ETV Bharat / sports

ತಿಲಕ್ ವರ್ಮಾ ಅರ್ಧಶತಕ:ಸಿಎಸ್​ಕೆಗೆ ಗೆಲ್ಲಲು 156 ರನ್​ಗಳ ಸಾಧಾರಣ ಗುರಿ ನೀಡಿದ ಮುಂಬೈ ಇಂಡಿಯನ್ಸ್ - ರವೀಂದ್ರ ಜಡೇಜಾ

ತಿಲಕ್ ವರ್ಮಾ ಅವತ 51 ರನ್​ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್​ಗೆ 156 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

Mumbai Indians vs Chennai Super Kings
Mumbai Indians vs Chennai Super Kings
author img

By

Published : Apr 21, 2022, 7:20 PM IST

Updated : Apr 21, 2022, 9:27 PM IST

ಮುಂಬೈ:ಸಿಎಸ್​ಕೆ ಬೌಲರ್​ಗಳ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್​ ಯುವ ಬ್ಯಾಟರ್​ ತಿಲಕ್​ ವರ್ಮಾ ಅವರ ಹೋರಾಟದ ಅರ್ಧಶತಕದ ಹೊರತಾಗಿಯೂ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್​ಗಳಿಸಿದೆ.

2022ರ ಆವೃತ್ತಿಯಲ್ಲಿ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಪವರ್​ ಪ್ಲೇ ನಲ್ಲೇ ಮುಖೇಶ್ ಚೌಧರಿ ದಾಳಿಗೆ ಸಿಲುಕಿ 3 ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ(0), ಇಶಾನ್ ಕಿಶನ್ ಖಾತೆ ತೆರೆಯದೇ ವಿಕೆಟ್​ ಒಪ್ಪಿಸಿದರೆ, ಡೆವಾಲ್ಡ್ ಬ್ರೇವಿಸ್​ 4 ರನ್​ಗಳಿಸಿ ಔಟಾದರು.

ಇನ್ನಿಂಗ್ಸ್​ 8ನೇ ಓವರ್​ನಲ್ಲಿ 21 ಎಸೆತಗಳಲ್ಲಿ 32 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್​ ಸ್ಯಾಂಟ್ನರ್ ಬೌಲಿಂಗ್​ನಲ್ಲಿ ಚೌಧರಿಗೆ ಕ್ಯಾಚ್​ ನೀಡಿ ಪೆವಿಲಿಯನ್​ಗೆ ಸೇರಿಕೊಂಡರು.

5ನೇ ಓವರ್​ನಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಿಸಿಕೊಂಡ 19 ವರ್ಷದ ತಿಲಕ್​ ವರ್ಮಾ ಅಜೇಯ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಈ ವೇಳೆ ಅವರು ಇಂದೇ ಪದಾರ್ಪಣೆ ಮಾಡಿದ ಹೃತಿಕ್ ಶೊಕೀನ್(25) ಜೊತೆಗೂಡಿ 5ನೇ ವಿಕೆಟ್​ಗೆ 38 ರನ್ ಸೇರಿಸಿದರು.

ನಂತರ ಬಂದ ಕೀರನ್ ಪೋಲಾರ್ಡ್(14) ಮತ್ತು ಡೇನಿಯಲ್ ಸ್ಯಾಮ್ಸ್​(5) ಮತ್ತೊಮ್ಮೆ ವಿಫಲರಾದರು. ಆದರೆ 8ನೇ ವಿಕೆಟ್​ ಜೊತೆಯಾಟದಲ್ಲಿ ತಿಲಕ್ ಮತ್ತು ಜಯದೇವ್​ ಉನಾದ್ಕತ್ 35 ರನ್​ ಸೇರಿಸುವ ಮೂಲಕ 156 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು. 43 ಎಸೆತಗಳನ್ನು ಎದುರಿಸಿದ ತಿಲಕ್​ 3 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ ಅಜೇಯ 51 ಮತ್ತು ಉನಾದ್ಕತ್ 9 ಎಸೆತಗಳಲ್ಲಿ 19 ರನ್​ಗಳಿಸಿದರು.

ಸಿಎಸ್​ಕೆ ಪರ ಮುಖೇಶ್ ಚೌಧರಿ 19ಕ್ಕೆ 3, ಡ್ವೇನ್ ಬ್ರಾವೋ 36ಕ್ಕೆ 2, ಸ್ಯಾಂಟ್ನರ್ ಮತ್ತು ತೀಕ್ಷಣ ತಲಾ ಒಂದು ವಿಕೆಟ್ ಪಡೆದರು.

ತಂಡಗಳ ಅಪ್​ಡೇಟ್​:ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಮೊಯೀನ್ ಅಲಿ ಬದಲಿಗೆ ಡ್ವೇನ್ ಪ್ರಿಟೋರಿಯಸ್​, ಕ್ರಿಸ್​ ಜೋರ್ಡನ್​ ಬದಲಿಗೆ ಮಿಚೆಲ್ ಸ್ಯಾಂಟ್ನರ್​ಗೆ ಅವಕಾಶ ನೀಡಿದೆ. ಮುಂಬೈ ಇಂಡಿಯನ್ಸ್ ಕೂಡ ತೈಮಲ್ ಮಿಲ್ಸ್ ಬದಲಿಗೆ ಡೇನಿಯಲ್ ಸ್ಯಾಮ್ಸ್​, ಮುರುಗನ್ ಅಶ್ವಿನ್ ಬದಲಿಗೆ ಯುವ ಸ್ಪಿನ್ನರ್ ಹೃತಿಕ್ ಶೋಕೀನ್, ಫ್ಯಾಬಿಯಲ್ ಅಲೆನ್ ಬದಲಿಗೆ ರಿಲೆ ಮೆರಿಡಿತ್​ಗೆ ಅವಕಾಶ ನೀಡಿದೆ.

ಮುಖಾಮುಖಿ: ಇತ್ತಂಡಗಳು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 19-13ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೀ), ಡೆವಾಲ್ಡ್ ಬ್ರೇವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ಹೃತಿಕ್ ಶೋಕೀನ್, ರಿಲೆ ಮೆರೆಡಿತ್, ಜಯದೇವ್ ಉನಾದ್ಕತ್, ಜಸ್ಪ್ರೀತ್ ಬುಮ್ರಾ

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೀ), ಡ್ವೈನ್ ಪ್ರಿಟೋರಿಯಸ್, ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ

Last Updated : Apr 21, 2022, 9:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.