ಮ್ಯಾಂಚೆಸ್ಟರ್: ಭಾರತದ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-2 ಅಂತರದ ಹಿನ್ನಡೆಯಲ್ಲಿದೆ. ಇದೀಗ ಫೈನಲ್ ಪಂದ್ಯದ ಗೆಲುವಿಗೆ ಇಬ್ಬರು ಹಿರಿಯ ಆಟಗಾರರಿಗೆ ಮಣೆ ಹಾಕಿದೆ.
ಸೆಪ್ಟೆಂಬರ್ 10ರಿಂದ ಮ್ಯಾಂಚೆಸ್ಟರ್ನಲ್ಲಿ ಬಲಾಢ್ಯ ಭಾರತ-ಇಂಗ್ಲೆಂಡ್ ನಡುವೆ 5ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಇಡೀ ಕ್ರಿಕೆಟ್ ಜಗತ್ತೇ ಕುತೂಹಲದ ಕಣ್ಣುಗಳಿಂದ ಕಾಯುತ್ತಿರುವ ಈ ಪಂದ್ಯಕ್ಕೆ ಆತಿಥೇಯರು 16 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಉಪನಾಯಕ ಜೋಸ್ ಬಟ್ಲರ್ ಪಿತೃತ್ವ ರಜೆ ತೆಗೆದುಕೊಂಡು 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಅವರು ಫೈನಲ್ ಪಂದ್ಯಕ್ಕಾಗಿ ತಂಡ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಸ್ಪಿನ್ನರ್ ಜ್ಯಾಕ್ ಲೀಚ್ಗೂ ಅವಕಾಶ ನೀಡಲಾಗಿದೆ.
-
We've named a 16-player squad for the fifth LV= Insurance Test match against India 🏏
— England Cricket (@englandcricket) September 7, 2021 " class="align-text-top noRightClick twitterSection" data="
🏴 #ENGvIND 🇮🇳
">We've named a 16-player squad for the fifth LV= Insurance Test match against India 🏏
— England Cricket (@englandcricket) September 7, 2021
🏴 #ENGvIND 🇮🇳We've named a 16-player squad for the fifth LV= Insurance Test match against India 🏏
— England Cricket (@englandcricket) September 7, 2021
🏴 #ENGvIND 🇮🇳
ಇದನ್ನೂ ಓದಿ: Team India: ಓವಲ್ ಅಂಗಳದಲ್ಲಿ ಗೆದ್ದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾ ಸಂಭ್ರಮ: ವಿಡಿಯೋ
ಇಂಗ್ಲೆಂಡ್ ತಂಡ ಇಂತಿದೆ:
ಜೋ ರೂಟ್ (ಕ್ಯಾಪ್ಟನ್), ಮೊಯಿನ್ ಅಲಿ, ಜೆಮ್ಸ್ ಆ್ಯಂಡರ್ಸನ್, ಬೈರ್ಸ್ಟೋ, ರೋರಿ ಬರ್ನ್ಸ್, ಜೋಶ್ ಬಟ್ಲರ್, ಸ್ಯಾಮ್ ಕರ್ರನ್, ಹಸೀಬ್ ಹಮೀದ್, ಜ್ಯಾಕ್ ಲೀಚ್, ಡೇವಿಡ್ ಮಲನ್, ಓವರ್ಟೊನ್, ಒಲಿ ಪೋಪ್, ರಾಬಿನ್ಸನ್, ಕ್ರಿಸ್ ವೋಕ್ಸ್ ಹಾಗು ಮಾರ್ಕ್ ವುಡ್.
ಸರಣಿಯಲ್ಲಿ ಈಗಾಗಲೇ ಟೀಂ ಇಂಡಿಯಾ ಮುನ್ನಡೆಯಲ್ಲಿದ್ದು ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಗೆ ಇಂಗ್ಲೆಂಡ್ ತಂಡ ಸಿಲುಕಿದೆ. ಹೀಗಾಗಿ ಮಹತ್ವದ ಬದಲಾವಣೆಗಳೊಂದಿಗೆ ಫೈನಲ್ ಪಂದ್ಯಕ್ಕಾಗಿ ಅಣಿಯಾಗುತ್ತಿದೆ.