ಕೊಲಂಬೊ: ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಹಾಲ್ ಅವರ ಬೌಲಿಂಗ್ ನೆರವಿನಿಂದ ಪ್ರವಾಸಿ ಭಾರತ ತಂಡ ಶ್ರೀಲಂಕಾವನ್ನು 262 ರನ್ಗಳಿಗೆ ನಿಯಂತ್ರಿಸಿದೆ. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಲಂಕಾ ತಂಡಕ್ಕೆ ಕರುಣರತ್ನೆ 43 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡ ಮೊದಲ ವಿಕೆಟ್ಗೆ 49 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ಈ ಹಂತದಲ್ಲಿ ಕಣಕ್ಕಿಳಿದ ಚಹಲ್ 35 ಎಸೆತಗಳಲ್ಲಿ 32 ರನ್ಗಳಿಸಿದ್ದ ಆವಿಷ್ಕಾ ಫರ್ನಾಂಡೊ ವಿಕೆಟ್ ಪಡೆದು ಭಾರತಕ್ಕೆ ಬ್ರೇಕ್ ನೀಡಿದರು.
3ನೇ ಕ್ರಮಾಂಕದಲ್ಲಿ ಬಂದ ಪದಾರ್ಪಣೆ ಆಟಗಾರ ಭನುಕ ರಾಜಪಕ್ಷ ಹೊಡೆಬಡಿ ಆಟಕ್ಕೆ ಮುಂದಾಗಿ ಕುಲ್ದೀಪ್ ಬೌಲಿಂಗ್ನಲ್ಲಿ ಧವನ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇವರ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಮಿನೋದ್ ಭನುಕ ಕೂಡ ಕುಲ್ದೀಪ್ಗೆ 2ನೇ ಬಲಿಯಾದರು.
-
A late innings flourish from the batters allow Sri Lanka to post 262/9 on the board 🙌
— ICC (@ICC) July 18, 2021 " class="align-text-top noRightClick twitterSection" data="
Will the visitors chase this total down? #SLvIND | https://t.co/trHbMrCpo8 pic.twitter.com/Xbed5Cco98
">A late innings flourish from the batters allow Sri Lanka to post 262/9 on the board 🙌
— ICC (@ICC) July 18, 2021
Will the visitors chase this total down? #SLvIND | https://t.co/trHbMrCpo8 pic.twitter.com/Xbed5Cco98A late innings flourish from the batters allow Sri Lanka to post 262/9 on the board 🙌
— ICC (@ICC) July 18, 2021
Will the visitors chase this total down? #SLvIND | https://t.co/trHbMrCpo8 pic.twitter.com/Xbed5Cco98
4ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಿದ ಧನಂಜಯ ಡಿ ಸಿಲ್ವಾ 27 ಎಸೆತಗಳಲ್ಲಿ 14 ರನ್ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ನಾಯಕ ಶನಕ ಮತ್ತು ಚರಿತ್ ಅಸಲಂಕಾ 5ನೇ ವಿಕೆಟ್ ಜೊತೆಯಾಟದಲ್ಲಿ 49 ರನ್ ಸೇರಿಸಿ ಚೇತರಿಕೆ ನೀಡಿದರು. ದೀಪಕ್ ಚಹಾರ್ 38 ರನ್ಗಳಿಸಿದ್ದ ಅಸಲಂಕಾ ವಿಕೆಟ್ ಪಡೆಯುವ ಮೂಲಕ ಅಪಾಯಕಾರಿಯಾಗುತ್ತಿದ್ದ ಜೋಡಿಯನ್ನು ಬೇರ್ಪಡಿಸಿದರು.
ಈ ವಿಕೆಟ್ ಬೇರ್ಪಡುತ್ತಿದ್ದಂತೆ ಲಂಕಾ 2ನೇ ಬಾರಿಗೆ ದಿಢೀರ್ ಕುಸಿತ ಕಂಡಿತು. ಆಲ್ರೌಂಡರ್ ಹಸರಂಗ(8), ನಾಯಕ ಶನಾಕ (39) ಮತ್ತು ಉದಾನ 8 ರನ್ಗಳಿಸಿ ಔಟಾದರು.
ಆದರೆ ಕೊನೆಯ 2 ಓವರ್ನಲ್ಲಿ ಚಮೀರ(13) ಮತ್ತು ಚಮಿಕಾ ಕರುಣರತ್ನೆ(43) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 19 ಎಸೆತಗಳಲ್ಲಿ 40 ರನ್ಗಳ ಕಾಣಿಕೆ ನೀಡಿದರು. ಕರುಣ ರತ್ನೆ 35 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಹಿತ ಅಜೇಯ 43 ರನ್ಗಳಿಸಿ 262 ರನ್ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.
ಭಾರತದ ಪರ ದೀಪಕ್ ಚಹಾರ್ 37ಕ್ಕೆ 2, ಕುಲದೀಪ್ ಯಾದವ್ 48ಕ್ಕೆ 2, ಯುಜ್ವೇಂದ್ರ ಚಹಲ್ 52ಕ್ಕೆ 2, ಕೃನಾಲ್ ಪಾಂಡ್ಯ 26ಕ್ಕೆ1 ಮತ್ತು ಹಾರ್ದಿಕ್ ಪಾಂಡ್ಯ 33ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ಜನ್ಮದಿನದಂದೇ ಏಕದಿನ ಕ್ರಿಕೆಟ್ಗೆ ಇಶಾನ್ ಕಿಶನ್ ಪದಾರ್ಪಣೆ