ಶಾರ್ಜಾ, ಯುಎಇ: ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲು ಅನುಭವಿಸಿದೆ. ಆರ್‌ಸಿಬಿ ನೀಡಿದ್ದ 156 ರನ್ಗಳ ಮೊತ್ತವನ್ನು ಬೆನ್ನತ್ತಿದ ಸಿಎಸ್ಕೆ 18.1 ಓವರ್ಗಳಲ್ಲಿ ಪಂದ್ಯ ತನ್ನದಾಗಿಸಿಕೊಂಡಿದೆ.
ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಜೊತೆಯಾಟವಾಡಿದ್ದರು. ವಿರಾಟ್ ಕೊಹ್ಲಿಯ 53 ರನ್ ಮತ್ತು ದೇವದತ್ ಪಡಿಕ್ಕಲ್ ಅವರ 70 ರನ್ಗಳ ಹೋರಾಟ ವ್ಯರ್ಥವಾಗಿದೆ. ಈ ಜೋಡಿ 11 ಓವರ್ಗಳಲ್ಲಿ 111 ರನ್ ಗಳಿಸಿ, ತಂಡ ಉತ್ತಮ ರನ್ ಗಳಿಸುವಂತೆ ಮಾಡಿತು.
-
Back to back wins for @ChennaiIPL! 👏 👏
— IndianPremierLeague (@IPL) September 24, 2021 " class="align-text-top noRightClick twitterSection" data="
A convincing victory for #CSK as they beat #RCB by 6⃣ wickets. 👌 👌 #VIVOIPL #RCBvCSK
Scorecard 👉 https://t.co/2ivCYOWCBI pic.twitter.com/qKo58oFAJb
">Back to back wins for @ChennaiIPL! 👏 👏
— IndianPremierLeague (@IPL) September 24, 2021
A convincing victory for #CSK as they beat #RCB by 6⃣ wickets. 👌 👌 #VIVOIPL #RCBvCSK
Scorecard 👉 https://t.co/2ivCYOWCBI pic.twitter.com/qKo58oFAJbBack to back wins for @ChennaiIPL! 👏 👏
— IndianPremierLeague (@IPL) September 24, 2021
A convincing victory for #CSK as they beat #RCB by 6⃣ wickets. 👌 👌 #VIVOIPL #RCBvCSK
Scorecard 👉 https://t.co/2ivCYOWCBI pic.twitter.com/qKo58oFAJb
ಇದರ ಜೊತೆಗೆ ಡಿವಿಲಿಯರ್ಸ್ 12, ಗ್ಲೆನ್ ಮ್ಯಾಕ್ಸ್ವೆಲ್ 11 ರನ್ಗಳನ್ನು ಗಳಿಸಿ, ಪೆವಿಲಿಯನ್ಗೆ ತೆರಳಿದ್ದು, ಟಿಮ್ ಡೇವಿಡ್ ಕೇವಲ 1 ರನ್ಗಳಿಸಿದ್ರೆ, ಹರ್ಷಲ್ ಪಟೇಲ್ 3 ರನ್ ಮಾತ್ರ ಗಳಿಸಿದ್ದರು.
ಆರ್ಸಿಬಿಯಿಂದ 156 ರನ್ ಗುರಿ ನೀಡಲಾಯಿತಾದರೂ ಚೆನ್ನೈ ಸಂಘಟಿತ ಹೋರಾಟ ನಡೆಸಿ, ಪಂದ್ಯವನ್ನು ತನ್ನದಾಗಿಸಿಕೊಂಡಿದೆ. 11 ಎಸೆತಗಳು ಬಾಕಿ ಉಳಿದಿರುವಂತೆ ಚೆನ್ನೈ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ತನ್ನ ಗುರಿಯನ್ನು ತಲುಪಿದೆ.
ಚೆನ್ನೈ ತಂಡದ ಓಪನರ್‌ಗಳಾದ ಋತುರಾಜ್ ಗಾಯಕವಾಡ್ 38, ಅಂಬಾಟಿ ರಾಯುಡು 32, ಫಾಫ್ ಡು ಪ್ಲೆಸಿಸ್ 31, ಮೊಯಿನ್ ಅಲಿ 23 ರನ್ ಗಳಿಸಿ ಪಂದ್ಯ ಗೆಲ್ಲಲು ಕಾರಣವಾಗಿದ್ದಾರೆ. ಜೊತೆಗೆ ಸುರೇಶ್ ರೈನಾ 17, ಧೋನಿ 11 ರನ್ ಗಳಿಸಿದ್ದಾರೆ.
ಈಗ ಅಂಕಪಟ್ಟಿಯಲ್ಲೂ ಚೆನ್ನೈ ದಾಖಲೆ ಬರೆದಿದ್ದು, 9 ಪಂದ್ಯಗಳಲ್ಲಿ 14 ಅಂಕಗಳನ್ನು ಸಂಪಾದಿಸಿ ಮೊದಲ ಸ್ಥಾನಕ್ಕೆ ಏರಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.