ಬ್ರಿಸ್ಟಲ್: ನಾಳೆಯಿಂದ ಪಾಕ್ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ತಂಡ ನಿಗದಿತ ಓವರ್ಗಳ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಆಂಗ್ಲರ ತಂಡದ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹೊಸ ಆಟಗಾರರು ತಂಡ ಸೇರಿಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ. ಇದೇ ವೇಳೆ ತಂಡ ಮುನ್ನಡೆಸುವ ಜವಾಬ್ದಾರಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೆಗಲಿಗೆ ಬಿದ್ದಿದೆ.
ತಂಡದ ಪ್ಲೇಯರ್ಸ್ಗೆ ಕೊರೊನಾ ವಕ್ಕರಿಸಿರುವ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಟ್ವಿಟ್ ಮಾಡಿ ಮಾಹಿತಿ ನೀಡಿದೆ. ತಂಡದ ಒಟ್ಟು 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ ಮೂವರು ಪ್ಲೇಯರ್ಸ್ ಹಾಗೂ ನಾಲ್ವರು ಆಡಳಿತ ಮಂಡಳಿ ಸಿಬ್ಬಂದಿ ಸೇರಿದ್ದಾರೆ.
-
The ECB can confirm that seven members of the England Men's ODI party have tested positive for COVID-19.
— England Cricket (@englandcricket) July 6, 2021 " class="align-text-top noRightClick twitterSection" data="
">The ECB can confirm that seven members of the England Men's ODI party have tested positive for COVID-19.
— England Cricket (@englandcricket) July 6, 2021The ECB can confirm that seven members of the England Men's ODI party have tested positive for COVID-19.
— England Cricket (@englandcricket) July 6, 2021
ಪಾಕ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಗಾಗಿ ಈ ಹಿಂದೆ ಶ್ರೀಲಂಕಾ ವಿರುದ್ಧ ಆಯ್ಕೆ ಮಾಡಲಾಗಿದ್ದ ತಂಡವನ್ನೇ ಇಂಗ್ಲೆಂಡ್ ಕಣಕ್ಕಿಳಿಸಲು ನಿರ್ಧರಿಸಿತ್ತು. ಪಾಕಿಸ್ತಾನ ವಿರುದ್ಧ ಮೊದಲ ಏಕದಿನ ಪಂದ್ಯ ಜುಲೈ 8ರಂದು, ಎರಡನೇ ಹಾಗೂ ಮೂರನೇ ಪಂದ್ಯ ಕ್ರಮವಾಗಿ ಜುಲೈ 10 ಹಾಗೂ 13ರಂದು ನಡೆಯಲಿವೆ. ಈ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸಬೇಕಾಗಿತ್ತು. ಆದರೆ ಇದೀಗ ನಾಯಕತ್ವ ಜವಾಬ್ದಾರಿ ಬೆನ್ ಸ್ಟೋಕ್ಸ್ಗೆ ನೀಡುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಶ್ರೀಲಂಕಾ ವಿರುದ್ಧ ಮುಕ್ತಾಯಗೊಂಡ ನಿಗದಿತ ಓವರ್ಗಳ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಟಿ-20 ಸರಣಿಯನ್ನು 3-0 ಅಂತರದಿಂದ ಹಾಗೂ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದು ಬೀಗಿತ್ತು.