ಸಸೆಕ್ಸ್ (ಲಂಡನ್): ಸುಮಾರ ಎರಡು ತಿಂಗಳ ಕಾಲ ನಡೆದ ಚುಟುಕು ಸಮಯಕ್ಕೆ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸುವ ಮೂಲಕ ತೆರೆಬಿದ್ದಿದೆ. ಭಾರತ ತಂಡ ಲಂಡನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಲೀಗ್ನಿಂದ ಹೊರಗುಳಿದ ಐಪಿಎಲ್ ತಂಡದಲ್ಲಿದ್ದ ಆಟಗಾರರು ಈಗಾಗಲೇ ಲಂಡನ್ ಪ್ರವಾಸ ಕೈಗೊಂಡಿದ್ದು, ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಜೂನ್ 7 ರಿಂದ 11 ವರೆಗೆ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಟೆಸ್ಟ್ ಚಾಂಪಿಯನ್ ಶಿಪ್ ಆಡಲಿದೆ.
-
Captain @ImRo45 joins #TeamIndia's training session here at the Arundel Castle Cricket Club. #WTC23 pic.twitter.com/rI7S2gOZcr
— BCCI (@BCCI) May 30, 2023 " class="align-text-top noRightClick twitterSection" data="
">Captain @ImRo45 joins #TeamIndia's training session here at the Arundel Castle Cricket Club. #WTC23 pic.twitter.com/rI7S2gOZcr
— BCCI (@BCCI) May 30, 2023Captain @ImRo45 joins #TeamIndia's training session here at the Arundel Castle Cricket Club. #WTC23 pic.twitter.com/rI7S2gOZcr
— BCCI (@BCCI) May 30, 2023
16ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇ ಆಫ್ ಪ್ರವೇಶಿಸಿ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲನುಭವಿಸಿದ ನಂತರ ಮುಂಬೈ ಇಂಡಿಯನ್ಸ್ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಲಂಡನ್ಗೆ ತೆರಳಿದ್ದಾರೆ. ಹೊಸ ಅಡಿಡಾಸ್ ಕಿಟ್ನ ನಲ್ಲಿ ರೋಹಿತ್ ಶರ್ಮಾ ಲಂಡನ್ ಚಳಿಯಲ್ಲಿ ಬೆಚ್ಚಗೆ ಫೀಲ್ ಮಾಡುತ್ತಿದ್ದಾರೆ. ಬಿಸಿಸಿಐ ಟ್ವೀಟ್ ಮಾಡಿ "ನಾಯಕ ರೋಹಿತ್ ಶರ್ಮಾ ಅರುಂಡೇಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದು, ತರಬೇತಿಯಲ್ಲಿ ತೊಡಗಿದ್ದಾರೆ ಎಂದು ಬರೆದುಕೊಂಡಿದೆ.
ಮೊದಲ ಟ್ರಿಪ್ನಲ್ಲಿ ಲಂಡನ್ಗೆ ಬಂದಿಳಿದ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಚೇತೇಶ್ವರ ಪೂಜಾರ, ರವಿಚಂದ್ರನ್ ಅಶ್ವಿನ್ ಮತ್ತು ಜಯದೇವ್ ಉನಾದ್ಕತ್ ಅಭ್ಯಾಸ ಮಾಡುತ್ತಿರುವ ಫೊಟೋಗಳನ್ನು ಬಿಸಿಸಿಯ ನಿನ್ನೆ ಹಂಚಿಕೊಂಡಿತ್ತು. ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದ ಚೇತೇಶ್ವರ ಪೂಜಾರ ಸಹ ತಂಡವನ್ನು ಸೇರಿಕೊಂಡಿದ್ದಾರೆ. ಕೌಂಟಿಯಲ್ಲಿ ಪೂಜಾರ ನಾಯಕತ್ವದಲ್ಲಿ ಸಸೆಕ್ಸ್ ಉತ್ತಮ ಪ್ರದರ್ಶನವನ್ನು ನೀಡಿತ್ತು. ಪೂಜಾರ ಶತಕಗಳನ್ನು ಗಳಿಸಿ ಉತ್ತಮ ಫಾರ್ಮ್ನ್ನಲ್ಲಿದ್ದಾರೆ.
