ETV Bharat / sports

2ನೇ ಭಾಗದ IPL​ನಲ್ಲಾಡಲು ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಸಿಕ್ತು ಗ್ರೀನ್‌ ಸಿಗ್ನಲ್‌ - ಗ್ಲೇನ್ ಮ್ಯಾಕ್ಸ್​ವೆಲ್​

ಕೋವಿಡ್‌ ಕಾರಣದಿಂದ ಐಪಿಎಲ್​ ಅರ್ಧಕ್ಕೆ ರದ್ದಾದ ನಂತರ ಕ್ರಿಕೆಟ್​ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ವೇಳಾಪಟ್ಟಿಗೆ ತನ್ನೆಲ್ಲಾ ಆಟಗಾರರು ಗೌರವ ನೀಡಿ ಐಪಿಎಲ್​ನಲ್ಲಿ ಆಡಬಾರದೆಂದು ತಾಕೀತು ಮಾಡಿತ್ತು. ಆದರೆ ಬಿಸಿಸಿಐ ಟಿ20 ವಿಶ್ವಕಪ್​ ಅನ್ನು ಯುಎಇನಲ್ಲಿ ಆಯೋಜಿಸುವ ಮೂಲಕ ಎಲ್ಲಾ ಕ್ರಿಕೆಟ್​ ಮಂಡಳಿ ತಾವಾಗಿಯೇ ಎನ್​ಒಸಿ ನೀಡುವಂತೆ ಮಾಡಿದೆ.

Cricket Australia issues NOCs to its players
ಇಂಡಿಯನ್ ಪ್ರೀಮಿಯರ್ ಲೀಗ್
author img

By

Published : Aug 15, 2021, 3:53 PM IST

ಮೆಲ್ಬೋರ್ನ್​: ಕೋವಿಡ್​ 19ನಿಂದ ಮುಂದೂಡಲ್ಪಟ್ಟಿದ್ದ ಇಂಡಿಯನ್​ ಪ್ರೀಮಿಯರ್ ಲೀಗ್ ಸೆಪ್ಟೆಂಬರ್​ನಿಂದ ಯುಎಇನಲ್ಲಿ ನಡೆಯಲಿದ್ದು, ಕ್ರಿಕೆಟ್​ ಆಸ್ಟ್ರೇಲಿಯಾ ತನ್ನ ಕ್ರಿಕೆಟಿಗರಿಗೆ ಶ್ರೀಮಂತ ಲೀಗ್​ನಲ್ಲಾಡಲು ನಿರಾಪೇಕ್ಷಣಾ ಪತ್ರ ನೀಡಿದೆ.

ಐಪಿಎಲ್​ ರದ್ದಾದ ನಂತರ ಕ್ರಿಕೆಟ್​ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ವೇಳಾಪಟ್ಟಿಗೆ ತನ್ನೆಲ್ಲಾ ಆಟಗಾರರು ಗೌರವ ನೀಡಿ ಐಪಿಎಲ್​ನಲ್ಲಿ ಆಡಬಾರದೆಂದು ತಾಕೀತು ಮಾಡಿತ್ತು. ಆದರೆ ಬಿಸಿಸಿಐ ಟಿ20 ವಿಶ್ವಕಪ್​ ಅನ್ನು ಯುಎಇನಲ್ಲಿ ಆಯೋಜಿಸುವ ಮೂಲಕ ಎಲ್ಲಾ ಕ್ರಿಕೆಟ್​ ಮಂಡಳಿ ತಾವಾಗಿಯೇ ಎನ್​ಒಸಿ ನೀಡುವಂತೆ ಮಾಡಿದೆ.

ವಿಶ್ವಕಪ್​ಗೆ ಸಿದ್ಧತೆಗೆ ಅತ್ಯುತ್ತಮ ವೇದಿಕೆಯಾಗಿದ್ದು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್​ ಬೋರ್ಡ್​ಗಳು ಈಗಾಗಲೇ ಎನ್​ಒಸಿ ನೀಡಿವೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಭಾನುವಾರ ತನ್ನ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡುವುದಕ್ಕೆ ಅನುಮತಿಸಿದೆ.

ಇತ್ತೀಚೆಗೆ ಅಂತ್ಯಗೊಂಡ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸದ ವೇಳೆ ಆಸ್ಟ್ರೇಲಿಯಾ ತಂಡದಲ್ಲಿದ್ದ ರಿಲೇ ಮೆರಿಡಿತ್​, ಡೇನಿಯಲ್ ಕ್ರಿಶ್ಚಿಯನ್​, ಮೊಯಿಸಸ್​ ಹೆನ್ರಿಕ್ಸ್, ಮಿಚೆಲ್ ಮಾರ್ಷ್​, ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ ಮತ್ತು ಜೋಶ್ ಪಿಲಿಪ್ಪೆ ಐಪಿಎಲ್​ನಲ್ಲಿ ಒಪ್ಪಂದ ಹೊಂದಿದ್ದಾರೆ. ಇವರ ಜೊತೆಗೆ ಸಿಎ ವಾರ್ಷಿಕ ಗುತ್ತಿಗೆಯಲ್ಲಿಲ್ಲದ ನಥನ್ ಕೌಲ್ಟರ್​ ಲೈನ್, ಕ್ರಿಸ್ ಲಿನ್, ಬೆನ್ ಕಟಿಂಗ್ ಕೂಡ ಐಪಿಎಲ್​ ಒಪ್ಪಂದ ಹೊಂದಿದ್ದಾರೆ.

ಈ ಪ್ರವಾಸಗಳಿಂದ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್​ವೆಲ್, ಸ್ಟೀವ್ ಸ್ಮಿತ್, ಕೇನ್ ರಿಚರ್ಡ್ಸನ್, ಜೇ ರಿಚರ್ಡ್ಸನ್​ ಹಾಗು ಡೇನಿಯಲ್ ಸ್ಯಾಮ್ಸ್​ ಕೂಡ ಐಪಿಎಲ್​ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯನ್ನರು 2ನೇ ಭಾಗದ ಐಪಿಎಲ್​ನಲ್ಲಾಡುವುದು ಈ ಕಾರಣಕ್ಕೆ ಅತ್ಯುತ್ತಮ ನಿರ್ಧಾರ: ಪಾಂಟಿಂಗ್ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.