ETV Bharat / sports

ವಿಶ್ವದಲ್ಲಿ ಎಲ್ಲಕಡೆ 20 ವಿಕೆಟ್ ಪಡೆಯುವ ಅದ್ಭುತ ಬೌಲಿಂಗ್ ದಾಳಿ ಭಾರತದ್ದು: ಕೊಹ್ಲಿಪಡೆಗೆ ಶುಭ ಹಾರೈಸಿದ ಸಚಿನ್ - ದಕ್ಷಿಣ ಅಫ್ರಿಕಾ ವಿರುದ್ಧ ಭಾರತಕ್ಕೆ ಜಯ

ಗಬ್ಬಾ ಮತ್ತು ಲಾರ್ಡ್ಸ್​​ನಲ್ಲಿನ ಅವಿಸ್ಮರಣೀಯ ಗೆಲುವಿನ ನಂತರ ಭಾರತ 2021ರಲ್ಲಿ ದಕ್ಷಿಣ ಆಫ್ರಿಕಾದ ಭದ್ರಕೋಟೆ ಸೂಪರ್​ ಸ್ಪೋರ್ಟ್​ ಪಾರ್ಕ್​ನಲ್ಲಿ ಗುರುವಾರ 113 ರನ್​ಗಳ ಅಮೋಘ ಜಯ ಸಾಧಿಸಿತು. ಬುಮ್ರಾ, ಶಮಿ ಸೇರಿದಂತೆ ಭಾರತದ ವಿಶ್ವದರ್ಜೆಯ ವೇಗಿಗಳ ತಂಡ ಹರಿಣಗಳ 18 ವಿಕೆಟ್ ಪಡೆಯುವ ಮೂಲಕ ಸೂಪರ್​ಸ್ಪೋರ್ಟ್ ಪಾರ್ಕ್​ನಲ್ಲಿ ಗೆಲುವು ಸಾಧಿಸಿದ ಮೊದಲ ಏಷ್ಯನ್ ತಂಡ ಎನಿಸಿಕೊಂಡಿತು.

Cricket fraternity hails India's first win at Centurion
ಭಾರತ ತಂಡಕ್ಕೆ ಅಭಿನಂದನೆ
author img

By

Published : Dec 30, 2021, 9:15 PM IST

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 113 ರನ್​ಗಳ ಜಯ ಸಾಧಿಸಿದ ಭಾರತ ತಂಡವನ್ನು ಕ್ರಿಕೆಟ್​ ಜಗತ್ತಿನ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಬ್ಯಾಟಿಂಗ್ ದಂತಕತೆ ಸಚಿನ್​ ಭಾರತೀಯ ಬೌಲಿಂಗ್ ದಾಳಿಯನ್ನ ಪ್ರಶಂಸಿಸಿದ್ದಾರೆ.

ಗಬ್ಬಾ ಮತ್ತು ಲಾರ್ಡ್ಸ್​​ನಲ್ಲಿನ ಅವಿಸ್ಮರಣೀಯ ಗೆಲುವಿನ ನಂತರ ಭಾರತ 2021ರಲ್ಲಿ ದಕ್ಷಿಣ ಆಫ್ರಿಕಾದ ಭದ್ರಕೋಟೆ ಸೂಪರ್​ ಸ್ಪೋರ್ಟ್​ ಪಾರ್ಕ್​ನಲ್ಲಿ ಗುರುವಾರ 113 ರನ್​ಗಳ ಅಮೋಘ ಜಯ ಸಾಧಿಸಿತು. ಬುಮ್ರಾ, ಶಮಿ ಸೇರಿದಂತೆ ಭಾರತದ ವಿಶ್ವದರ್ಜೆಯ ವೇಗಿಗಳ ತಂಡ ಹರಿಣಗಳ 18 ವಿಕೆಟ್ ಪಡೆಯುವ ಮೂಲಕ ಸೂಪರ್​ಸ್ಪೋರ್ಟ್ ಪಾರ್ಕ್​ನಲ್ಲಿ ಗೆಲುವು ಸಾಧಿಸಿದ ಮೊದಲ ಏಷ್ಯನ್ ತಂಡ ಎನಿಸಿಕೊಂಡಿತು.

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸರಣಿ ಗೆಲುವಿನ ಕನಸಿನಲ್ಲಿರುವ ಭಾರತ ತಂಡ ತನ್ನ ಮೊದಲನೇ ಟೆಸ್ಟ್​ ಪಂದ್ಯದಲ್ಲೇ ವಿಜಯ ಸಾಧಿಸಿರುವುದಕ್ಕೆ ಕ್ರಿಕೆಟ್​ ಕುಟುಂಬ ಅಭಿನಂದನೆ ಸಲ್ಲಿಸಿದೆ. ವಿಶ್ವದ ಯಾವುದೇ ಟೆಸ್ಟ್​ ಪಂದ್ಯದಲ್ಲಿ 20 ವಿಕೆಟ್​ಗಳನ್ನು ​ ಪಡೆಯುವಂತ ಬೌಲಿಂಗ್ ಘಟಕದಿಂದ ಅದ್ಭುತ ಪ್ರದರ್ಶನ. ಮನವೊಲಿಸುವ ಈ ಜಯಕ್ಕಾಗಿ ಭಾರತ ತಂಡಕ್ಕೆ ಅಭಿನಂದನೆಗಳು ಎಂದು ಭಾರತ ಗಾಡ್ ಆಫ್​ ಕ್ರಿಕೆಟ್​ ಖ್ಯಾತಿಯ ಸಚಿನ್​ ತೆಂಡೂಲ್ಕರ್ ಕೊಹ್ಲಿಪಡೆಗೆ ಶುಭ ಹಾರೈಸಿದ್ದಾರೆ.

