ಬರ್ಮಿಂಗ್ಹ್ಯಾಮ್(ಲಂಡನ್) : ಕಾಮನ್‌ವೆಲ್ತ್ ಗೇಮ್ಸ್ ಭಾರತ ಮತ್ತು ಪಾಕಿಸ್ತಾನ ವನಿತೆಯರ ಮುಖಾಮುಖಿಯಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಪಾಕ್ ವನಿತೆಯರು ನೀಡಿದ್ದ ಸುಲಭ ಮೊತ್ತವನ್ನು ಭಾರತ ತಂಡ 11.4 ಓವರ್ಗಳಲ್ಲೇ 2 ವಿಕೆಟ್ ನಷ್ಟದಿಂದ ಜಯ ಸಾಧಿಸಿದೆ. ಈ ಮೂಲಕ ಕಾಮನ್ ವೆಲ್ತ್ನ ಎ ಗುಂಪಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಮಳೆಯ ಕಾರಣ ಒಂದು ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತೀಯ ಬೌಲರ್ಗಳು ಕಾಡಿದರು. ಪಾಕಿಸ್ತಾನ 18 ಓವರ್ಗೆ 99ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಭಾರತ ತಂಡದ 11.4 ಓವರ್ನಲ್ಲಿ 102 ರನ್ಗೆ 2 ವಿಕೇಟ್ ಕೆಳೆದುಕೊಂಡು ಸರಳವಾಗಿ ಗೆದ್ದುಕೊಂಡಿತು.
-
𝐀𝐋𝐋 𝐎𝐕𝐄𝐑!
— BCCI Women (@BCCIWomen) July 31, 2022 " class="align-text-top noRightClick twitterSection" data="
Clinical with the ball & splendid with the bat, 𝐈𝐧𝐝𝐢𝐚 𝐛𝐞𝐚𝐭 𝐏𝐚𝐤𝐢𝐬𝐭𝐚𝐧 by 8 wickets in their 2nd Commonwealth Games match. 👏 👏
Vice-captain @mandhana_smriti smashes 63*. 🙌 🙌
Scorecard ▶️ https://t.co/6xtXSkd1O7 #B2022 #TeamIndia #INDvPAK pic.twitter.com/MVUX3yFO4s
">𝐀𝐋𝐋 𝐎𝐕𝐄𝐑!
— BCCI Women (@BCCIWomen) July 31, 2022
Clinical with the ball & splendid with the bat, 𝐈𝐧𝐝𝐢𝐚 𝐛𝐞𝐚𝐭 𝐏𝐚𝐤𝐢𝐬𝐭𝐚𝐧 by 8 wickets in their 2nd Commonwealth Games match. 👏 👏
Vice-captain @mandhana_smriti smashes 63*. 🙌 🙌
Scorecard ▶️ https://t.co/6xtXSkd1O7 #B2022 #TeamIndia #INDvPAK pic.twitter.com/MVUX3yFO4s𝐀𝐋𝐋 𝐎𝐕𝐄𝐑!
— BCCI Women (@BCCIWomen) July 31, 2022
Clinical with the ball & splendid with the bat, 𝐈𝐧𝐝𝐢𝐚 𝐛𝐞𝐚𝐭 𝐏𝐚𝐤𝐢𝐬𝐭𝐚𝐧 by 8 wickets in their 2nd Commonwealth Games match. 👏 👏
Vice-captain @mandhana_smriti smashes 63*. 🙌 🙌
Scorecard ▶️ https://t.co/6xtXSkd1O7 #B2022 #TeamIndia #INDvPAK pic.twitter.com/MVUX3yFO4s
