ETV Bharat / sports

ಕಾಕತಾಳಿಯ!!! ಈ ಐಪಿಎಲ್​ನಲ್ಲಿ ಕೊನೆ ಎಸೆತದಲ್ಲಿ ವಿಕೆಟ್​ ಕಳೆದುಕೊಳ್ಳುತ್ತಿವೆ ಮೊದಲು ಬ್ಯಾಟಿಂಗ್ ಮಾಡುವ ತಂಡ!

author img

By

Published : Apr 14, 2021, 9:50 PM IST

Updated : Apr 15, 2021, 7:03 AM IST

ವಿಶೇಷ ಎಂದರೆ ಏಪ್ರಿಲ್ 12 ರಂದು ನಡೆದಿದ್ದ ರಾಜಸ್ಥಾನ್​ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳ ​ಬ್ಯಾಟ್ಸ್ಮನ್​ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್​ ಒಪ್ಪಿಸಿದ್ದಾರೆ.

ಐಪಿಎಲ್ 2021
ಐಪಿಎಲ್ 2021

ಚೆನ್ನೈ: 2021ರ ಐಪಿಎಲ್​ನಲ್ಲಿ ಅಪರೂಪದ ದಾಖಲೆ ನಿರ್ಮಾಣವಾಗಿದೆ. ಇಂದಿನ ಪಂದ್ಯ ಸೇರಿದಂತೆ ಇದುವರೆಗೂ ನಡೆದಿರುವ ಎಲ್ಲಾ 6 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್​ ಕಳೆದುಕೊಂಡಿವೆ.

ವಿಶೇಷವೆಂದರೆ ಏಪ್ರಿಲ್ 12 ರಂದು ನಡೆದಿದ್ದ ರಾಜಸ್ಥಾನ್​ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟ್ಸ್​ಮನ್​ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್​ ಒಪ್ಪಿಸಿದ್ದಾರೆ.

ಏಪ್ರಿಲ್ 9ರಂದು ಚೆನ್ನೈನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ತಂಡ 20 ಓವರ್​ಗಳಲ್ಲಿ 159 ರನ್​ಗಳಿಸಿತ್ತು. ಕೊನೆಯ ಎಸೆತದಲ್ಲಿ ರಾಹುಲ್ ಚಹರ್​ ರನ್​ಔಟ್​ ಆಗಿದ್ದರು.

ಏಪ್ರಿಲ್ 10 ರಂದು ನಡೆದಿದ್ದ ಸಿಎಸ್​ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ 2ನೇ ಪಂದ್ಯದಲ್ಲಿ ಚೆನ್ನೈನ ಸ್ಯಾಮ್​ ಕರ್ರನ್, ಪ್ಯಾಟ್​ ಕಮ್ಮಿನ್ಸ್​ ಎಸೆದ 20ನೇ ಓವರ್​ನ​ ಕೊನೆಯ ಎಸೆತದಲ್ಲಿ ಬೌಲ್ಡ್​ ಆಗಿದ್ದರು.

ಏಪ್ರಿಲ್ 11ರಂದು ನಡೆದಿದ್ದ 3ನೇ ಪಂದ್ಯದಲ್ಲಿ ಕೆಕೆಆರ್ ತಂಡದ ಆಲ್​ರೌಂಡರ್​ ಶಕಿಬ್ ಅಲ್ ಹಸನ್​ ಸನ್​ರೈಸರ್ಸ್​ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್​ ಓವರ್​ನ ಕೊನೆಯ ಎಸೆತದಲ್ಲಿ ಅಬ್ದುಲ್ ಸಮದ್​ಗೆ ಕ್ಯಾಚ್​ ನೀಡಿ ಔಟಾಗಿದ್ದರು.

ಏಪ್ರಿಲ್ 12ರಂದು ನಡೆದಿದ್ದ 4ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ತಂಡದ ಜೇ ರಿಚರ್ಡ್ಸನ್ 20 ನೇ ಓವರ್​ನ ಕೊನೆಯ ಎಸೆತದಲ್ಲಿ ಸಕಾರಿಯಾಗೆ ವಿಕೆಟ್​ ಒಪ್ಪಿಸಿದ್ದರು. ಅದೇ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ರಾಜಸ್ಥಾನದ ನಾಯಕ ಸಂಜು ಸಾಮ್ಸನ್ ಅರ್ಷ್​ದೀಪ್ ಸಿಂಗ್ ಎಸೆದ 20 ಓವರ್​ನ ಕೊನೆಯ ಎಸೆತದಲ್ಲಿ ಕ್ಯಾಚ್ ಔಟ್ ಆಗಿದ್ದರು.

ಏಪ್ರಿಲ್ 13ರಂದು ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ನ ರಾಹುಲ್ ಚಹರ್ ರಸೆಲ್ ಎಸೆದ 20ನೇ ಓವರ್​ನ ಕೊನೆಯ ಎಸೆತದಲ್ಲಿ ಗಿಲ್​ಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದ್ದರು.

ಇನ್ನು ಇಂದು ನಡೆಯುತ್ತಿರುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ ತನ್ನ ಇನ್ನಿಂಗ್ಸ್​ನ ಕೊನೆಯ ಎಸೆತದಲ್ಲಿ 59 ರನ್​ಗಳಿಸಿದ್ದ ಗ್ಲೇನ್​ ಮ್ಯಾಕ್ಸ್​ವೆಲ್ ವಿಕೆಟ್​ ಕಳೆದು ಕೊಂಡಿತು. ಹೋಲ್ಡರ್​ ಬೌಲಿಂಗ್​ನಲ್ಲಿ ಮ್ಯಾಕ್ಸ್​ವೆಲ್ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು.

ಮಾಹಿತಿ: ಹೆಚ್​. ಆರ್​. ಗೋಪಾಲಕೃಷ್ಣ

Last Updated : Apr 15, 2021, 7:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.