ಭಾರತ ತಂಡದ ಮಾಜಿ ಮುಖ್ಯ ಕೋಚ್​ ರವಿಶಾಸ್ತ್ರಿ, ಬ್ರಿಸ್ಬೇನ್, ಲಾರ್ಡ್ಸ್ಮ ಮತ್ತು ಸೆಂಚುರಿಯನ್​... ಏಷ್ಯನ್​ ತಂಡವಾಗಿ ಸೆಂಚುರಿಯನ್​​ನಲ್ಲಿ ಮೊದಲ ಗೆಲುವು ಸಾಧಿಸಿದ್ದಕ್ಕೆ ವಿರಾಟ್​ ಕೊಹ್ಲಿ, ರಾಹುಲ್ ದ್ರಾವಿಡ್​ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್​ ಮಾಡಿದ್ದಾರೆ.

ಭಾರತ ತಂಡದ ಮಾಜಿ ಬೌಲಿಂಗ್ ಕೋಚ್​ ವೆಂಕಟೇಶ್ ಪ್ರಸಾದ್​, ಭಾರತೀಯ ಟೆಸ್ಟ್​ ಕ್ರಿಕೆಟ್​ಗೆ 2021 ಅದ್ಭುತವಾಗಿದೆ. ಸೆಂಚುರಿಯನ್​ನಲ್ಲಿ ಗೆಲುವು ಸಾಧಿಸಿದ ಮೊದಲ ಏಷ್ಯಾ ತಂಡವಾಗಿದೆ. ಇದೊಂದು ವಿಶೇಷ ತಂಡ ಮತ್ತು ವಿಶೇಷ ಗೆಲುವು. ಶಮಿ ಅಸಾಧಾರಣ ಬೌಲಿಂಗ್ ಆದರೆ, ಕೆಎಲ್ ರಾಹುಲ್ ಮಾಸ್ಟರ್​ ಕ್ಲಾಸ್​ ಬ್ಯಾಟಿಂಗ್ ಸಂತೋಷ ತಂದಿದೆ ಎಂದು ಭಾರತದ ಗೆಲುವನ್ನು ಕೊಂಡಾಡಿದ್ದಾರೆ.

  • A phenomenal 2021 in Test Match Cricket for #TeamIndia. To become the first Asian Team to won at Centurion, this is a special team and a special win. Shami was exceptional but KL Rahul’s masterclass was a delight and the major difference #IndvsSA pic.twitter.com/IQafGsByta

    — Venkatesh Prasad (@venkateshprasad) December 30, 2021 " class="align-text-top noRightClick twitterSection" data=" ">

ಭಾರತದ ಶ್ರೇಷ್ಠ ಆರಂಭಿಕ ಬ್ಯಾಟರ್​ಗಳಲ್ಲಿ ಒಬ್ಬರಾದಂತಹ ವೀರೇಂದ್ರ ಸೆಹ್ವಾಗ್, ಭಾರತ ಟೆಸ್ಟ್​ ಕ್ರಿಕೆಟ್​ಗೆ 2021 ಕನಸಿನ ವರ್ಷ. ಗಬ್ಬಾ, ಲಾರ್ಡ್ಸ್​, ಓವಲ್, ಸೆಂಚುರಿಯನ್​ ಮತ್ತು ಸಿಡ್ನಿಯಲ್ಲಿನ ಅದ್ಭುತ ಡ್ರಾ ಪಂದ್ಯವನ್ನು ಯಾರು ಮರೆಯಲಾರರು. ಭಾರತ ತಂಡಕ್ಕೆ 2022ರಲ್ಲೂ ಇದಕ್ಕಿಂತ ಉತ್ತಮ ವರ್ಷವಾಗಿರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

  • Dream 2021 for Team India in Test Cricket. Gabba, Lord’s , Oval, Centurion and who can forget the amazing fight to draw at Sydney. Wishing a happy and even better 2022 for #TeamIndia pic.twitter.com/pLhTVJWOvz

    — Virender Sehwag (@virendersehwag) December 30, 2021 " class="align-text-top noRightClick twitterSection" data=" ">

ಇವರಷ್ಟೇ ಅಲ್ಲದೆ ಎನ್​ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಹಾಗೂ ಮಾಜಿ ಕ್ರಿಕೆಟಿಗರು ಮತ್ತು ಹಾಲಿ ಕ್ರಿಕೆಟಿಗರು ಸೆಂಚುರಿಯನ್​ ಗೆಲುವಿಗೆ ಅಭಿನಂದನೆ ಕೋರಿದ್ದಾರೆ.

  • Began the year with great resilience at Sydney , followed by an incredible win at the Gabba, the Lord's win was special and India end the year with a brilliant win at the Centurion. Has been a brilliant Test Match year for Team India. Congratulations on a wonderful win #INDvsSA pic.twitter.com/NdY18b1GHP

    — VVS Laxman (@VVSLaxman281) December 30, 2021 " class="align-text-top noRightClick twitterSection" data=" ">

ಇದನ್ನೂ ಓದಿ:ದ.ಆಫ್ರಿಕಾ ವಿರುದ್ಧ ಜಯ... ನಾಯಕನಾಗಿ ಹಲವು ದಾಖಲೆಗಳಿಗೆ ಪಾತ್ರರಾದ ಕಿಂಗ್ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.