ಉಪ ನಾಯಕಿ ಸ್ಮೃತಿ ಮಂದಾನ ಅವರ ಅದ್ಭುತ ಅರ್ಧ ಶತಕದ ನೆರವಿನಿಂದ ತಂಡ ಸುಲಭ ಜಯ ಸಾಧಿಸಿತು. ಮಂದಾನ ಅವರು 42 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ನಿಂದ ಅಜೇಯ 63 ರನ್ ಗಳಿಸಿದರು. ಅವರೊಂದಿಗೆ ಆರಂಭಿಕರಾಗಿ ಬಂದ ಶಫಾಲಿ ವರ್ಮಾ 50ರನ್ಗಳ ಜೊತೆಯಾಟಕ್ಕೆ ನೆರವಾದರು. ಹೆಚ್ಚು ಮಂದಾನ ಕ್ರಿಸ್ನಲ್ಲಿದ್ದ ಕಾರಣ 9 ಎಸೆತಗಳಲ್ಲಿ ಚುರುಕಾದ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶಫಾಲಿ ವಿಕೆಟ್ ನಂತರ ಬಂದ ಸಬ್ಬಿನೇನಿ ಮೇಘನಾ (14), ಜೆಮಿಮಾ ರೋಡ್ರಿಗಸ್ (2) ಮಂದಾನಗೆ ಸಾಥ್ ನೀಡಿದರು. ಪಾಕಿಸ್ತಾನದ ಪರ ಒಮೈಮಾ ಸೊಹೈಲ್ ಮತ್ತು ತುಬಾ ಹಸನ್ ತಲಾ ಒಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ : ತೇವಯುತ ಪಿಚ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಭಾರತೀಯ ಬೌಲರ್ಗಳು ಕಾಡಿದರು. ಇದರಿಂದ ಪಾಕಿಸ್ತಾನ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ಮುನೀಬಾ ಅಲಿ(32) ಬಿಟ್ಟರೆ ಬೇರಾರು 20ಕ್ಕಿಂತ ಹೆಚ್ಚಿನ ರನ್ ಗಳಿಸುವಲ್ಲಿ ಶಕ್ತರಾಗಲಿಲ್ಲ.
-
Victory for India 🇮🇳
— ICC (@ICC) July 31, 2022 " class="align-text-top noRightClick twitterSection" data="
Smriti Mandhana stars with a sensational 63* 👏#INDvPAK | #B2022 | 📝 https://t.co/l2dMIXPVXK pic.twitter.com/6ftdl5Ugdh
">Victory for India 🇮🇳
— ICC (@ICC) July 31, 2022
Smriti Mandhana stars with a sensational 63* 👏#INDvPAK | #B2022 | 📝 https://t.co/l2dMIXPVXK pic.twitter.com/6ftdl5UgdhVictory for India 🇮🇳
— ICC (@ICC) July 31, 2022
Smriti Mandhana stars with a sensational 63* 👏#INDvPAK | #B2022 | 📝 https://t.co/l2dMIXPVXK pic.twitter.com/6ftdl5Ugdh
ಕ್ರೀಸ್ಗೆ ಬಂದು ನೆಲೆಗೊಳ್ಳುವ ಮೊದಲೇ ಇರಾಮ್ ಜಾವೇದ್(0) ವಿಕೆಟ್ ಕಳೆದುಕೊಂಡರು. ನಂತರ ಬಂದ ಬಿಸ್ಮಾ ಮರೂಫ್ ನಿದಾನವಾಗಿ ಮುನೀಬಾ ಅಲಿಗೆ ಸಾಥ್ ನೀಡಿ 50ರನ್ಗಳ ಜೊತೆಯಾಟ ಆಡಿದರು. ತಂಡದ ಮೊತ್ತ 52 ಆಗಿದ್ದಾಗ ನಾಯಕಿ ಮರೂಫ್(17) ವಿಕೆಟ್ ಪತನವಾಯಿತು.
ತರಗೆಲೆಗಳಂತೆ ವಿಕೆಟ್ ಪತನ : ನಂತರ ಬಂದ ಅಲಿಯಾ ರಿಯಾಜ್(18), ಆಯೇಶಾ ನಸೀಮ್(10), ಕೈನಾತ್ ಇಮ್ತಿಯಾಜ್(2), ಫಾತಿಮಾ ಸನಾ(8), ತುಬಾ ಹಸನ್(1), ಡಯಾನಾ ಬೇಗ್(0), ಅನಮ್ ಅಮೀನ್(0) ಬೇಗ ವಿಕೆಟ್ ಕಳೆದುಕೊಂಡರು.
ಭಾರತದ ಪರ ರಾಧಾ ಯಾದವ್ ಮತ್ತು ಸ್ನೇಹ ರಾಣಾ ತಲಾ ಎರಡು ವಿಕೆಟ್ ಪಡೆದರೆ, ಮೇಘನಾ ಸಿಂಗ್, ರೇಣುಕಾ ಸಿಂಗ್ ಮತ್ತು ಶಫಾಲಿ ವರ್ಮಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: India-Pak women cricket: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್