್ ಅವರನ್ನು ಕೂಡ ಫ್ರಾಂಚೈಸಿಯಿಂದ ಕೈಬಿಡಲಾಗಿದ್ದು, ಕ್ರಿಸ್ ಮೊರಿಸ್, ಹರ್ಭಜನ್ ಸಿಂಗ್, ಫಿಂಚ್ ಇದರಲ್ಲಿದ್ದಾರೆ.
ಯಾವ ದೇಶದ ಎಷ್ಟು ಪ್ಲೇಯರ್ಸ್ ನೋಂದಣಿ
ಆಫ್ಘಾನಿಸ್ತಾನ 30, ಆಸ್ಟ್ರೇಲಿಯಾ 42, ಬಾಂಗ್ಲಾದೇಶ 5, ಇಂಗ್ಲೆಂಡ್ 21, ಐರ್ಲೆಂಡ್ 2, ನೇಪಾಳ 8, ನೆದರಲ್ಯಾಂಡ್ 1, ನ್ಯೂಜಿಲ್ಯಾಂಡ್ 29, ಸ್ಕ್ಯಾಡ್ಲ್ಯಾಂಡ್ 7, ದಕ್ಷಿಣ ಆಫ್ರಿಕಾ 38, ಶ್ರೀಲಂಕಾ 31, ಯುಎಇ 9, ಯುಎಸ್ಎ 2, ವೆಸ್ಟ್ ಇಂಡೀಸ್ 56, ಜಿಂಬಾಬ್ವೆ 2 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ.