ETV Bharat / sports

ನಿರ್ಮಲಾ ಬಜೆಟ್​ನಲ್ಲಿ ಕ್ರೀಡಾಕ್ಷೇತ್ರಕ್ಕೂ ಬಲ​.. ಕಳೆದ ವರ್ಷಕ್ಕಿಂತ 305 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಣೆ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​

Central government announces hike in sports budget-2022: ಪ್ರಸ್ತುತ ವರ್ಷದಲ್ಲಿ ಕಾಮನ್​ವೆಲ್ತ್​ ಗೇಮ್ಸ್​ ಮತ್ತು ಏಷ್ಯನ್​ ಗೇಮ್ಸ್ ಆಯೋಜನೆ ಆಗಲಿರುವುದರಿಂದ ಕ್ರೀಡಾಕ್ಷೇತ್ರಕ್ಕೆ ಬಲ ನೀಡುವ ಸಲುವಾಗಿ ಬಜೆಟ್​ನಲ್ಲಿ ಪ್ರಾಮುಖ್ಯತೆ ನೀಡಿ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಲಾಗಿದೆ.

Central government announces hike in sports budget
ಕ್ರೀಡಾಕ್ಷೇತ್ರಕ್ಕೆ ದಾಖಲೆಯ ಬಜೆಟ್
author img

By

Published : Feb 1, 2022, 6:14 PM IST

ನವದೆಹಲಿ: ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಕ್ರೀಡಾಕ್ಷೇತ್ರಕ್ಕೆ ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ 305.58 ಕೋಟಿ ರೂಗಳನ್ನು ಹಂಚಿಕೆ ಮಾಡಲಾಗಿದೆ. 2022-23ರ ಹಣಕಾಸಿ ವರ್ಷಕ್ಕೆ 3062.60 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

2021-22ರ ಕೇಂದ್ರ ಬಜೆಟ್​ನಲ್ಲಿ 2596.14 ಕೋಟಿ ರೂ. ಗಳನ್ನು ಕ್ರೀಡಾ ಕ್ಷೇತ್ರಕ್ಕೆ ಮೀಸಲಿಡಲಾಗಿತ್ತು. ಹಿಂದಿನ ಹಣಕಾಸು ವರ್ಷಕ್ಕಿಂತಲೂ 230.78 ಕೋಟಿ ರೂ.ಗಳ ಕಡಿತಗೊಳಿಸಿ ಹಂಚಿಕೆ ಮಾಡಲಾಗಿತ್ತು. ಆದರೆ ಪ್ರಸ್ತುತ ಬಜೆಟ್​ನಲ್ಲಿ 305 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಿದೆ. ಇದು ಕ್ರೀಡಾ ಕ್ಷೇತ್ರಕ್ಕೆ ಹಿಂದೆಂದಿಗಿಂತಲೂ ನೀಡಿದ ಗರಿಷ್ಠ ಆಯವ್ಯಯ ಎಂಬ ದಾಖಲೆಗೆ ಪಾತ್ರವಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪ್ರಸ್ತುತ ವರ್ಷದಲ್ಲಿ ಕಾಮನ್​ವೆಲ್ತ್​ ಗೇಮ್ಸ್​ ಮತ್ತು ಏಷ್ಯನ್​ ಗೇಮ್ಸ್ ಆಯೋಜನೆ ಆಗಲಿರುವುದರಿಂದ ಕ್ರೀಡಾಕ್ಷೇತ್ರಕ್ಕೆ ಬಲ ನೀಡುವ ಸಲುವಾಗಿ ಬಜೆಟ್​ನಲ್ಲಿ ಪ್ರಾಮುಖ್ಯತೆ ನೀಡಿ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಲಾಗಿದೆ.

ರಾಷ್ಟ್ರೀಯ ಯುವ ಸಬಲೀಕರಣ ಕಾರ್ಯಕ್ರಮಕ್ಕೆ 30 ಕೋಟಿ ರೂ. ಹೆಚ್ಚಿಸಿ 138 ಕೋಟಿ ರೂ. ಮತ್ತು ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ 974 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಳೆದ ಬಜೆಟ್​ನಲ್ಲಿ ಕ್ರಮವಾಗಿ 108 ಮತ್ತು 879 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು.

ಇದನ್ನೂ ಓದಿ:ಬಡವರಿಗೆ ಸೂರು.. PMAY ಅಡಿ 80 ಲಕ್ಷ ಮನೆ ನಿರ್ಮಾಣಕ್ಕಾಗಿ 48 ಲಕ್ಷ ಕೋಟಿ ರೂ. ಬಜೆಟ್​ನಲ್ಲಿ ಮೀಸಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.