ETV Bharat / sports

ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ವಿಚಾರ: ಮಾಜಿ ಅಧ್ಯಕ್ಷ ಚೇತನ್​ ಶರ್ಮಾಗೆ ಮತ್ತೊಂದು ಚಾನ್ಸ್​?

author img

By

Published : Jan 3, 2023, 1:33 PM IST

ಭಾರತ ಕ್ರಿಕೆಟ್​ ತಂಡದ ಹೊಸ ಆಯ್ಕೆ ಸಮಿತಿ ರಚನೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮಾಜಿ ಅಧ್ಯಕ್ಷ ಚೇತನ್​ ಶರ್ಮಾರಿಗೆ ಇನ್ನೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ಭಾರತ ತಂಡ ಸತತ ಕಳಪೆ ಸಾಧನೆ ಮಾಡುತ್ತಿರುವ ಕಾರಣ ಆಯ್ಕೆ ಸಮಿತಿಯನ್ನು ಬರ್ಖಾಸ್ತು ಮಾಡಲಾಗಿದೆ.

chetan-sharma
ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ

ಮುಂಬೈ (ಮಹಾರಾಷ್ಟ್ರ): ಭಾರತ ಪುರುಷರ ರಾಷ್ಟ್ರೀಯ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಚೇತನ್​ ಶರ್ಮಾ ಅವರು ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಸಿಸಿಐ ಇನ್ನೊಂದು ಅವಕಾಶ ನೀಡಲು ಮುಂದಾಗಿದೆ. ಅವರು ಸಮಿತಿಯನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವರ್ಷದ ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಭಾರತ ಕಳಪೆ ಸಾಧನೆ ಮಾಡಿದ ಬಳಿಕ ಆಯ್ಕೆ ಸಮಿತಿಯ ತಲೆದಂಡ ಮಾಡಲಾಗಿತ್ತು. ಸಮಿತಿಯನ್ನು ಬರ್ಖಾಸ್ತು ಮಾಡಿ ಹೊಸ ಸಮಿತಿ ರಚನೆಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೂ ಮೊದಲು ಏಷ್ಯಾ ಕಪ್‌ ಫೈನಲ್​ ತಲುಪುವಲ್ಲೂ ಭಾರತ ಕ್ರಿಕೆಟ್​ ತಂಡ ವಿಫಲವಾಗಿತ್ತು. ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ಸರಣಿಯನ್ನು ಟೀಂ ಇಂಡಿಯಾ ಸೋತಿತ್ತು.

ಈ ಎಲ್ಲ ಹಿನ್ನಡೆಗಳ ಮಧ್ಯೆ ಸಮರ್ಥ ತಂಡದ ಆಯ್ಕೆಗೆ ಉತ್ತಮ ಆಯ್ಕೆ ಸಮಿತಿಯನ್ನು ರಚಿಸಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತದ ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣಾ ನಾಯಕ್ ಅವರಿದ್ದ ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ಪೂರ್ಣ ಅಧಿಕಾರ ನೀಡಿದೆ.

ಅದರಂತೆ ಸಿಎಸಿ ಬಿಸಿಸಿಐ ಕಚೇರಿಯಲ್ಲಿ ಹೊಸ ಆಯ್ಕೆ ಸಮಿತಿಗೆ ಸಲ್ಲಿಸಲಾದ ಅರ್ಜಿಗಳನ್ನು ಶಾರ್ಟ್​ಲಿಸ್ಟ್​ ಮಾಡಿದ್ದು, ಶೀಘ್ರದಲ್ಲೇ ಅಂತಿಮ ಪಟ್ಟಿ ಘೋಷಿಸಿ ಸಂದರ್ಶನ ನಡೆಸಲಾಗುವುದು.

ಮಾನದಂಡಗಳೇನು?: ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆಯಲು ಮಾಜಿ ಕ್ರಿಕೆಟಿಗರಾಗಿರಬೇಕು. ಕನಿಷ್ಠ 7 ಟೆಸ್ಟ್ ಅಥವಾ 30 ಪ್ರಥಮ ದರ್ಜೆ ಅಥವಾ 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಕನಿಷ್ಠ 5 ವರ್ಷಗಳ ಹಿಂದೆ ಕ್ರಿಕೆಟ್​ನಿಂದ ನಿವೃತ್ತರಾಗಿರಬೇಕು. 5 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರಬಾರದು.

ಓದಿ: 21ನೇ ವಯಸ್ಸಿಗೆ ಕ್ರಿಕೆಟ್‌ ಕೋಚ್​ ಹುದ್ದೆಗೇರಿದ ತೆಲಂಗಾಣದ ಯುವತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.