ಮುಂಬೈ: 2021ರ ಐಪಿಎಲ್ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ತಂಡದ ನಾಯಕ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟೂರ್ನಿಯನ್ನ ಅಮೋಘವಾಗಿ ಆರಂಭಿಸಿರುವ ಆರ್ಸಿಬಿ ಆಡಿರುವ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಮೊದಲ ಪಂದ್ಯವನ್ನು ಹೊರೆತುಪಡಿಸಿ ಉಳಿದ ಮೂರು ಪಂದ್ಯಗಳಲ್ಲಿ ಗೆದ್ದು ಅತ್ಯುತ್ತಮ ರನ್ರೇಟ್ನೊಂದಿಗೆ 2ನೇ ಸ್ಥಾನದಲ್ಲಿದೆ.
-
Toss Update: Captain @msdhoni has won the toss and has decided that @ChennaiIPL will bat first at the Wankhede Stadium today against @imVkohli's @RCBTweets. https://t.co/wpoquMXdsr #CSKvRCB #VIVOIPL pic.twitter.com/q2j1Zvi7AI
— IndianPremierLeague (@IPL) April 25, 2021 " class="align-text-top noRightClick twitterSection" data="
">Toss Update: Captain @msdhoni has won the toss and has decided that @ChennaiIPL will bat first at the Wankhede Stadium today against @imVkohli's @RCBTweets. https://t.co/wpoquMXdsr #CSKvRCB #VIVOIPL pic.twitter.com/q2j1Zvi7AI
— IndianPremierLeague (@IPL) April 25, 2021Toss Update: Captain @msdhoni has won the toss and has decided that @ChennaiIPL will bat first at the Wankhede Stadium today against @imVkohli's @RCBTweets. https://t.co/wpoquMXdsr #CSKvRCB #VIVOIPL pic.twitter.com/q2j1Zvi7AI
— IndianPremierLeague (@IPL) April 25, 2021
ಇಂದಿನ ಪಂದ್ಯದಲ್ಲಿ ಆರ್ಸಿಬಿ ಎರಡು ಬದಲಾವಣೆ ಮಾಡಿಕೊಂಡಿದೆ. ಶಹ್ಬಾಜ್ ಬದಲಿಗೆ ಸೈನಿ, ಕೇನ್ ರಿಚರ್ಡ್ಸನ್ ಬದಲಿಗೆ ಡೇನಿಯಲ್ ಕ್ರಿಸ್ಚಿಯನ್ ಆಡುತ್ತಿದ್ದಾರೆ.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಎರಡು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಇನ್ಫಾರ್ಮ್ ಆಲ್ರೌಂಡರ್ ಮೊಯೀನ್ ಅಲಿ ಅನ್ಫಿಟ್ ಆಗಿದ್ದು ಪಂದ್ಯದಿಂದ ಹೊರಗುಳಿದಿದ್ದರೆ, ಇವರ ಸ್ಥಾನಕ್ಕೆ ಸ್ಪಿನ್ನರ್ ಇಮ್ರಾನ್ ತಾಹೀರ್ ಅವಕಾಶ ಪಡೆದಿದ್ದಾರೆ. ಎಂಗಿಡಿ ಬದಲಿಗೆ ಬ್ರಾವೋ ಕಮ್ಬ್ಯಾಕ್ ಮಾಡಿದ್ದಾರೆ.
ಆರ್ಸಿಬಿ ತಂಡ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್ (ವಿ.ಕೀ), ಶಹ್ಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಕೇನ್ ರಿಚರ್ಡ್ಸನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಯುಜ್ವೇಂದ್ರ ಚಹಲ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, , ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್. ಧೋನಿ, ಡ್ವೇನ್ ಬ್ರಾವೋ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಇಮ್ರಾನ್ ತಾಹೀರ್ ಮತ್ತು ದೀಪಕ್ ಚಹರ್
ಇದನ್ನು ಓದಿ:ಎಂ.ಎಸ್.ಧೋನಿ 'ಮಾಸ್ಟರ್': ಸಿಎಸ್ಕೆ ಬಗ್ಗೆ ನಮಗೆ ಗೌರವವಿದೆ