ಅಬುಧಾಬಿ: ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ವೈಫಲ್ಯ ಅನುಭವಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 142 ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ತಂಡ 2ನೇ ಓವರ್ನಲ್ಲಿ ಯುವ ಬ್ಯಾಟರ್ ಅಭಿಷೇಕ್ ಶರ್ಮಾ(13) ವಿಕೆಟ್ ಕಳೆದುಕೊಂಡರೂ ನಾಯಕ ವಿಲಿಯಮ್ಸನ್ ಮತ್ತು ಜೇಸನ್ ರಾಯ್ ಅವರ ಅತ್ಯುತ್ತಮ ಜೊತೆಯಾಟದಿಂದ 2ನೇ ವಿಕೆಟ್ಗೆ 70 ರನ್ ಸೂರೆಗೈದಿತು. ಆದರೆ 29 ಎಸೆತಗಳಲ್ಲಿ 31ರನ್ಗಳಿಸಿದ್ದ ವಿಲಿಯಮ್ಸನ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಹೈದರಾಬಾದ್ ಕುಸಿತ ಆರಂಭವಾಯಿತು.
-
Innings Break!
— IndianPremierLeague (@IPL) October 6, 2021 " class="align-text-top noRightClick twitterSection" data="
A wonderful comeback by #RCB there.
After being put to bat first, #SRH post a total of 141/7 on the board.#RCB chase coming up shortly.
Scorecard - https://t.co/EqmOIUJjxn #RCBvSRH #VIVOIPL pic.twitter.com/VQrGqd1s0w
">Innings Break!
— IndianPremierLeague (@IPL) October 6, 2021
A wonderful comeback by #RCB there.
After being put to bat first, #SRH post a total of 141/7 on the board.#RCB chase coming up shortly.
Scorecard - https://t.co/EqmOIUJjxn #RCBvSRH #VIVOIPL pic.twitter.com/VQrGqd1s0wInnings Break!
— IndianPremierLeague (@IPL) October 6, 2021
A wonderful comeback by #RCB there.
After being put to bat first, #SRH post a total of 141/7 on the board.#RCB chase coming up shortly.
Scorecard - https://t.co/EqmOIUJjxn #RCBvSRH #VIVOIPL pic.twitter.com/VQrGqd1s0w
ಯುವ ಬ್ಯಾಟರ್ ಪ್ರಿಯಂ ಗರ್ಗ್ 11ಎಸೆತಗಳಲ್ಲಿ ಕೇವಲ14 ರನ್ಗಳಿಸಿ ಕ್ರಿಸ್ಚಿಯನ್ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಅದೇ ಓವರ್ ಕೊನೆಯ ಎಸೆತದಲ್ಲಿ 38 ಎಸೆತಗಳಲ್ಲಿ 44 ರನ್ಗಳಿಸಿದ್ದ ಆರಂಭಿಕ ಜೇಸನ್ ರಾಯ್ ಬೌಲರ್ ಕ್ರಿಶ್ಚಿಯನ್ಗೆ ರಿವರ್ಸ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಭರವಸೆಯ ಬ್ಯಾಟರ್ ಅಬ್ದುಲ್ ಸಮದ್ (1) ಮತ್ತು ಕಳೆಕ್ರಮಾಂಕಕ್ಕೆ ಹಿಂಬಡ್ತಿ ಪಡೆದಿದ್ದ ವೃದ್ಧಿಮಾನ್ ಸಹಾ 10ರನ್ಗಳಿಗೆ ಸುಸ್ತಾದರು. ಕೊನೆಯಲ್ಲಿ ಜೇಸನ್ ಹೋಲ್ಡರ್ 16 ಮತ್ತು ರಶೀದ್ ಅಜೇಯ 7 ರನ್ಗಳಿಸಿದರು.
ಆರ್ಸಿಬಿ ಪರ ಹರ್ಷಲ್ ಪಟೇಲ್ 33 ರನ್ ನೀಡಿ 3 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ಡೇನಿಯಲ್ ಕ್ರಿಶ್ಚಿಯನ್ 14ಕ್ಕೆ 2, ಯುಜ್ವೇಂದ್ರ ಚಹಾಲ್ 27ಕ್ಕೆ 1 ಮತ್ತು ಜಾರ್ಜ್ ಗಾರ್ಟನ್ 29ಕ್ಕೆ 1 ವಿಕೆಟ್ ಪಡೆದರು.