ETV Bharat / sports

ODI World Cup: ಒಂದು ದಿನ ಮುಂಚಿತವಾಗಿ ನಡೆಯಲಿದೆಯೇ ಪಾಕಿಸ್ತಾನದ 2 ವಿಶ್ವಕಪ್‌ ಪಂದ್ಯಗಳು?

ODI World Cup: ಏಕದಿನ ಕ್ರಿಕೆಟ್ ವಿಶ್ವಕಪ್​ ವೇಳಾಪಟ್ಟಿಯಲ್ಲಿ ಪಾಕಿಸ್ತಾನದ ಎರಡು ಪಂದ್ಯಗಳ ದಿನಾಂಕ ಬದಲಾಗುವ ಸಾಧ್ಯತೆ ಇದೆ.

CAB requests BCCI to reschedule England-Pakistan match at Eden Gardens

author img

By

Published : Aug 6, 2023, 7:30 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಏಕದಿನ ಕ್ರಿಕೆಟ್ ವಿಶ್ವಕಪ್​ನ ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ಆಗಲಿದೆ ಎಂದು ಇತ್ತೀಚೆಗೆ ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್​ ಶಾ ಹೇಳಿದ್ದರು. ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ಇಂಗ್ಲೆಂಡ್​ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ದಿನಾಂಕವನ್ನು ಬದಲಿಸುವಂತೆ ಕೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಐಸಿಸಿ ಮತ್ತು ಬಿಸಿಸಿ ಈಚೆಗೆ ಬಿಡುಗಡೆ ಮಾಡಿದ್ದ ವೇಳಾಪಟ್ಟಿಯಲ್ಲಿ ನವೆಂಬರ್​ 12ರಂದು ಇಂಗ್ಲೆಂಡ್​- ಪಾಕಿಸ್ತಾನದ ಪಂದ್ಯ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವನ್ನು ನೆವೆಂಬರ್​ 11ಕ್ಕೆ ಬದಲಿಸುವಂತೆ ಪ್ರಸ್ತಾಪ ಮುಂದಿಟ್ಟಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಪಾಕಿಸ್ತಾನ ಭಾಗವಹಿಸುವ ಕಾರಣ ಪಂದ್ಯಕ್ಕೆ ಹೆಚ್ಚಿನ ಭದ್ರತೆ ಬೇಕಿದೆ. 12ರಂದು ದೀಪಾವಳಿ ಹಬ್ಬ ಇರುವುದರಿಂದ ಭದ್ರತೆಯ ಕೊರತೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಿಎಬಿಗೆ ಮಾಹಿತಿ ನೀಡಿದ್ದು, ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಿದೆ ಎನ್ನಲಾಗಿದೆ.

ಸಿಎಬಿ ಅಧಿಕಾರಿಗಳು ಗುರುವಾರ ನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಬ್ಬದ ದಿನ ಕಾನೂನು, ಸುವ್ಯವಸ್ಥೆ ಕಾಪಾಡುವದು ಕಷ್ಟ ಎಂದು ಹೇಳಿದ್ದು, ಸಿಎಬಿಯು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪತ್ರ ಬರೆದು ದಿನಾಂಕ ಬದಲಿಸುವಂತೆ ಮನವಿ ಮಾಡಿದೆ.

ಭಾರತ-ಪಾಕ್​ ಪಂದ್ಯದ ದಿನಾಂಕವೂ ಬದಲು? : ಈಗಾಗಲೇ ಬಿಡುಗಡೆಯಾದ ವೇಳಾಪಟ್ಟಿಯಂತೆ ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್​ 15ರಂದು ನಡೆಯಲಿದೆ. ಆದರೆ ಉತ್ತರ ಭಾರತದಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುವ ನವರಾತ್ರಿ ಹಬ್ಬ ಇದೇ ದಿನದಿಂದ ಪ್ರಾರಂಭವಾಗುವುದರಿಂದ ಪೊಲೀಸರು ದಿನಾಂಕ ಬದಲಾವಣೆಗೆ ಕೋರಿದ್ದಾರೆ ಎನ್ನಲಾಗಿದೆ. ಅದರಂತೆ, ಪಂದ್ಯ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 14ರಂದು ನಡೆಯುವ ಸಾಧ್ಯತೆ ಗೋಚರಿಸಿದೆ.

ಕೆಲವು ದೇಶಗಳ ಕ್ರಿಕೆಟ್​ ಮಂಡಳಿಗಳು ಪಂದ್ಯಗಳ ನಡುವೆ ಪ್ರಯಾಣಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ್ದವು. ಒತ್ತೊತ್ತಾಗಿ ಪಂದ್ಯಗಳಿರುವುದರಿಂದ ಅಭ್ಯಾಸಕ್ಕೆ ಸಮಯ ಕಡಿಮೆ ಇದೆ ಎಂದು ಹೇಳಲಾಗಿತ್ತು. ಇದರಿಂದಾಗಿ ತಂಡಗಳ ಪ್ರಯಾಣಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುವುದು ಎಂದು ಜಯ್​ ಶಾ ತಿಳಿಸಿದ್ದರು.

