ಲಂಡನ್: ಭಾರತ ತಂಡದ ಅನುಭವಿ ಬ್ಯಾಟರ್ ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ನಲ್ಲಿ ರನ್ಗಳ ಹೊಳೆಯನ್ನೇ ಹರಿಸಿದ್ದಾರೆ. ಸಸೆಕ್ಸ್ ಪರ ಆಡುತ್ತಿರುವ ಅವರು 3 ಪಂದ್ಯಗಳಲ್ಲಿ 2 ದ್ವಿಶತಕ ಮತ್ತು ಒಂದು ಶತಕದ ಸಹಿತ 531 ರನ್ಗಳಿಸಿದ್ದಾರೆ. ಕೌಂಟಿ ಚಾಂಪಿಯನ್ಶಿಪ್ನಲ್ಲಿ 2 ದ್ವಿಶತಕ ಸಿಡಿಸಿ ಭಾರತದ 2ನೇ ಬ್ಯಾಟರ್ ಎಂಬ ಶ್ರೇಯಕ್ಕೂ ಪಾತ್ರರಾದರು.
ಪೂಜಾರ ಡುರಮ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 203 ರನ್ಗಳಿಸುವ ಮೂಲಕ ಟೂರ್ನಿಯಲ್ಲಿ 2ನೇ ದ್ವಿಶತಕ ಸಿಡಿಸಿದರು. 334 ಎಸೆತಗಳನ್ನೆದುರಿಸಿದ ಅವರು 24 ಬೌಂಡರಿಗಳನ ಸಹಿತ 203 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಪೂಜಾರ ಅವರ ಅಮೋಘ ದ್ವಿಶತಕದ ನೆರವಿನಿಂದ ಸಸೆಕ್ಸ್ 315 ರನ್ಗಳ ಬೃಹತ್ ಮುನ್ನಡೆ ಸಾಧಿಸಿತು. ಡುರಮ್ ಮೊದಲ ಇನ್ನಿಂಗ್ಸ್ನಲ್ಲಿ 223 ರನ್ಗಳಿಗೆ ಆಲೌಟ್ ಆಗಿತ್ತು.
ಚೇತೇಶ್ವರ್ ಪೂಜಾರ ಸಸೆಕ್ಸ್ ಪರ ಪದಾರ್ಪಣೆ ಪಂದ್ಯದಲ್ಲಿ ಡರ್ಬಿಶೈರ್ ವಿರುದ್ಧ 6 ಮತ್ತ ಅಜೇಯ 201 ರನ್, 2ನೇ ಪಂದ್ಯದಲ್ಲಿ ವೋರ್ಸೆಸ್ಟರ್‌ಶೈರ್ ವಿರುದ್ಧ 109 ಮತ್ತು 12 ರನ್ಗಳಿಸಿದ್ದರು.
ಅಜರುದ್ದೀನ್ ದಾಖಲೆ ಸರಿಗಟ್ಟಿದ ಪೂಜಾರ: ಕೌಂಟಿ ಚಾಂಪಿಯನ್ ಚಾಂಪಿಯನ್ಶಿಪ್ನಲ್ಲಿ 2 ದ್ವಿಶತಕ ಸಿಡಿಸಿದ 2ನೇ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು. ಇದಕ್ಕೂ ಮುನ್ನ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈ ಸಾಧನೆ ಮಾಡಿದ್ದರು. 1991ರಲ್ಲಿ ಲೈಲೆಸ್ಟರ್ಶೈರ್ ವಿರುದ್ಧ 212 ಮತ್ತು 1994ರಲ್ಲಿ ಡುರ್ಹಾಮ್ ವಿರುದ್ಧ 205 ರನ್ಗಳಿಸಿದ್ದರು. ಎರಡೂ ಬಾರಿಯೂ ಡರ್ಬಿಶೈರ್ ತಂಡವನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ:ಆರ್ಸಿಬಿಯಿಂದ ಜಯ ಕಸಿದುಕೊಂಡ ತೆವಾಟಿಯಾ-ಮಿಲ್ಲರ್.. ಪ್ಲೇ ಆಫ್ಗೆ ಹತ್ತಿರವಾದ ಟೈಟನ್ಸ್