-
Training ✅
— BCCI (@BCCI) May 29, 2023 " class="align-text-top noRightClick twitterSection" data="
Now showing🚍: @IPL | #TATAIPL pic.twitter.com/ZasxBxxBgT
">Training ✅
— BCCI (@BCCI) May 29, 2023
Now showing🚍: @IPL | #TATAIPL pic.twitter.com/ZasxBxxBgTTraining ✅
— BCCI (@BCCI) May 29, 2023
Now showing🚍: @IPL | #TATAIPL pic.twitter.com/ZasxBxxBgT
ಬಸ್ನಲ್ಲಿ ಐಪಿಎಲ್ನೋಡಿದ ಟೆಸ್ಟ್ ಟೀಮ್: ಲಂಡನ್ನಲ್ಲಿರುವ ಟೆಸ್ಟ್ ತಂಡ ಐಪಿಎಲ್ ಫೈನಲ್ ಪಂದ್ಯವನ್ನು ಬಸ್ನಲ್ಲಿ ವೀಕ್ಷಣೆ ಮಾಡಿದ್ದಾರೆ. ಬಿಸಿಸಿಐ ಟ್ವಿಟರ್ನಲ್ಲಿ ಆಟಗಾರರು, ಕೋಚ್ ರಾಹುಲ್ ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿ ಬಸ್ನಲ್ಲಿ ಮ್ಯಾಚ್ ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದೆ.
ತಂಡ ಸೇರಲು ಬಾಕಿ ಇರುವ ಆಟಗಾರರು: ಐಪಿಎಲ್ ಪೈನಲ್ಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪ್ರವೇಶ ಪಡೆದಿದ್ದರಿಂದ ಈ ಎರಡು ತಂಡದಲ್ಲಿದ್ದ ಆಟಗಾರರು ಕೊನೆಯ ಟ್ರಿಪ್ನಲ್ಲಿ ಲಂಡನ್ ಪ್ರವಾಸ ಮಾಡಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಜಿಕ್ಯಾ ರಹಾನೆ, ರವೀಂದ್ರ ಜಡೇಜಾ ಮತ್ತು ಗುಜರಾತ್ ಟೈಟಾನ್ಸ್ನಿಂದ ಶುಭಮನ್ ಗಿಲ್, ಕೆಎಸ್ ಭರತ್, ಮೊಹಮ್ಮದ್ ಶಮಿ ಪ್ರಯಾಣ ಬೆಳೆಸಬೇಕಿದೆ.
ಟಿ20ಯಲ್ಲಿ ಫಾರ್ಮ್ನಲ್ಲಿರುವ ಭಾರತದ ಆಟಗಾರರು: ಎರಡು ತಿಂಗಳ ಐಪಿಎಲ್ನಲ್ಲಿ ಭಾರತದ ಆಟಗಾರರು ಉತ್ತಮ ಫಾರ್ಮ್ ತೋರಿದ್ದಾರೆ ಆದರೆ ಇದು ಟೆಸ್ಟ್ಗೆ ಎಷ್ಟು ಸಹಕಾರಿ ಅಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಆರಂಭಿಕ ಶುಭಮನ್ ಗಿಲ್ ಈ ಆವೃತ್ತಿಯ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿದ್ದಾರೆ. ಚೇತೇಶ್ವರ ಪೂಜಾರ ಕೌಂಟಿ ಆಡಿ ಫಾರ್ಮ್ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಇನ್ನೂ ಐಪಿಎಲ್ನಲ್ಲಿ ಫಾರ್ಮ್ಗೆ ಮರಳಿರುವ ರಹಾನೆಯನ್ನು ಟೆಸ್ಟ್ಗೆ ಆಯ್ಕೆ ಮಾಡಲಾಗಿದೆ. ಐಪಿಎಲ್ನಲ್ಲಿ ಶಮಿ ಈ ವರ್ಷ ಅಧಿಕ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಭಾರತದ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್
ಇದನ್ನೂಓದಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್: ಸ್ಟ್ಯಾಂಡ್‌ಬೈ ಆಟಗಾರನಾಗಿ ಯಶಸ್ವಿ ಜೈಸ್ವಾಲ್‌ಗೆ ಅವಕಾಶ