ದಿನಾಂಕ ಬದಲಾವಣೆ ಅಷ್ಟೇ, ಸ್ಥಳ ಬದಲಾವಣೆ ಇಲ್ಲ: ಈ ಹಿಂದೆ ಜಯ್​ ಶಾ ಅವರು ವೇಳಾಪಟ್ಟಿ ಬದಲಾವಣೆಯ ಬಗ್ಗೆ ಮಾತನಾಡಿದ್ದು, ದಿನಾಂಕ ಬದಲಾವಣೆ ಆಗುತ್ತದೆಯೇ ಹೊರತು, ಕ್ರೀಡಾಂಗಣ ಬದಲಾಗದು ಎಂದಿದ್ದರು. ಪ್ರಸ್ತುತ ಬಂದಿರುವ ವರದಿಯ ಪ್ರಕಾರ, ಈ ಎರಡು ಪಂದ್ಯಗಳು ಒಂದು ದಿನ ಮುಂಚೆ ನಡೆಯಲಿವೆ. ಆದರೆ ವಿಶ್ವಕಪ್​ ಆರಂಭಕ್ಕೆ ಕೇವಲ 60 ದಿನಗಳು ಬಾಕಿ ಇದ್ದು ಬದಲಾದ ವೇಳಾಪಟ್ಟಿ ಬಿಡುಗಡೆ ಆಗಿಲ್ಲ.

ಎರಡು ಮಹತ್ವದ ಕಾರ್ಯಕ್ರಮಗಳು ಒಟ್ಟಿಗೆ ನಡೆದಾಗ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡುವುದು ಕಷ್ಟವಾಗುತ್ತದೆ. ಭದ್ರತಾ ಸಮಸ್ಯೆಯ ಕಾರಣಕ್ಕೆ ಪಂದ್ಯವನ್ನು ಸ್ಥಳಾಂತರ ಮಾಡುವುದಕ್ಕಿಂತ ಒಂದು ದಿನ ಮುಂಚಿತವಾಗಿ ನಡೆಸುವುದೊಳಿತು ಎಂದು ಸಿಎಬಿ ಬಿಸಿಸಿಐಗೆ ಮಾಡಿರುವ ಮನವಿಯಲ್ಲಿ ತಿಳಿಸಿದೆ. ಪಂದ್ಯದ ಆಯೋಜನೆಯ ಬಗ್ಗೆ ಸಿಎಬಿ ಅಧಿಕಾರಿಗಳು ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಡುಗಡೆಯಾದ ವೇಳಾಪಟ್ಟಿಯಂತೆ ಈಡನ್ ಗಾರ್ಡನ್​ನಲ್ಲಿ ಅಕ್ಟೋಬರ್ 28ರಂದು ನೆದರ್ಲ್ಯಾಂಡ್ಸ್- ಬಾಂಗ್ಲಾದೇಶ, ಅಕ್ಟೋಬರ್ 31ರಂದು ಪಾಕಿಸ್ತಾನ- ಬಾಂಗ್ಲಾದೇಶ, ನವೆಂಬರ್ 5ರಂದು ದಕ್ಷಿಣ ಆಫ್ರಿಕಾ -ಭಾರತ, ನವೆಂಬರ್ 12ರಂದು ಇಂಗ್ಲೆಂಡ್- ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳು ನಡೆಯಲಿವೆ. ನವೆಂಬರ್ 16ರಂದು ಟೂರ್ನಿಯ 2ನೇ ಸೆಮಿಫೈನಲ್ ಇದೇ ಮೈದಾನದಲ್ಲಿ ನಿಗದಿಯಾಗಿದೆ.

ಅಕ್ಟೋಬರ್​ 5ರಿಂದ ಪ್ರಾರಂಭವಾಗುವ ವಿಶ್ವಕಪ್​ಗೆ ಕೇವಲ 100 ದಿನಗಳು ಬಾಕಿ ಇದ್ದಾಗ ಐಸಿಸಿ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಇದಕ್ಕೂ ಮೊದಲು ನಡೆದ 2019 ಮತ್ತು 2015ರ ವಿಶ್ವಕಪ್​ನ ವೇಳಾಪಟ್ಟಿಯನ್ನು ಒಂದು ವರ್ಷಕ್ಕೆ ಮುನ್ನ ಬಿಡುಗಡೆ ಮಾಡಲಾಗಿತ್ತು. ಆದರೆ ಭಾರತದಲ್ಲಿ ನಡೆಯುವ ಪಂದ್ಯಕ್ಕೆ ಪಾಕಿಸ್ತಾನ ಆಗಮಿಸುವ ವಿಚಾರದಲ್ಲಿನ ಕೆಲವು ಗೊಂದಲದಿಂದಾಗಿ ವೇಳಾಪಟ್ಟಿಯ ಬಿಡುಗಡೆ ತಡವಾಗಿತ್ತು. ಈಗಲೂ ಪಾಕಿಸ್ತಾನ ಈ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಂಡಿಲ್ಲ. ಐಸಿಸಿ ಭದ್ರತೆಯ ಭರವಸೆಯನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಮನವಿ ಮಾಡಿದೆ ಎಂದು ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: IND vs WI 2nd T20: ಮೊದಲ ಪಂದ್ಯದ ಸೋಲಿನ ಸೇಡು ತೀರಿಸಲು ಹಾರ್ದಿಕ್​ ​ಪಡೆ ರೆಡಿ.. ಅಬ್ಬರಿಸಬೇಕಿದೆ ಐಪಿಎಲ್​ ಸ್ಟಾರ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.