ಸೌತಾಂಪ್ಟನ್: ಭಾರತದ ಮುಂಚೂಣಿ ವೇಗಿಯಾಗಿರುವ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಮೈದಾನದಲ್ಲಿ ತಮ್ಮ ಭಾವನೆಗಳನ್ನು ತೋರಿಸುವುದು ತುಂಬಾ ಅಪರೂಪ. ಅವರ ಪ್ರಕಾರ ಆಕ್ರಮಣಶೀಲತೆಯನ್ನು ನಿಯಂತ್ರಿಸಿದ್ದೇ ತಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
"ನಾನು ಯುವಕನಾಗಿ ಕ್ರಿಕೆಟ್ ಆರಂಭಿಸಿದ ದಿನಗಳಲ್ಲಿ ತುಂಬಾ ಕೋಪಗೊಳ್ಳುತ್ತಿದ್ದೆ. ಆ ಸಂದರ್ಭದಲ್ಲಿ ನಾನು ಎಲ್ಲಾ ರೀತಿಯ ಗಿಮಿಕ್ಗಳನ್ನು ಮಾಡುತ್ತಿದ್ದೆ. ಆದರೆ ಅವು ಯಾವುದು ನನಗೆ ಕೆಲಸಕ್ಕೆ ಬರಲಿಲ್ಲ " ಎಂದು ಐಸಿಸಿ WTC ಫೈನಲ್ ಸಂದರ್ಭದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
-
“I realised what works for me. I am smiling, but the fire inside is burning all the time.”
— ICC (@ICC) June 22, 2021 " class="align-text-top noRightClick twitterSection" data="
The evolution of @BCCI star Jasprit Bumrah.#WTC21 pic.twitter.com/1rrathR7Qt
">“I realised what works for me. I am smiling, but the fire inside is burning all the time.”
— ICC (@ICC) June 22, 2021
The evolution of @BCCI star Jasprit Bumrah.#WTC21 pic.twitter.com/1rrathR7Qt“I realised what works for me. I am smiling, but the fire inside is burning all the time.”
— ICC (@ICC) June 22, 2021
The evolution of @BCCI star Jasprit Bumrah.#WTC21 pic.twitter.com/1rrathR7Qt
ಈಗ ಕೆಲವು ವರ್ಷಗಳಿಂದ ಒಳ್ಳೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ ನನಗೆ ಯಾವುದು ಕೆಲಸ ಮಾಡುತ್ತದೆ ಎಂಬುದರ ಅರಿವಾಯಿತು. ಹಾಗಾಗಿ ನಾನು ಯಾವಾಗಲೂ ನಗುತ್ತಿರುತ್ತೇನೆ. ಆದರೆ ಮನದಲ್ಲಿರುವ ಕಿಚ್ಚು ಯಾವಾಗಲೂ ಉರಿಯುತ್ತಿರುತ್ತದೆ ಎಂದು ಬುಮ್ರಾ ಹೇಳಿಕೊಂಡಿದ್ದಾರೆ.
ಮೈದಾನದಲ್ಲಿ ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವು ನನ್ನನ್ನು ವೃತ್ತಿಪರ ಕ್ರಿಕೆಟಿಗನನ್ನಾಗಿ ಮಾಡಲು ನೆರವಾಯಿತು ಎಂದು 27 ವರ್ಷದ ಸ್ಪೀಡ್ ಸ್ಟಾರ್ ಹೇಳಿದ್ದಾರೆ.
" ನಾನು ಪಂದ್ಯದ ವೇಳೆ ಕೋಪವನ್ನು ತೋರಿಸಲು ಬಯಸುವುದಿಲ್ಲ, ಇದು ನನ್ನ ಯಶಸ್ಸಿಗೆ ನೆರವಾಯಿತು. ಆಕ್ರಮಣಶೀಲತೆಯನ್ನು ನಿಯಂತ್ರಿಸಿಕೊಂಡು ನನ್ನ ಆಟವನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಾನು ಎಲ್ಲಿಯಾದರೂ ಮತ್ತು ಯಾವಾಗಲಾದರೂ ಸ್ವಯಂ ಪ್ರೇರಣೆ ತಗೆದುಕೊಳ್ಳಲು ಬಯಸುತ್ತೇನೆ ಎಂದು ಭಾರತದ ನಂಬರ್ 1 ವೇಗಿ ಹೇಳಿದ್ದಾರೆ.
ಇದನ್ನು ಓದಿ:ಕೊಹ್ಲಿ v/s ಗವಾಸ್ಕರ್ : ರನ್ ಮಷಿನ್ಗಿಂತಲೂ ಬೆಸ್ಟ್ ಅನ್ನುತ್ತಿವೆ ಲಿಟ್ಲ್ ಮಾಸ್ಟರ್ ದಾಖಲೆಗಳು