ಬ್ರಿಸ್ಟೋಲ್: ಇಂಗ್ಲೆಂಡ್ ವನಿತೆಯರ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯ ನಂತರ ಕಮ್ಬ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತದ ಸ್ನೇಹ್ ರಾಣಾ ಪಿಚ್ ಸ್ಲೋ ಇದ್ದು, ಆರಂಭದಿಂದಲೂ ಸ್ಪಿನ್ನರ್ಗಳಿಗೆ ನೆರವು ನೀಡಿತು ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ನಡೆಸಿ 230 ರನ್ಗಳಿಗೆ 2 ವಿಕೆಟ್ ಮಾತ್ರ ಕಳೆದುಕೊಂಡಿತ್ತು. ನಂತರ 21 ರನ್ಗಳಿಸುವ ವೇಳೆಗೆ 4 ವಿಕೆಟ್ ಕಳೆದುಕೊಂಡಿತು. ರಾಣಾ ಮತ್ತು ದೀಪ್ತಿ ಶರ್ಮಾ ಆಂಗ್ಲ ಮಹಿಳೆಯರಿಗೆ ದಿಢೀರ್ ಶಾಕ್ ನೀಡಿದರು. ಇಬ್ಬರು ತಲಾ ಎರಡು ವಿಕೆಟ್ ಪಡೆಯುವುದರೊಂದಿಗೆ ಕೊನೆಯ ಸೆಷನ್ನಲ್ಲಿ ಭಾರತ ಕಮ್ಬ್ಯಾಕ್ ಆಗುವಂತೆ ಮಾಡಿದರು.
ಈ ಪಿಚ್ ಆರಂಭದಲ್ಲಿ ಸ್ವಲ್ಪ ಸ್ಲೋ ಇತ್ತು, ಆದರೆ, ಸ್ಪಿನ್ನರ್ಗಳಿಗೆ ನೆರವಾಯಿತು. ಆರಂಭದಲ್ಲಿ ಸ್ವಲ್ಪ ಮಾತ್ರ ಟರ್ನಿಂಗ್ ಆಗುತ್ತಿದ್ದರಿಂದ ಬ್ಯಾಟಿಂಗ್ಗೆ ನೆರವಾಯಿತು. ಅಲ್ಲದೇ ಬ್ಯಾಟಿಂಗ್ ಇದು ಒಳ್ಳೆಯ ವಿಕೆಟ್. ನಾಳೆಯೂ ಹೀಗೆ ಇರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ರಾಣಾ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
7 ವರ್ಷಗಳ ನಂತರ ಭಾರತ ವನಿತೆಯರ ತಂಡ ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದೆ. ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 296 ರನ್ಗಳಿಸಿತ್ತು. ಇಂಗ್ಲೆಂಡ್ ನಾಯಕಿ ಹೀದರ್ ನೈಟ್ 95 ರನ್ಗಳಿಸಿದರೆ, ಟಮ್ಮಿ ಬ್ಯಾಂಟಮ್ 66 ರನ್ಗಳಿಸಿದರು.
ಭಾರತದ ಪರ ಸ್ನೇಹ್ ರಾಣಾ 90ಕ್ಕೆ3, ದೀಪ್ತಿ ಶರ್ಮಾ 58ಕ್ಕೆ 2 , ಪೂಜಾ ವಸ್ತ್ರಾಕರ್ ಮತ್ತು ಗೋಸ್ವಾಮಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿ: ಇಂಗ್ಲೆಂಡ್ ಸರಣಿ ಕಿವೀಸ್ಗೆ ಅನುಕೂಲವಾಗಿದೆ, ಆದರೆ ಭಾರತ ಮ್ಯಾಚ್ ವಿನ್ನರ್ಸ್ಗಳ ತಂಡ: ಯುವರಾಜ್