ಮುಂಬೈ: ಭಾರತ ತಂಡದ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ್ ಇಂಗ್ಲೆಂಡ್ ಪ್ರವಾಸಕ್ಕೂ ಮುಂಬೈನಲ್ಲಿ ಕಠಿಣ ಕ್ವಾರಂಟೈನ್ಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಸಮಯ ಕಳೆಯಲು ತಮ್ಮ ಮುದ್ದಾದ ಮಗಳು ಸಹಾಯ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ.
ಭಾರತ ಮಹಿಳಾ ಮತ್ತು ಪುರುಷರ ತಂಡ ಜೂನ್ 2ರಂದು ವಿಶೇಷ ವಿಮಾನದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅದಕ್ಕೂ ಮುನ್ನ ಮುಂಬೈನಲ್ಲಿ 8 ದಿನಗಳ ಕಠಿಣ ಕ್ವಾರಂಟೈನ್ಗೆ ಒಳಗಾಗಿದೆ. ಈ ಸಂದರ್ಭದಲ್ಲಿ ಎಲ್ಲ ಆಟಗಾರರಿಗೂ ಸಮಯ ಕಳೆಯುವುದು ಒಂದು ದೊಡ್ಡ ಸವಾಲಾಗಿದೆ. ಕುಟುಂಬದ ಜೊತೆಗಿರುವ ಪೂಜಾರಾಗೆ ಮಾತ್ರ ಅದು ತುಂಬಾ ಸುಲಭವಾಗಿದೆ.
ಹೌದು, ಪೂಜಾರ ಕ್ವಾರಂಟೈನ್ ಸಮಯವನ್ನು ತಮ್ಮ ಮಗಳು ಅದಿತಿ ಜೊತೆಗೆ ಕಳೆಯುತ್ತಿದ್ದಾರೆ. ಈ ವೇಳೆ, ಸಮಯ ಕಳೆಯಲು ವಿಡಿಯೋ ಗೇಮ್ ಆಡುತ್ತಿದ್ದು, ತಮಗೆ ತಮ್ಮ ಮಗಳು ಜೊತೆಯಾಗಿದ್ದಾಳೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಪೂಜಾರ ಮತ್ತು ಅದಿತಿ ವಿಡಿಯೋ ಗೇಮ್ ಆಡುತ್ತಿದ್ದಾರೆ, ಅದಿತಿ ಚೆನ್ನೈ ಸೂಪರ್ ಕಿಂಗ್ಸ್ ಜರ್ಸಿ ತೊಟ್ಟಿರುವುದು ವಿಶೇಷ ಆಕರ್ಷಣೀಯವಾಗಿದೆ.
ಭಾರತ ತಂಡ ಮುಂಬೈನಲ್ಲಿ 8 ದಿನಗಳ ಕ್ವಾರಂಟೈನ್ ಮುಗಿಸಿದ ನಂತರ ಇಂಗ್ಲೆಂಡ್ಗೆ ತೆರಳಲಿದ್ದು, ಸೌತಾಂಪ್ಟನ್ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದೆ. ಆದರೆ, ಆಟಗಾರರು ಅಭ್ಯಾಸ ಮಾಡಲು ಸೌತಾಂಪ್ಟನ್ ಸ್ಟೇಡಿಯಂನಲ್ಲಿ ಅವಕಾಶ ಮಾಡಿ ಕೊಡಲಾಗಿದೆ.
ಜೂನ್ 18ರಂದಿಂದ 22ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಡೆದರೆ, ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಇದನ್ನು ಓದಿ: ಕ್ರಿಕೆಟ್ಗೆ ಭಾರತದ ಅಗತ್ಯವಿದೆ, ಅವರ ಪ್ರದರ್ಶನದಿಂದಲೇ ಟೆಸ್ಟ್ ಇನ್ನೂ ಜೀವಂತವಾಗಿದೆ : ರಿಚರ್ಡ್ ಹ್ಯಾಡ್ಲಿ