ನವದೆಹಲಿ: ರಣಜಿ ಟ್ರೋಫಿಗೆ ಆಯ್ಕೆಗೆ ಲಭ್ಯನಿರುವುದಿಲ್ಲ ಎಂದು ತಿಳಿಸಿದ್ದ ಭಾರತ ಹಿರಿಯ ಪೇಸರ್ ಇಶಾಂತ್ ಶರ್ಮಾ, ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದು, ಗುರುವಾರ ಆರಂಭವಾಗಲಿರುವ ತಮಿಳುನಾಡು ವಿರುದ್ಧದ ಪಂದ್ಯಕ್ಕೂ ಮುನ್ನ ದೆಹಲಿ ರಣಜಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆದರೆ, 5 ದಿನಗಳ ಕಡ್ಡಾಯ ಕ್ವಾರಂಟೈನ್ ಇರುವುದರಿಂದ ಅವರು ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ, ಭಾರತೀಯ ಹಿರಿಯ ಬೌಲರ್ ಫೆಬ್ರವರಿ 24 ರಿಂದ ಆರಂಭವಾಗಲಿರುವ ಜಾರ್ಖಂಡ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಡೆಲ್ಲಿ ತಂಡ ತನ್ನ ಕೊನೆಯ ಪಂದ್ಯವನ್ನು ಛತ್ತೀಸ್ಗಢದ ವಿರುದ್ಧ ಆಡಲಿದೆ.
ಇಶಾಂತ್ ಶರ್ಮಾ ಇಂದು ಸಂಪರ್ಕಕ್ಕೆ ಸಿಕ್ಕಿದ್ದಾರೆ, ಅವರು ಎರಡನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಮೊದಲ ಪಂದ್ಯಕ್ಕೆ ಇವರು ಲಭ್ಯರಾಗಿದ್ದರೆ ತಂಡಕ್ಕೆ ಅನುಕೂಲವಾಗುತ್ತಿತ್ತು. ಆದರೆ ಅವರು ತಂಡಕ್ಕೆ ಆಗಮಿಸಿರುವುದಕ್ಕೆ ನಾವು ಸ್ವಾಗತಿಸುತ್ತೇವೆ ಎಂದು ತಂಡದ ಮೂಲಕ ಪಿಟಿಐಗೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಗುಡಿಸಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್!
ಇನ್ನು ಇಶಾಂತ್ ಜೊತೆಗೆ ಭಾರತ ತಂಡದಲ್ಲಿ ಹೆಚ್ಚುವರಿ ಬೌಲರ್ ಆಗಿದ್ದ ನವದೀಪ್ ಸೈನಿ ಕೂಡ ಗುವಾಹಟಿ ತಲುಪಿದ್ದಾರೆ. ಅವರು ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದರು, ಇದೀಗ ಅವರು ಜಾರ್ಖಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ, ಆದರೆ, ಕ್ವಾರಂಟೈನ್ ಮಾಡುವ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ.
ಆರಂಭಿಕನಾಗಿ ಯಶ್ ಧುಲ್ : ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಯಶ್ ಧುಲ್ ದೆಹಲಿ ತಂಡದ ಪರ ಧ್ರುವ್ ಶೋರೆ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಲೀಗ್ನಲ್ಲಿ 3 ಪಂದ್ಯಗಳಿರಲಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಸಲು ಮೊದಲ ಪಂದ್ಯ ಗೆಲ್ಲುವುದು ಎರಡೂ ತಂಡಗಳಿಗೂ ಮಹತ್ವದ್ದಾಗಲಿದೆ.
ಇದನ್ನೂ ಓದಿ:ಭಾರತ ತಂಡದಲ್ಲಿ ಅವಕಾಶವಿಲ್ಲ ಎನ್ನುವುದು ಖಚಿತ, ರಣಜಿಯಿಂದ ಒಬ್ಬಬ್ಬರಾಗಿ ಹೊರ ಬರುತ್ತಿರುವ ಸ್ಟಾರ್ ಕ್ರಿಕೆಟಿಗರು!