ETV Bharat / sports

ಕ್ರಿಕೆಟ್ ದಿಗ್ಗಜ ಶೇನ್​​ ವಾರ್ನ್​​ಗೆ ಕೋವಿಡ್ ಪಾಸಿಟಿವ್ - ಲಂಡನ್ ಸ್ಪಿರಿಟ್

ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಶೇನ್​ ವಾರ್ನ್​ಗೆ ಕೋವಿಡ್ ಸೋಂಕು ತಗುಲಿದೆ. ಪ್ರಸ್ತುತ ಲಂಡನ್​ ಸ್ಪಿರಿಟ್ ತಂಡದ ಕೋಚ್​ ಆಗಿರುವ ಅವರು ಸೋಂಕು ದೃಢಪಟ್ಟ ಬಳಿಕ ಐಸೋಲೇಟ್ ಆಗಿದ್ದಾರೆ.

Cricket great Shane Warne tests positive for COVID-19
ಕ್ರಿಕೆಟ್ ದಿಗ್ಗಜ ಶೇನ್​​ ವಾರ್ನ್​​ಗೆ ಕೋವಿಡ್ ಪಾಸಿಟಿವ್
author img

By

Published : Aug 2, 2021, 9:10 AM IST

ಲಂಡನ್: ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ದಿ ಹಂಡ್ರೆಡ್ಸ್ ಪಂದ್ಯಾವಳಿಯ ಲಂಡನ್​ ಸ್ಪಿರಿಟ್ ತಂಡದ ಕೋಚ್​ ಆಗಿರುವ ಅವರು, ಸೌತರ್ನ್​ ಬ್ರೇವ್ ತಂಡದ ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ 51 ವರ್ಷದ ವಾರ್ನ್, ಲಾರ್ಡ್ಸ್ ಮೂಲದ ಕ್ರಿಕೆಟ್ ಫ್ರಾಂಚೈಸಿ ಲಂಡನ್ ಸ್ಪಿರಿಟ್ ಪುರುಷರ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ಕ್ರೇಜ್​ ಹುಟ್ಟು ಹಾಕಿದ ಯುವರಾಜ್​ ಸಿಂಗ್​ ಫ್ರೆಂಡ್​ಶಿಪ್​ ಡೇ ಪೋಸ್ಟ್​​

ಕೋವಿಡ್ ಪಾಸಿಟಿವ್ ದೃಢಪಟ್ಟ ಬಳಿಕ ವಾರ್ನ್​​ ತಂಡದಿಂದ ಪ್ರತ್ಯೇಕವಾಗಿದ್ದಾರೆ. ಆರ್​ಟಿ-ಪಿಸಿಆರ್ ವರದಿಗಾಗಿ ಕಾಯುತ್ತಿದ್ದಾರೆ ಎಂದು ತಂಡದ ಮೂಲಗಳು ಹೇಳಿವೆ. ಲಂಡನ್​ ಸ್ಪಿರಿಟ್ ತಂಡದಲ್ಲಿ ಕೋವಿಡ್ ದೃಢಪಟ್ಟವರಲ್ಲಿ ಶೇನ್ ವಾರ್ನ್​ ಎರಡನೆಯವರಾಗಿದ್ದಾರೆ. ಲಾರ್ಡ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಸೌಥರ್ನ್​ ಬ್ರೇವ್ 4 ರನ್​ಗಳ ​ಜಯಗಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.