ETV Bharat / sports

Caribbean Premier League 2023: ಚೊಚ್ಚಲ ಪ್ರಶಸ್ತಿ ಗೆದ್ದ ಗಯಾನಾ ವಾರಿಯರ್ಸ್.. - ETV Bharath Kannada news

ಗಯಾನಾ ವಾರಿಯರ್ಸ್ ಮೊದಲ ಕೆರಿಬಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

caribbean premier league 2023
caribbean premier league 2023
author img

By ETV Bharat Karnataka Team

Published : Sep 25, 2023, 5:21 PM IST

ಗಯಾನ (ವೆಸ್ಟ್​​ ಇಂಡೀಸ್​): ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಟ್ರಿಬಾಂಗೊ ನೈಟ್ ರೈಡರ್ಸ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಗಯಾನಾ ವಾರಿಯರ್ಸ್ ಅಂತಿಮವಾಗಿ ತಮ್ಮ ಆರನೇ ಫೈನಲ್‌ನಲ್ಲಿ ತಮ್ಮ ಮೊದಲ ಕೆರಿಬಿಯನ್ ಪ್ರೀಮಿಯರ್ ಲೀಗ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಗಯಾನಾ ಅಮೆಜಾನ್ ವಾರಿಯರ್ಸ್ ಈ ಮೊದಲು ಐದು ಬಾರಿ ಸಿಪಿಎಲ್ ಫೈನಲ್‌ನಲ್ಲಿ ಆಡಿದ್ದಾರೆ. ಆದರೆ ಅವರು ಪ್ರತಿ ಬಾರಿಯೂ ರನ್ನರ್​ ಅಪ್​ಆಗಿ ಹೊರಹೊಮ್ಮಿತ್ತು. ಇಮ್ರಾನ್ ತಾಹಿರ್ ನೇತೃತ್ವದ ತಂಡ ಈ ವರ್ಷ ತಮ್ಮ ಅದೃಷ್ಟವನ್ನು ಬದಲಿಸಿದೆ ಮತ್ತು 11ನೇ ಆವೃತ್ತಿಯಲ್ಲಿ ತಮ್ಮ ಮೊದಲ ಸಿಪಿಎಲ್ ಪ್ರಶಸ್ತಿಯನ್ನು ಜಯಿಸಿದೆ.

ಲೀಗ್ ಹಂತದಲ್ಲಿ ಒಂದೇ ಒಂದು ಪಂದ್ಯ ಸೋತ ವಾರಿಯರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅವರು ಮೊದಲ ಕ್ವಾಲಿಫೈಯರ್‌ನಲ್ಲಿ ಟ್ರಿನಿಡಾಡ್ ನೈಟ್ ರೈಡರ್ಸ್‌ಗೆ ಸೋತರು. ಆದರೆ ಅವರು ಕ್ವಾಲಿಫೈಯರ್ 2ನಲ್ಲಿ ಜಮೈಕಾ ತಲ್ಲಾವಾಸ್ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ, ಕೀರನ್ ಪೊಲಾರ್ಡ್ ನೇತೃತ್ವದ ನೈಟ್ಸ್, ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಐದನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿ ಟ್ರಿಬಾಂಗೊ ನೈಟ್ ರೈಡರ್ಸ್ ಕೇವಲ 94 ರನ್​ಗೆ ಆಲ್​ಔಟ್​ ಆದರು.

ಆಲ್‌ರೌಂಡರ್ ಡ್ವೇನ್ ಪ್ರಿಟೋರಿಯಸ್ ತಮ್ಮ ನಾಲ್ಕು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ನಾಯಕ ಇಮ್ರಾನ್ ತಾಹಿರ್ ಮತ್ತು ಗುಂಡಕೇಶ್ ಮೋಟಿ ತಲಾ ಎರಡು ವಿಕೆಟ್​ ಪಡೆದು ನೈಟ್ ರೈಡರ್ಸ್ಅನ್ನು 94ಕ್ಕೆ ಕಟ್ಟಿಹಾಕಿದರು. ತಾಹಿರ್ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ ಎಂಟು ರನ್‌ಗಳನ್ನು ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಆದರೆ ಮೋಟಿ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್‌ನೊಂದಿಗೆ 2 ಗಳಿಸಿ ಕೇವಲ 7 ರನ್ ನೀಡಿದರು. ರೊಮಾರಿಯೊ ಶೆಫರ್ಡ್ ಮತ್ತು ರಾನ್ಸ್‌ಫೋರ್ಡ್ ಬೀಟನ್ ತಲಾ ಒಂದು ವಿಕೆಟ್ ಉರುಳಿಸಿದರು.

ಚೇಸಿಂಗ್‌ಗೆ ಇಳಿದ ಗಯಾನಾ ಭರ್ಜರಿ ಬ್ಯಾಟಿಂಗ್​ ಮಾಡಿತು. 11 ರನ್​ಗೆ ಕೇಮೋ ಪೌಲ್​ ವಿಕೆಟ್​ ನಂತರ, ಸೈಮ್ ಅಯೂಬ್ ಅವರು ಕೇವಲ 41 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 52 ರನ್ ಗಳಿಸಿ, ತ್ವರಿತ ಅರ್ಧಶತಕವನ್ನು ದಾಖಲಿಸಿದರು. ಮೂರನೇ ವಿಕೆಟ್​ಗೆ ಬಂದ ಶಾಯ್ ಹೋಪ್ 32 ಬಾಲ್​ನಲ್ಲಿ 32 ರನ್​ ಗಳಿಸಿ ಅಯೂಬ್ ಆಟಕ್ಕೆ ಸಾಥ್​ ನೀಡಿದರು. ಇವರ ಬ್ಯಾಟಿಂಗ್​ ಬಲದಿಂದ ಗಯಾನಾ ವಾರಿಯರ್ಸ್ 1 ವಿಕೆಟ್​ ನಷ್ಟಕ್ಕೆ 14 ಓವರ್​ನಲ್ಲಿ 99 ರನ್​ ಕಲೆಹಾಕಿ ಭರ್ಜರಿ ಗೆಲುವು ದಾಖಲಿಸಿ ಚೊಚ್ಚಲ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: 6,6,6,6: ಆಸ್ಟ್ರೇಲಿಯಾ ವಿರುದ್ಧ ಸೂರ್ಯ ಕುಮಾರ್‌ ಸಿಡಿಲಬ್ಬರದ ಬ್ಯಾಟಿಂಗ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.