ಡೆಹ್ರಾಡೂನ್(ಉತ್ತರಾಖಂಡ್): ಅಭಿಮನ್ಯು ಕ್ರಿಕೆಟ್ ಮೈದಾನದಲ್ಲಿ ನಡೆದ ಸಿಎಂ ಇಲೆವೆನ್ ಹಾಗೂ ಬಿಜೆಪಿ ಯುವ ಮೋರ್ಚಾ ಇಲೆವೆನ್ ತಂಡಗಳ ನಡುವಿನ 7-7 ಕ್ರಿಕೆಟ್ ಪಂದ್ಯದಲ್ಲಿ ಮುಖ್ಯಮಂತ್ರಿಗಳ ಇಲೆವೆನ್ ತಂಡ 4 ರನ್‌ಗಳ ಗೆಲುವು ಸಾಧಿಸಿದೆ.
ಸಿಎಂ ಫುಷ್ಕರ್ ಸಿಂಗ್ ಧಾಮಿ ಅವರ ತಂಡದಲ್ಲಿ ಸಂಪುಟ ಸಚಿವರಾದ ಸುಬೋಧ್ ಉನಿಯಾಲ್, ಯತೀಶ್ವರಾನಂದ್, ಶಾಸಕ ಸಹದೇವ್ ಪುಂಡೀರ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಭಿನವ್ ಕುಮಾರ್, ಎಸ್‌ಎಸ್‌ಪಿ ಡೆಹ್ರಾಡೂನ್ ಹಾಗೂ ಸಿಎಂ ಸಿಬ್ಬಂದಿಯ ಹಲವು ಆಟಗಾರರು ಭಾಗಿಯಾಗಿದ್ದರು.
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾ ಇಲೆವೆನ್ ತಂಡವನ್ನು ಮುನ್ನಡೆಸಿದರು. ಈ ತಂಡದಲ್ಲಿ ಯುವ ಮೋರ್ಚಾ ಸದಸ್ಯರು ಭಾಗವಹಿಸಿದ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸಿಎಂ ಧಾಮಿ ನೇತೃತ್ವದ ತಂಡ 7 ಓವರ್‌ಗಳಲ್ಲಿ ಯುವ ಮೋರ್ಚಾ ಇಲೆವೆನ್‌ಗೆ 50 ರನ್‌ಗಳ ಗುರಿ ನೀಡಿತು. ಆದರೆ, ಈ ಗುರಿಯನ್ನು ಮುಟ್ಟಲು ಯುವ ಮೋರ್ಚಾ ವಿಫಲವಾಯಿತು.
ಪಂದ್ಯದ ಬಳಿಕ ಮಾತನಾಡಿದ ಸಿಎಂ, ಇಂದು ಸೌಹಾರ್ದ ಕ್ರಿಕೆಟ್ ಪಂದ್ಯವಾಗಿದ್ದು, ಎಲ್ಲರೂ ಅತ್ಯಂತ ಉತ್ಸಾಹದಿಂದ ಪಂದ್ಯವನ್ನು ಆನಂದಿಸಿದ್ದಾರೆ ಎಂದರು. ಪಂದ್ಯ ವೇಳೆ ಸಿಎಂ ಧಾಮಿ ಗಾಯಗೊಂಡರೂ ಬ್ಯಾಟಿಂಗ್ ವೇಳೆ ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ಕ್ರಿಕೆಟ್ ಟೂರ್ನಿಯನ್ನು ಉತ್ತರಾಖಂಡ್ ಸಿಎಂ ಧಾಮಿ ಹಾಗೂ ಡಿಐಜಿ ಉದ್ಘಾಟಿಸಿದರು.
ಇದನ್ನೂ ಓದಿ: Vijay Hazare: ತಮಿಳುನಾಡು ವಿರುದ್ಧ ಮತ್ತೆ ಮುಗ್ಗರಿಸಿದ ಕರ್ನಾಟಕ, 151 ರನ್‌ಗಳ ಹೀನಾಯ ಸೋಲು